• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್: ರಾಜ್ಯ ಸರ್ಕಾರಕ್ಕೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

|

ಬೆಂಗಳೂರು, ಮಾ. 21: ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಕ್ಕೆ ಎರಡು ಮಹತ್ವದ ಸಲಹೆಗಳನ್ನು ರವಾನಿಸಿದ್ದಾರೆ. ಜನತಾ ಕರ್ಫ್ಯೂ ಪಾಲನೆ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಮತ್ತೆರಡು ಪ್ರಮುಖ ಸಲಹೆಗಳನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದ್ದಾರೆ.

ಕೊರೊನಾ ವೈರಸ್ ಹರಡುವ ಚೈನ್ ಬ್ರೇಕ್ ಪ್ರಯತ್ನ ಮಾಡುವುದು ಜನತಾ ಕರ್ಫ್ಯೂ ಉದ್ದೇಶ. ನಂತರ ಮುಂದಿನ ದಿನಗಳಲ್ಲಿ ಮತ್ತಷ್ಟು ಜಾಗ್ರತೆ ವಹಿಸಲು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಮಹತ್ವದ ಎರಡು ಸೂಚನೆಗಳನ್ನು ಕೊಟ್ಟಿದ್ದಾರೆ.

ಭಾರತದಲ್ಲಿ 300ರ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಪ್ರಧಾನಿ ಸೂಚನೆ ಹಿನ್ನೆಲೆಯಲ್ಲಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಜೊತೆಗೆ ಪ್ರಧಾನಿಯವರ ಸೂಚನೆಗಳನ್ನು ವಿವರಿಸಿದ್ದಾರೆ. ಜೊತೆಗೆ ಜನತಾ ಕರ್ಫ್ಯೂ ವಿಚಾರವಾಗಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೊಟ್ಟಿದ್ದ ಪ್ರಕರಣ ದಾಖಲಿಸುವ ಹೇಳಿಕೆಗೆ ಗೊಂದಲ ಸೃಷ್ಟಿಸಬೇಡಿ ಎಂದು ತಾಕೀತು ಮಾಡಿದ್ದಾರೆ.

ಕೊರೊನಾ ವೈರಸ್ ತಡೆಯಲು ಪ್ರಧಾನಿ ಮೋದಿ ಕೊಟ್ಟ ಮಹತ್ವದ ಸೂಚನೆ

ಕೊರೊನಾ ವೈರಸ್ ತಡೆಯಲು ಪ್ರಧಾನಿ ಮೋದಿ ಕೊಟ್ಟ ಮಹತ್ವದ ಸೂಚನೆ

ಇಡೀ ಜಗತ್ತಿಗೆ ಕಂಠಕವಾಗಿರುವ ಕೊರೊನಾ ವೈರಸ್ ತಡೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳಿಗೆ ಎಡರು ಸೂಚನೆಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವಂತೆ ಪಾಳಿಸುವಂತೆ ಹೇಳಿದ್ದಾರೆಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೊದಲನೆಯದಾಗಿ ಮುಂದಿನ ಎರಡು ವಾರಗಳ ಕಾಲ ನಾವು ಅತ್ಯಂತ ಜಾಗ್ರತರಾಗಿಬೇಕು. ನಾವೀಗ ವೈರಸ್ ಹರಡಿರುವ 3ನೇ ವಾರದಲ್ಲಿದ್ದೇವೆ. ಮುಂದಿನ ಎರಡು ವಾರಗಳು ಅಂದರೆ 4 ಹಾಗೂ 5ನೇ ವಾರಗಳಲ್ಲಿ ಅತ್ಯಂತ ಜಾಗ್ರತೆ ವಹಿಸಿ ವೈರಸ್ ಹರಡುವುದನ್ನು ತಡೆಯಬೇಕು ಎಂದು ಪ್ರಧಾನಿ ರಾಜ್ಯಗಳಿಗೆ ಸೂಚನೆ ಕೊಟ್ಟಿದ್ದಾರೆ. ಇದಕ್ಕಾಗಿಯೆ ಜನತಾ ಕರ್ಫ್ಯೂ ಪಾಲಿಸುವಂತೆ ಮನವಿ ಮಡಿಕೊಂಡಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯ ರಕ್ಷಣೆ

ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯ ರಕ್ಷಣೆ

ಎರಡನೇಯದಾಗಿ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಾವು ಮೊದಲು ರಕ್ಷಣೆ ಮಾಡಬೇಕೆಂದು ಹೇಳಿದ್ದಾರೆ. ವೈದ್ಯರು ಹಾಗೂ ಪೊಲೀಸರು ನೇರವಾಗಿ ಜನರ ಸಂಪರ್ಕದಲ್ಲಿ ಇರುತ್ತಾರೆ. ಹೀಗಾಗಿ ಅವರ ಆರೋಗ್ಯ ರಕ್ಷಣೆ ಸರ್ಕಾರದ ಮೊದಲ ಕೆಲಸವಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚನೆ ಕೊಟ್ಟಿದ್ದಾರೆ. ಅವರ ಸೂಚನೆಯಂತೆ ಎಲ್ಲ ಪೊಲೀಸ್ ಸಿಬ್ಬಂದಿ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಉಪಯೋಗ ಮಾಡಲೇಬೇಕು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆಂದು ಬೊಮ್ಮಾಯಿ ಅವರು ಸಭೆಯ ಬಳಿಕ ಹೇಳಿದ್ದಾರೆ.

ಕೊರೊನಾ; ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಒಂದೊಂದು ದಿಕ್ಕು!

ಯಾವುದೇ ಕೇಸ್ ಹಾಕವುದಿಲ್ಲ: ಬೊಮ್ಮಾಯಿ

ಯಾವುದೇ ಕೇಸ್ ಹಾಕವುದಿಲ್ಲ: ಬೊಮ್ಮಾಯಿ

ರಾಜ್ಯದಲ್ಲಿ ಬಲವಂತದ ಜನತಾ ಕರ್ಫ್ಯೂ ಇಲ್ಲ. ಯಾವುದೇ ಪ್ರಕರಣವನ್ನು ಕರ್ಫ್ಯೂ ಮುರಿಯುವವರ ಮೇಲೆ ಹಾಕುವುದಿಲ್ಲ. ಜನರು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿರಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಜನರು ಸಹಕರಿಸಬೇಕು ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಾಳೆ ಮನೆಯಿಂದ ಹೊರಗೆ ಬರುವವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿಕೆ ಕೊಟ್ಟಿದ್ದರು. ಅದನ್ನು ಗೃಹಸಚಿವ ಬೊಮ್ಮಾಯಿ ಅವರು ನಿರಾಕರಿಸಿದ್ದಾರೆ.

ರಾಜ್ಯದ ಗಡಿಭಾಗದಲ್ಲಿ ತೀವ್ರ ನಿಗಾ ವಹಿಸಲಾಗಿದೆ

ರಾಜ್ಯದ ಗಡಿಭಾಗದಲ್ಲಿ ತೀವ್ರ ನಿಗಾ ವಹಿಸಲಾಗಿದೆ

ಮಾರ್ಚ್‌ 31ರವರೆಗೆ ನೆರೆಯ ರಾಜ್ಯಗಳ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗುವುದು. ಪ್ರಮುಖವಾಗಿ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಾಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ನಿಗಾ ಇಡಲಾಗಿದೆ. ಆ ರಾಜ್ಯಗಳ ಗಡಿ ಭಾಗದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ರಾಜ್ಯದ ಗಡಿಯನ್ನು ಬಂದ್ ಮಾಡಬೇಕೊ ಬೇಡವೊ ಎಂಬುರದ ಬಗ್ಗೆ ಮೂರು ದಿನಗಳ ಬಳಿಕ ತೀರ್ಮಾನ ಮಾಡಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕೊರೊನಾ ವೈರಸ್: ಏರ್ ಪೋರ್ಟ್ ಗಳಲ್ಲಿ ಹೇಗಿರುತ್ತೆ ಟ್ರೀಟ್ ಮೆಂಟ್?

ಖಡ್ಡಾಯವಾಗಿ ಹೋಮ್ ಕ್ವಾರೈಂಟೈನ್ ಮಾಡಲೇಬೇಕು

ಖಡ್ಡಾಯವಾಗಿ ಹೋಮ್ ಕ್ವಾರೈಂಟೈನ್ ಮಾಡಲೇಬೇಕು

ವಿದೇಶದಿಂದ ಬಂದವರು ಖಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಇರಲೇಬೇಕು. ಇಲ್ಲದೇ ಇದ್ದರೆ ಅಂಥವರನ್ನು ಆಸಪತ್ರೆಗಳ ಐಸೋಲೇಷನ್ ವಾರ್ಡ್‌ಗೆ ಸೇರಿಸಲಾಗುವುದು. ಹೋಮ್ ಕ್ವಾರೈಂಟೈನ್ ಮಾಡದೇ ನಾಗರಾಜ್ ಎಂಬ ವ್ಯಕ್ತಿ ಕೊಯಿಮತ್ತೂರಿಗೆ ಓಡಿ ಹೋಗಿದ್ದ, ಪೊಲೀಸರು ಅವನನ್ನು ಹಿಡಿದು ತಂದು ಐಸೋಲೇಷನ್ ವಾರ್ಡ್‌ಗೆ ದಾಖಲು ಮಾಡಿದ್ದಾರೆ ಎಂದು ಗೃಹಸಚಿವ ಬೊಮ್ಮಾಯಿ ಹೇಳಿದ್ದಾರೆ.

English summary
PM Narendra Modi has given important instructions to state governments to control coronavirus. Home Minister Basavaraj Bommai has instructed senior police officers to act accordingly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X