Karnataka Rains: ಕೆಲವೇ ಕ್ಷಣಗಳಲ್ಲಿ ಈ 7ಜಿಲ್ಲೆಗಳಿಗೆ ವ್ಯಾಪಕ ಮಳೆ, ಉಳಿದೆಡೆ ಒಣಹವೆ ಎಚ್ಚರಿಕೆ

ಬೆಂಗಳೂರು, ಜನವರಿ 15: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಕೊಂಚ ತಿವ್ರತೆ ಪಡೆದುಕೊಂಡಿದೆ. ಅದು ಚಂಡಮಾರುತ ಪರಿಚಲನೆಯಾಗಿ ಬದಲಾಗಿದೆ. ಇದರ ಪ್ರಭಾವದಿಂದ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಮುನ್ಸುಚನೆ ಸಿಕ್ಕಿದೆ. ಮಳೆ ಉದ್ದೇಶಿತ ಜಿಲ್ಲೆ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಒಣಹವೆ, ಕೊಂಚ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ರಾಜ್ಯದ ಸುಮಾರು 07 ಜಿಲ್ಲೆಗಳಲ್ಲಿ ಇಂದು ಬುಧವಾರ ಹಗುರದಿಂದ ಸಾಧಾರಣ ಮಳೆ ಆಗಿದೆ. ಕೆಲವು ಪ್ರದೇಶಗಲ್ಲಿ ಬಿರುಸ ಮಳೆ ಬೀಳುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ನೆನ್ನೆ ಬೆಳ್ಳಂಬೆಳಗ್ಗೆಯೇ ತಂತುರು ಮಳೆ ಆರಂಭವಾಗಿತ್ತು. ಇಡೀ ದಿನ ಉತ್ತಮ ಮಳೆಯ ಲಕ್ಷಣಗಳು ಕಂಡು ಬಂದವು. ಇಂದು ಬೆಂಗಳೂರಿಗೆ ಅಷ್ಟಾಗಿ ಮಳೆ ಬೀಳುವ ಸಾಧ್ಯತೆ ಇಲ್ಲ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 05 ದಿನ ಒಣಹವೆ ಮುಂದುವರಿಯಲಿದೆ.

IMD Heavy Rain Issued for Karnataka on January 15th Check Karnataka Rain Forecast

ಕರಾವಳಿಯ ಎರಡು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆ ಆಗಲಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಕೊಂಚ ಮಳೆ ಹೆಚ್ಚೇ ಸುರಿಯಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಇಲ್ಲೆಲ್ಲ ಮಬ್ಬು ವಾತಾವರಣ ಕಳೆದ ಮೂರು ದಿನಗಳಿಂದ ಕವಿದಿದೆ.

ರಾಜ್ಯಾದ್ಯಂತ ಒಣ ಹವೆ ಸಾಧ್ಯತೆ

ರಾಜ್ಯಾದ್ಯಂತ ನಾಳೆ ಗುರುವಾರದಿಂದ (ಜನವರಿ 16) ಒಣಹವೆ ಮುಂದುವರಿಯುವ ಎಲ್ಲ ಸಾಧ್ಯತೆ ಇದೆ. ಮಳೆ ಇನ್ನು ಮುಂದೆ ಕಡಿಮೆ ಆಗಲಿದ್ದು, ಚಳಿ ಪ್ರಮಾಣ ಮತ್ತೆ ಹೆಚ್ಚಾಗುವ ಸಂಭವವಿದೆ. ಈ ತಿಂಗಳಾಂತ್ಯಕ್ಕೆ ಒಂದಷ್ಟು ಚಳಿ ಪ್ರಭಾವ ಇರಲಿದೆ ಎಂದು ಹವಾಮಾನ ಇಲಾಖೆ ಇಂದಿನ ಮುನ್ಸೂಚನಾ ವರದಿ ತಿಳಿಸಿದೆ.

ಜನವರಿ 20ರ ತನಕ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಉತ್ತರ ಒಳನಾಡಿನ ಭಾಗದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರಬಹುದು. ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಐಎಂಡಿ ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+