Karnataka Rains: ಚಂಡಮಾರುತ ಪ್ರಸರಣ! ಇಂದಿನಿಂದ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ ಆರ್ಭಟ, ಯೆಲ್ಲೋ ಅಲರ್ಟ್

ಬೆಂಗಳೂರು, ಜುಲೈ 12: ಕರ್ನಾಟಕದಾದ್ಯಂತ ಅಬ್ಬರಿಸಿದ್ದ ಮುಂಗಾರು ಮಳೆ ರಾಜ್ಯ ಕೆಲವು ಭಾಗಗಳಲ್ಲಿ ಮಾತ್ರವೇ ಮುಂದುವರಿದಿದೆ. ಇನ್ನೂ ಸಮುದ್ರ ಮೇಲ್ಮೈ ಹಾಗೂ ಉತ್ತರ ಭಾರತದ ಭೂಮಿ ಮೇಲ್ಮೈನಲ್ಲಿ ಉಂಟಾದ ವಾಯುಭಾರ ಕುಸಿತ, ಚಂಡಮಾರುತ ಪ್ರಸರಣದಿಂದಾಗಿ ವಿವಿಧೆಡೆ ಭಾರೀ ಮಳೆ ಆರ್ಭಟ ಕಂಡು ಬರಲಿದೆ. ನೆನ್ನೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ.

ಹವಾಮಾನ ಇಲಾಖೆ ಕರ್ನಾಟಕ ಕೇಂದ್ರದ ಪ್ರಕಾರ, ಮುಂದಿನ ಒಂದು ವಾರ ಕರ್ನಾಟಕದ ಸುಮಾರು 07 ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ. ಮುಂಗಾರಿನ ಅಬ್ಬರ ಜೋರಾಗಿರಲಿದೆ. ಕೆಲವೆಡೆ ಮಬ್ಬು ವಾತಾವರಣ ಕಂಡು ಬರಲಿದೆ. ಅರಬ್ಬಿ ಸಮುದ್ರ ಮಟ್ಟದಲ್ಲಿ ಸೈಕ್ಲೋನ್ ಸರ್ಕುಲೇಷನ್ ಸೃಷ್ಟಿಯಾಗಿದೆ. ಇದರಿಂದ ಕರ್ನಾಟಕ ಕರಾವಳಿಗೆ ಮುಂದಿನ ದಿನಗಳಲ್ಲಿ ಭಾರೀ ಮಳೆ ಆಗಬಹುದು ಎಂಬ ಮುನ್ಸೂಚನೆ ಇದೆ.

IMD Heavy Rain alert for Karnataka 7 Districts Due to Cyclonic Circulation Yellow Alert Issued

ಜುಲೈ 12ರಿಂದ ಮುಂದಿನ 07 ದಿನ ಕರ್ನಾಟಕ ಕರಾವಳಿ ಹಾಗೂ ಮಲೆನಾಡಿನ ಭಾಗದ ಜಿಲ್ಲೆಗಳಲ್ಲಿ 60.5 ರಿಂದ 110 ಮಿಲಿ ಮೀಟರ್ ಮಳೆ ಆಗುವ ನಿರೀಕ್ಷೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಪ್ರಯುಕ್ತ ಐಎಂಡಿ 'ಯೆಲ್ಲೋ ಅಲರ್ಟ್' ಘೋಷಣೆ ಮಾಡಿದೆ.

ಜೋರು ಮಳೆ ಎಚ್ಚರಿಕೆ

ಬೆಂಗಳೂರು ನಗರ, ತುಮಕೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ದಾವಣೆಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮುಂದಾದ ಕಡೆಗಳಲ್ಲಿ ಹುಗರದಿಂದ ಸಾಮಾನ್ಯ ಮಳೆ ಆಗುತ್ತಿದೆ. ಈ ಮಳೆ ಇನ್ನು ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಸಮುದ್ರ ಮೇಲಿನ ವೈಪರೀತ್ಯಗಳು ತೀವ್ರಗೊಂಡರೆ ಮುಂಗಾರು ಮತ್ತಷ್ಟು ಚುರುಕಾಗಬಹುದು. ಆಗ ಈ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಹವಾಮಾನ ವರದಿ

ಇನ್ನೂ ಬೆಂಗಳೂರು ನಗರದಲ್ಲಿ ಜುಲೈ 16ರವರೆಗೆ ಮಬ್ಬು ವಾತಾವರಣ, ಕಡಿಮೆ ತಾಪಮಾನ ಕಂಡು ಬರಲಿದೆ. ಆಗಾಗ ನಗರದ ವಿವಿಧೆಡೆ ಜೋರು ಮಳೆ ನಿರೀಕ್ಷೆ ಇದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ನೆನ್ನೆ ಶುಕ್ರವಾರ ನಗರದಲ್ಲಿ ವಿದ್ಯಾಪೀಠ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದೊಡ್ಡಬಿದರಕಲ್ಲು, ಯಲಹಂಕ, ಕೋರಮಂಗಲ, ಪಟ್ಟಾಭಿರಾಮನಗರ, ಕೆಂಗೇರಿ, ಹೆಮ್ಮಿಗೆಪುರ, ಹಂಪಿನಗರ ಸೇರಿದಂತೆ ಅನೇಖ ಬಡಾವಣೆಗಳಲ್ಲಿ ಅರ್ಧಗಂಟೆ ಹೊತ್ತು ಜೋರು ಮಳೆ ಆಯಿತು. ನಗರಾದ್ಯಂತ ಇಂದು ಸಹ ತಂಪು ವಾತವರಣವೇ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+