Karnataka Rains: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 3 ದಿನ ಮಳೆಯೋ ಮಳೆ

ಬೆಂಗಳೂರು ಏಪ್ರಿಲ್ 17: ಕಳೆದ ದಿನ ಸುರಿದ ಭಾರೀ ಮಳೆಗೆ ಬೆಂಗಳೂರು ವಾತಾವರಣ ತಂಪಾಗಿದೆ. ಪೂರ್ವ ಮುಂಗಾರು ಮಳೆಗೆ ಸಿಲಿಕಾನ್ ಸಿಟಿ ಜನ ಬಿಸಿಲಿನ ಬೇಗೆಯಿಂದ ಕೊಂಚ್ ರಿಲೀಫ್ ಆಗಿದ್ದಾರೆ. ನಗರದಲ್ಲಿ ಬುಧವಾರ (ಏಪ್ರಿಲ್ 16) ಧಾರಾಕಾರ ಮಳೆಯಾಗಿದ್ದು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಜೆ ಮಳೆಯಾಗಿದ್ದರಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಅಲ್ಲದೆ ಇಂದೂ (ಏಪ್ರಿಲ್ 17) ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಹೌದು ಬೆಂಗಳೂರಿನಲ್ಲಿಂದು ಎಂದಿಗಿಂತ ಬಿಸಿಲಿನ ತಾಪಮಾನ ಕಡಿಮೆಯಾಗಿರಲಿದೆ. ಜೊತೆಗೆ ಮಧ್ಯಾಹ್ನದ ನಂತರ ಕಪ್ಪು ಕಾರ್ಮೋಮೋಡ ಆವರಿಸಲಿದ್ದು ಗುಡುಗು, ಮಿಂಚು, ಗಾಳಿಯೊಂದಿಗೆ ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಅಲ್ಲದೆ ಈ ಬಾರಿ ಪೂರ್ವ ಮುಂಗಾರು ಮಳೆ ಕಳೆದ ಬಾರಿಗಿಂತ ಉತ್ತಮವಾಗಿರಲಿದೆ ಎಂದು ಹೇಳಿದೆ.

IMD has predicted heavy rains in many districts of Karnataka including Bengaluru from April 17 to 20

ಸಾಮಾನ್ಯವಾಗಿ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಮಾರುತಗಳು ಆಗಮಿಸುತ್ತವೆ. ಅದಕ್ಕೂ ಮುನ್ನ ಅಂದರೆ ಏಪ್ರಿಲ್ ನಂತರ ಮೇ ತಿಂಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಹೀಗಾಗಿ ಈ ಬಾರಿ ಪೂರ್ವ ಮುಂಗಾರು ಮಳೆ ಜೋರಾಗಿರಲಿದ್ದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದೀಗ ರಾಜ್ಯದೆಲೆಡೆ ಮಳೆ ವರದಿ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

ಕರ್ನಾಟಕದಲ್ಲಿಂದು ಎಲ್ಲಾಗಲಿದೆ ಮಳೆ?

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪಗೊಂಡ ಪರಿಣಾಮ ಇಂದು ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುವ ಸೂಚನೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ಚಿಕ್ಕಮಗಳೂರು, ಉಡುಪಿ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ, ಗದಗ, ದಕ್ಷಿಣ ಕನ್ನಡದಲ್ಲಿ ಜೋರು ಮಳೆ ಬೀಳಲಿದೆ.

IMD has predicted heavy rains in many districts of Karnataka including Bengaluru from April 17 to 20

ಇನ್ನೂ ರಾಯಚೂರು, ಕೊಪ್ಪಳ, ಬೆಳಗವಾವಿ, ಉತ್ತರ ಕನ್ನಡ, ವಿಜಯಪುರ, ಬಳ್ಳಾರಿ, ಯಾದಗಿ, ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ಬೀದರ್ ಮತ್ತಿತರೆಡೆ ಒಣಹವೆ ಮುಂದುವರೆಯಲಿದ್ದು ವೇಗವಾಗಿ ಗಾಳಿ ಬೀಸಲಿದೆ.

ಅಲ್ಲದೆ ಇಂದಿನಿಂದ ರಾಜ್ಯದಲ್ಲಿ ಮುಂದಿನ ಮೂರು ದಿನಗಳ (ಏಪ್ರಿಲ್ 17 ರಿಂದ ಏಪ್ರಿಲ್ 20ರವರೆಗೆ) ಕಾಲ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ಹಲವೆಡೆ ಕಳೆದ ದಿನ (ಏಪ್ರಿಲ್ 16) ಭಾರೀ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು ಗೌರಸಮುದ್ರ ದೇವಾಲಯ ಬಳಿ ಮೂರು ಮರಗಳು ಮರ ಬಿದ್ದು ಬಿರುಕುಗೊಂಡಿವೆ. ಇನ್ನೂ ಹಾವೇರಿಯಲ್ಲಿ ಸುರಿದ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಕಂಬಗಳು ಉರುಳಿ ಬಿದ್ದಿವೆ. ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಇನ್ನೂ ಒಂದು ವಾರ ಕಾಲ ಮುಂದುವರೆಯಲಿದ್ದು ಏಪ್ರಿಲ್ 20ರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಮುನ್ನೆಚ್ಚರಿಕೆಗಳು:-

* ಈ ಬಾರಿ ಪೂರ್ವ ಮುಂಗಾರು ಮಳೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಹೊರಗಡೆ ಹೋಗುವ ಮುನ್ನ ಛತ್ರಿಯನ್ನಿಟ್ಟುಕೊಂಡು ಹೋಗುವುದು ಉತ್ತಮ.

* ವಾಹನ ಸವಾರರು ರೇನ್ ಕೋರ್ಟ್ ಜೊತೆಯಾಗಿಟ್ಟುಕೊಂಡರೆ ಮಳೆ ಬಂದಾಗ ಒದ್ದೆಯಾಗುವುದನ್ನು ತಪ್ಪಿಸಬಹುದು.

* ಮಳೆ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವುದರಿಂದ ಕೊಂಚ ಬಿಸಿ ನೀರು ಕುಡಿಯುವುದು ಮತ್ತು ಆಹಾರ ಬಿಸಿಯಾಗಿರುವಾಗಲೇ ಸೇವನೆ ಮಾಡುವುದು ಒಳ್ಳೆಯದು

* ಅಲ್ಲದೆ ನಿಮ್ಮೊಂದಿಗೆ ಬೆಚ್ಚಗಿನ ಬಟ್ಟೆಗಳನ್ನು ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಮಳೆ ಬಂದಾಗ ದೇಹವನ್ನು ಬೆಚ್ಚಗಿಡುವುದು ತುಂಬಾ ಮುಖ್ಯ.

* ಈ ಸಮಯದಲ್ಲಿ ಸ್ವಚ್ಚತೆ ತುಂಬಾ ಮುಖ್ಯ ಮಳೆ ಬಂದಾಗ ಹೊರಗಿನಿಂದ ಮನೆ ಒಳಗೆ ಪ್ರವೇಶಿಸಿದರೆ ಸ್ನಾನ ಮಾಡುವುದನ್ನು ಮರೆಯಬೇಡಿ. ಇದರಿಂದ ಯಾವುದೇ ಸಾಂಕ್ರಾಮಿಕ ರೋಗಗಳಿಂದ ನೀವು ದೂರವಿರಬಹುದು.

* ಜೊತೆಗೆ ನಿಮ್ಮೊಂದಿಗೆ ವಿಕ್ಸ್ ಅಥವಾ ವಿಕ್ಸ್ ಚಾಕೊಲೇಟ್, ಲವಂಗಾ ಇಟ್ಟುಕೊಂಡಿರಿ. ಇದು ಕೂಡ ಮಳೆಗಾಲದಲ್ಲಿ ಅಗತ್ಯ ಎನಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+