ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಭೂ ಮಂಜೂರು: ಬಂಗಾರಪೇಟೆ ಶಾಸಕರಿಗೆ ಟ್ರಬಲ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜೂ.18. ಅಕ್ರಮ ಭೂ ಮಂಜೂರು ಪ್ರಕರಣದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ತಮ್ಮ ತಾಯಿ ಹೆಸರಿಗೆ ಅಕ್ರಮ ಭೂಮಿಯನ್ನು ಮಂಜೂರಾತಿ ಮಾಡಲಾಗಿದೆ ಎಂದು ಹೂಡಿದ್ದ ಖಾಸಗಿ ದೂರಿನ ಸಂಬಂಧ ನಗರದ ಜನಪ್ರತಿನಿಧಿಗಳ ವಿಶೇಷ ಕೊರ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶ ನೀಡಿದೆ.

ಕೋಲಾರ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಲ್ಲಿಸಿದ ಖಾಸಗಿ ದೂರನ್ನು ಆಲಿಸಿದ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಶ ಬಿ.ಜಯಂತ್ ಕುಮಾರ್ ಈ ಆದೇಶ ನೀಡಿದ್ದಾರೆ.

 ಇ.ಡಿ ತನಿಖೆ ಬೇಡ ಎನ್ನುವುದು ಕಾಂಗ್ರೆಸ್ ನಾಯಕರ ಗೂಂಡಾಗಿರಿ: ಈಶ್ವರಪ್ಪ ಇ.ಡಿ ತನಿಖೆ ಬೇಡ ಎನ್ನುವುದು ಕಾಂಗ್ರೆಸ್ ನಾಯಕರ ಗೂಂಡಾಗಿರಿ: ಈಶ್ವರಪ್ಪ

ಅರ್ಜಿದಾರರ ವಾದ ಆಲಿಸಿದ ಬಳಿಕ ದೂರುದಾರರು ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸದೆ ಇರುವುದನ್ನು ಗಮನಹಿಸಿದ ನ್ಯಾಯಾಲಯ, ಕೂಡಲೇ ಎಫ್ ಐಆರ್

Illegal land allotment: Bangarpet MLA is in trouble

ದಾಖಲಿಸಿಕೊಂಡು ಜು.8ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಯ ಕೋಲಾರ ಪೋಲೀಸ್ ಉಪಾಧೀಕ್ಷಕರಿಗೆ ನಿರ್ದೇಶನ ನೀಡಿದೆ.

ಬಂಗಾರಪೇಟೆ ಕಾಂಗ್ರೆಸ್ ಶಾಸಕರು ಮಾತ್ರವಲ್ಲದೆ ಈ ಪ್ರಕರಣದಲ್ಲಿ ಅವರ ತಾಯಿ ಮುನಿಯಮ್ಮ, ಪ್ರಸ್ತುತ ಮಳವಳ್ಳಿ ತಹಸಿಲ್ದಾರ್ ಆಗಿರುವ ವಿಜಯಣ್ಣ, ಭೂ ಮಂಜೂರಾತಿ ಸಮಿತಿಯ ಸದಸ್ಯ ರಾಗಿದ್ದ ತಿಮ್ಮರಾಯಪ್ಪ, ಸುಜಾತ, ಚಲಪತಿ ಮತ್ತಿರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅವರೂ ಸಹ ಇದೀಹ ತನಿಖೆಯನ್ನು ಎದುರಿಸಲೇಬೇಕಾಗಿದೆ. ಶಾಸಕರ ಜೊತೆ ಅವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಶಾಸಕರು ವಿಶೇಷ ಕೋರ್ಟ್ ವಿರುದ್ಧ ತನಿಖೆಗೆ ತಡೆಯಾಜ್ಞೆ ಪಡೆಯಬೇಕು, ಇಲ್ಲವಾದರೆ ತನಿಖೆ ಎದುರಿಸಬೇಕಾಗುತ್ತದೆ.

ಏನಿದು ಪ್ರಕರಣ:

ಶಾಸಕ ನಾರಾಯಣಸ್ವಾಮಿ 2018 ರಲ್ಲಿ ತಮ್ಮ ತಾಯಿ ಮುನಿಯಮ್ಮರವರಿಗೆ ಕಸಬಾ ಹೋಬಳಿ ಹುದುಕುಳು ಗ್ರಾಮದ ಸ.ನಂ.256 ರ ಪೈಕಿ 3.10 ಎಕರೆ ಜಮೀನು ಮಂಜೂರು ಮಾಡಿ ಅಕ್ರಮ ಎಸಗಿದ್ದಾರೆ ಎಂದು ಕೋಲಾರ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ 2022 ರ ಫೆ.23ರಂದು ಎಸಿಬಿಗೆ ದೂರು ನೀಡಿದ್ದರು. ಆದರೆ ಎಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಹಾಗಾಗಿ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿ ಎಫ್ ಐಆರ್ ದಾಖಲಿಸಲು ಕೋರಿ ಎಸಿಬಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.

English summary
Bangarapet MLA SM Narayana Swamy is in great trouble in Illegal land allotment case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X