ಉದಯ್ ನಿಧಿ ಸ್ಟಾಲೀನ್ You Are Lucky; ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು: ಸಿ ಟಿ ರವಿ ಹೇಳಿದಿಷ್ಟು!

ಬೆಂಗಳೂರು, ಸೆಪ್ಟೆಂಬರ್​ 6: ನಮ್ಮ ಸನಾತನ ಧರ್ಮದಲ್ಲಿ ಪ್ರಶ್ನೆ, ಟೀಕೆಗೆ ಅವಕಾಶ ಇದೆ. ಉದಯ್ ನಿಧಿ ಸ್ಟಾಲೀನ್ you are Lucky, ನೀನು ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ಖೇಲ್ ಖತಂ ಆಗುತ್ತಿತ್ತು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ನೀನು ಹುಟ್ಟಿದ್ದೀಯಾ. ಒಂದು ವೇಳೆ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು. ಆದರೂ ಯಾರೋ ತಲೆಗೆ ಬೆಲೆ ಕಟ್ಟಿದ್ದಾರೆ. ನಮ್ಮ ದೇಶದಲ್ಲಿ ಅಷ್ಟು ಬೇಗ ಯಾರೂ ತಲೆ ತೆಗೆಯುವುದಿಲ್ಲ ಎಂದು ಸಚಿವ ಉದಯನಿಧಿ ಸ್ಟಾಲಿನ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ct-ravi

ಭಾರತ ಹೆಸರನ್ನು ಟೀಕಿಸುವವರು ವಸಾಹತುಶಾಹಿ ಮನಸ್ಥಿತಿಯಿಂದ ಹೊರಕ್ಕೆ ಬಂದಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಮಹಾತ್ಮ ಗಾಂಧಿಯವರು ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂದು ಕರೆಕೊಟ್ಟಿದ್ದರು. ಮುಂದೆ ಅಧ್ವಾನ ಮಾಡಬಹುದು, ಆಗ ಕಾಂಗ್ರೆಸ್ಸಿಗೇ ಕೆಟ್ಟ ಹೆಸರು ಬರಬಹುದು. ಕಾಂಗ್ರೆಸ್ ನೇತೃತ್ವ ವಹಿಸಿದ್ದ ತಮ್ಮ ವ್ಯಕ್ತಿತ್ವಕ್ಕೂ ಅಪಮೌಲ್ಯ ಆಗಬಹುದೆಂಬ ಕಾರಣಕ್ಕೆ ಅವರು ಕಾಂಗ್ರೆಸ್ ವಿಸರ್ಜನೆಗೆ ಕರೆಕೊಟ್ಟಿದ್ದರು ಎಂದರು.

ಭಾರತ ಎಂಬ ಹೆಸರು, ಸನಾತನ ಧರ್ಮಕ್ಕೆ ಸಂಬಂಧಿಸಿ ಇದೀಗ ಚರ್ಚೆ ನಡೆಯುತ್ತಿದೆ ಎಂದ ಅವರು, ಭಾರತ ಎಂಬುದು ಇವತ್ತು ನಿನ್ನೆ ಇಟ್ಟ ಹೆಸರಲ್ಲ. ಸಾವಿರಾರು ವರ್ಷಗಳಿಂದ ನಮ್ಮ ದೇಶವನ್ನು ನಾವು ಭಾರತವೆಂದು ಗುರುತಿಸುತ್ತೇವೆ. ಭರತ ಚಕ್ರವರ್ತಿಯಿಂದ ಭಾರತದ ಹೆಸರು ಬಂತೆಂದು ನಾವು ಪರಿಭಾವಿಸುತ್ತೇವೆ ಎಂದು ತಿಳಿಸಿದರು. ಭಾ ಎಂದರೆ ಬೆಳಕು. ಆ ಕಾರಣಕ್ಕೋಸ್ಕರ ಜ್ಞಾನವನ್ನು ನೀಡುವ ದೇಶ ಭಾರತ ಎಂಬ ಪರಿಭಾವನೆಯನ್ನೂ ಅವರು ಮುಂದಿಟ್ಟರು.

'ಇಂಡಿಯ'ವನ್ನು ನಾವು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ ಎಂದರಲ್ಲದೆ ಅಗಸ್ತ್ಯ- ವಾತಾಪಿ ಕಥೆಯನ್ನೂ ಮುಂದಿಟ್ಟರು. ವಾತಾಪಿ ಜೀರ್ಣೋಭವ ಎಂಬಂತೆ ನಾವು ಹಲವು ಸಂಗತಿ ಅರಗಿಸಿಕೊಂಡಿದ್ದೇವೆ ಎಂದರು. ಪರ್ಶಿಯನ್ನರು ಬಂದಾಗ ನಮಗೆ ಅಸ್ತಿತ್ವದ ಪ್ರಶ್ನೆ ಬಂತು. ಪರಕೀಯರ ಆಕ್ರಮಣ ಮಾಡಿದಾಗ ಸಿಂಧೂ ಇದ್ದುದು ಹಿಂದೂ ಆಯಿತು. ಗ್ರೀಕರು ಇದನ್ನು ಇಂಡಸ್ ಎಂದರು. ಬ್ರಿಟಿಷರ ಬಾಯಲ್ಲಿ ಅದು ಇಂಡಿಯ ಆಗಿದೆ. ಅದಕ್ಕೆ ಸಹಸ್ರಮಾನಗಳ ಇತಿಹಾಸ ಇಲ್ಲ. ವಸಾಹತುಶಾಹಿ ಬ್ರಿಟಿಷರ ಆಳ್ವಿಕೆ ಬಳಿಕ ಈ ಹೆಸರು ಬಂದಿದೆ.

ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ ಡಾ.ಪರಮೇಶ್ವರ್ ಅವರು ಹುಟ್ಟಿಸಿದ್ದು ಯಾರೆಂದು ಕೇಳಿದ್ದಾರೆ. ಸನಾತನ ಎಂದರೆ ಅದರ ಅರ್ಥ ಆದಿ ಮತ್ತು ಅಂತ್ಯ ಇಲ್ಲದೇ ಇರುವುದು. ಹಾಗಾಗಿ ಹುಟ್ಟಿಸಿದ್ದು ಎಂಬ ಪ್ರಶ್ನೆ ಬರುವುದಿಲ್ಲ. ಧರ್ಮ ಮತ್ತು ಮತಕ್ಕೆ ದೊಡ್ಡ ವ್ಯತ್ಯಾಸ ಇದೆ. ಮತಗಳಿಗೆ ವಾರೀಸುದಾರಿಕೆ ಇದೆ. ಹುಟ್ಟಿದ ದಿನಾಂಕ ಇದೆ. ಹುಟ್ಟಿಸಿದ ಅಪ್ಪ ಯಾರೆಂದು ಇದೆ. ಧರ್ಮಕ್ಕೆ ಅದಿಲ್ಲ ಎಂದು ಸಿ.ಟಿ.ರವಿ ಹೇಳಿದರು.

ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ. ಯಾರು ಆ ಸಂಸ್ಕøತಿಯನ್ನು ಮುಂದುರೆಸುತ್ತಾರೋ ಅವರೆಲ್ಲರೂ ವಾರೀಸುದಾರರು. ಹುಟ್ಟಿದ ದಿನಾಂಕ ಇಲ್ಲದ ಹಾಗೇ ಸಾವಿನ ದಿನಾಂಕವೂ ಇಲ್ಲ. ಅದು ಸನಾತನ ಎಂದು ತಿಳಿಸಿದರು. ಗಂಗೆ ಹುಟ್ಟುವಾಗ ಸ್ಫಟಿಕ ಜಲ. ಅದು ವಾರಣಾಸಿ, ಕಲ್ಕತ್ತಕ್ಕೆ ಬಂದಾಗ ಮಲಿನವಾಗುತ್ತದೆ. ಗಂಗೆಗೆ ಕೊಳಕು ನೀರನ್ನು ಬಿಟ್ಟವರ ದೋಷವದು. ಕೊಳಕು ಮನಸ್ಥಿತಿಯನ್ನು ಶುದ್ಧಗೊಳಿಸಬೇಕಿದೆ.

ಅದು ಸಹಸ್ರಾರು ವರ್ಷಗಳಿಂದ ನಡೆದೇ ಇದೆ ಎಂದು ವಿವರ ನೀಡಿದರು. ಅಸ್ಪøಶ್ಯತೆ ಸನಾತನ ಧರ್ಮದ ಭಾಗವಲ್ಲ. ಶಂಕರಾಚಾರ್ಯರು ಚಾಂಡಾಲನಲ್ಲೂ ಶಿವನನ್ನು ಕಂಡಿದ್ದರು. 10ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಸರ್ವರಿಗೂ ದೀಕ್ಷೆ ಕೊಟ್ಟಿದ್ದರು. ಬಸವಣ್ಣನವರು ಕೂಡ ಜಾತಿ ಉದಯಿಸಿದ ಕುರಿತು ಕೆಲಸವನ್ನು ಉಲ್ಲೇಖಿಸಿದ್ದರು.

ಜನರಿಗೆ ನಿಮ್ಮ ಹೆಸರನ್ನು ಬದಲಾಯಿಸುತ್ತಾರೆ ಎಂದು ಹೆದರಿಸುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮದೇ ಕ್ಷೇತ್ರದ ಕಾಪಾಲಿ ಬೆಟ್ಟದ ಹೆಸರನ್ನು ಬದಲಾಯಿಸಿದಾಗ ಯಾವ ರೀತಿ ನಡೆದುಕೊಂಡಿರಿ ಎಂಬುದನ್ನು ದೇಶ ಕಂಡಿದೆ. ಸಮಾಜದ ಅಡಿಪಾಯವೇ ಶೂದ್ರ. ಅದಕ್ಕಾಗಿಯೇ ಕಾಲಿಗೆ ನಮಸ್ಕರಿಸುತ್ತಾರೆ.

ನೀವು ತಪ್ಪರ್ಥ ಬರುವಂತೆ ಅರ್ಧ ಮಾತನಾಡುತ್ತೀರಿ ಎಂದು ಟೀಕಿಸಿದರು. ಕ್ಷತ್ರಿಯ ವಿಶ್ವಾಮಿತ್ರ ಬ್ರಹ್ಮಜ್ಞಾನ ಪಡೆದು ಬ್ರಾಹ್ಮಣನಾದ. ಅಂಥ ನೂರು ಉದಾಹರಣೆಗಳಿವೆ ಎಂದರು. ವೇದ ಕಾಲಕ್ಕೆ ಹಿಂದಿರುಗಲು ವಿವೇಕಾನಂದರು ಹೇಳಿದ್ದರು. ಅಲ್ಲಿ ಅಸ್ಲೃಶ್ಯತೆ, ಜಾತೀಯತೆ ಇರಲಿಲ್ಲ. ವ್ಯಕ್ತಿಗತ ಹಿತಾಸಕ್ತಿ ಜಾಸ್ತಿ ಆದಾಗ ಸಮಸ್ಯೆ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+