ಮೋದಿ ಜೀವಕ್ಕೆ ಬೆದರಿಕೆ ಇದ್ದರೆ, ಸಾಯಲಿ ಬಿಡಿ - ಬಸವರಾಜ ರಾಯರೆಡ್ಡಿ

By: ಅನುಶಾ ರವಿ
Subscribe to Oneindia Kannada

ಕೊಪ್ಪಳ, ಏಪ್ರಿಲ್ 21: ಫ್ರಧಾನಿ ನರೇಂದ್ರ ಮೋದಿ ತಮ್ಮ ಸುತ್ತಲಿನ ಭದ್ರತೆಯನ್ನು ತೆಗೆದು ಹಾಕಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ. ಈ ಸಂದರ್ಭ ಪ್ರಧಾನಿ ಜೀವಕ್ಕೆ ಬೆದರಿಕೆ ಇದೆಯಲ್ಲಾ ಎಂದು ಪ್ರಶ್ನೆ ಕೇಳಿದಾಗ. "ಅದಿಕ್ಕೆ? ಸಾಯಲಿ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಪ್ಪಳಕ್ಕೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವರಿಗೆ ಮಾಧ್ಯಮಗಳು ಕೇಂದ್ರದ ಹೊಸ ನೀತಿಯ ಬಗ್ಗೆ ಪ್ರಶ್ನೆ ಕೇಳಿದವು. ಕಾರಿನಿಂದ ಕೆಂಪು ದೀಪ ತೆಗೆಯುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಯಾರು ಅಧಿಕಾರದಲ್ಲಿ ಇರಬೇಕು ಎಂದು ಬಯಸುತ್ತಾರೋ, ಅವರು ಸಾಯಲು ಸಿದ್ದವಾಗಿರಬೇಕು," ಎಂದು ಹೇಳಿದ್ದಾರೆ.[ಹೋರಾಟಗಾರರೇ, ಬಾಹುಬಲಿ ಪ್ರಕರಣ ಮುಗೀತಲ್ಲ? ಈಗ ಇತ್ತ ಗಮನ ಹರಿಸಿ...]

'If Modi has threat to life, let him die', says Congress minister on VIP culture

ಅವರ ಕಾರಿನಿಂದ ಕೆಂಪು ದೀಪ ತೆಗೆಯುವ ಬಗ್ಗೆ ರಾಯರೆಡ್ಡಿಯವರನ್ನು ಕೇಳಿದಾಗ, "ಇದು ನನಗೇನೂ ವಿಶೇಷ ಎಂದೆನಿಸುವುದಿಲ್ಲ. ನಾನು ನಿಜವಾಗಿಯೂ ಅವರಿಗೆ (ಕೇಂದ್ರ) ಭದ್ರತೆಯೂ ತೆಗೆಯಿರಿ ಎಂದು ಕೇಳಿಕೊಳ್ಳುತ್ತೇನೆ. ಮೋದಿಗೆ ನಿಜವಾಗಿಯೂ ತೆಗೆಯಬೇಕು (ವಿಐಪಿ ಸಂಸ್ಕೃತಿ) ಎಂದೆನಿಸಿದರೆ ಅವರು ಸುತ್ತಾ ಇರುವ ಭದ್ರತೆ ತೆಗೆಯಲಿ. ಎಲ್ಲರಿಗೂ ಭದ್ರತೆ ಇಲ್ಲದಿರುವಾಗ ಅವರಿಗೆ ಮಾತ್ರ ಭದ್ರತೆ ಬೇಕಾ? ಅವರ ಸುತ್ತಾ ಇರುವ ಭದ್ರತೆ ತೆಗೆಯಲಿ. ನಾನೂ ಸಿದ್ದ," ಎಂದಿದ್ದಾರೆ.

ಈ ಸಂದರ್ಭದಲ್ಲಿ ವರದಿಗಾರರೊಬ್ಬರು ಪ್ರಧಾನಿಯವರಿಗೆ ಜೀವಕ್ಕೆ ಅಪಾಯವಿದೆಯಲ್ಲಾ ಎಂಬ ಪ್ರಶ್ನೆ ಕೇಳಿದರು. "ಅದಕ್ಕೆ? ಸಾಯಲಿ. ಅಧಿಕಾರಕ್ಕೆ ಬೇಕೆಂದರೆ ಸಾಯಲು ಸಿದ್ಧವಾಗಿರಬೇಕು. ಅಧಿಕಾರ ಬೇಡವೆಂದರೆ ಮನೆಯಲ್ಲಿರಿ," ಎಂದಿದ್ದಾರೆ. ಹಾಗಿದ್ದರೆ ಮೋದಿ ಸಾಯಲಿ ಎಂದು ನೀವು ಬಯಸುತ್ತೀರೋ ಎಂದು ಮಾಧ್ಯಮದವರು ಕೇಳಿದರು.[ಬೀದರ್ ನಲ್ಲಿ ಹಳಿ ತಪ್ಪಿದ ರೈಲು: ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ]

ತಕ್ಷಣ ಪ್ರತಿಕ್ರಿಯೆ ನೀಡಿದ ಬಸವರಾಜ ರಾಯರೆಡ್ಡಿ, "ನಾನು ಹೇಳಿದ್ದು ಮೋದಿಗಲ್ಲ,". "ನಾನು ಇದು ಪರಿಸ್ಥಿತಿ ಎಂದು ಹೇಳಿದೆ ಅಷ್ಟೆ," ಎಂದು ಹೇಳಿ ಹೊರಟು ಹೋದರು. (ಒನ್ ಇಂಡಿಯಾ ಕನ್ನಡ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Let Modi remove security cover around him," said higher education minister minister Basavraj Rayareddi. When reminded that the prime minister has a threat to life, Rayareddi said, "So? Die." These statements were made in Koppal by the minister when asked about the centre' move to remove red beacons from all government vehicles.
Please Wait while comments are loading...