ಅಸೆಂಬ್ಲಿಯಲ್ಲಿ ಹೈಡ್ರಾಮ: ಐಎಎಸ್‌ ಅಧಿಕಾರಿಗಳ ದುರ್ಬಳಕೆ, ಸದನದಲ್ಲಿ ಆಗಿದ್ದೇನು?

ಬೆಂಗಳೂರು, ಜುಲೈ 19: 2024 ರ ಲೋಕಸಭಾ ಚುನಾವಣೆ ಹಿನ್ನಲೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಇಂಡಿಯಾ ಒಕ್ಕೂಟದ ಸಭೆಗೆ ಆಗಮಿಸಿದ್ದ ವಿಪಕ್ಷ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿರುವ ಸರ್ಕಾರದ ನಡೆಗೆ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬುಧವಾರ ಸದನದಲ್ಲಿ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದು, ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿರುವ ಸರ್ಕಾರದ ನಡೆಗೆ ಬಿಜೆಪಿ ಸದಸ್ಯರು ವಿರೋಧಿಸಿ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಧರಣಿ‌ ನಡೆವೆಯೇ ವಿಧೇಯಕ ಅಂಗೀಕಾರ ಮಾಡಲಾಯಿತು.

IAS Officer Misusing Their Power

ವಿಧೇಯಕ ಅಂಗೀಕಾರದ ಬಳಿಕ ಸದನ ಮುಂದೂಡದೆ ಭೋಜನ ವಿರಾಮವನ್ನೂ ನೋಡದೆ ಬಜೆಟ್ ಮೇಲಿನ ಭಾಷಣಕ್ಕೆ ಸ್ಪೀಕರ್ ಸೂಚನೆ ನೀಡಿದರು. ಇದರಿಂದ ಕ್ರೋಧಗೊಂಡ ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆ ‌ತೀವ್ರಗೊಳಿಸಿದರು.

ಇನ್ನೂ ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಧರಣಿ ಮುಂದುವರೆಸಿದರು. ಈ ವೇಳೆ ನರೇಂದ್ರ ಸ್ವಾಮಿ ಭಾಷಣ ಮುಂದುವರೆಸಿ, ಡೆಪ್ಯೂಟಿ‌ ಸ್ಪೀಕರ್ ರುದ್ರಪ್ಪ ಲಮಾಣಿ‌ ಮೇಲೆ ವಿಧೇಯಕದ ಕಾಪಿಗಳನ್ನ ಹರಿದು ಬಿಜೆಪಿ ಶಾಸಕರು ಎಸೆದರು. ಈ ವೇಳೆ ಬಿಜೆಪಿ ಶಾಸಕರ ನಡೆಗೆ ಡೆಪ್ಯೂಟಿ‌ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿ, ಹೀಗೇ ಮಾಡಿದ್ರೆ ನಿಮ್ಮ ಎತ್ತಿ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಕ್ರೋಶಗೊಂಡ ಡೆಪ್ಯೂಟಿ‌ಸ್ಪೀಕರ್ ಇವರನ್ನ ಹೊರಗೆ ಹಾಕಿ ಎಂದು ಮಾರ್ಷಲ್‌ ಗಳಿಗೆ ಸೂಚನೆ ನೀಡಿದ್ರು, ಡೆಪ್ಯೂಟಿ‌ಸ್ಪೀಕರ್ ಸೂಚನೆಯ ಮೇರೆಗೆ ಸದನ ಬಾವಿಗೆ ಮಾರ್ಷಲ್ಸ್ ಗಳ ಬರುತ್ತಿದ್ದಂತೆ ಸದನದಲ್ಲಿ ತೀರ್ವ ಸದ್ದುಗದ್ದಲ ಉಂಟಾಯಿತು. ಇನ್ನೂ ಡೆಪ್ಯೂಟಿ‌ ಸ್ಪೀಕರ್ ರುದ್ರಪ್ಪ ಲಮಾಣಿ‌ ಮೇಲೆ ಪೇಪರ್ ಎಸೆದ ಶಾಸಕರು ಊಟಕ್ಕೆ ಬಿಡದ ಹಿನ್ನೆಲೆ ಪೇಪರ್ ಹರಿದು ಎಸೆದ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣಬೈರೇಗೌಡ, ದಲಿತನ ಮೇಲೆ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಡೆಪ್ಯೂಟಿ ಸ್ಪೀಕರ್ ಮುಖದ ಮೇಲೆ ಪೇಪರ್ ಎಸೆದಿದ್ದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+