Transfer: ಆಡಳಿತಕ್ಕೆ ಮೇಜರ್ ಸರ್ಜರಿ! IAS, KAS ಅಧಿಕಾರಿಗಳ ವರ್ಗಾವಣೆ; ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹಲವು IAS ಹಾಗೂ KAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, 2024ನೇ ಬ್ಯಾಚ್‌ನ ಹುದ್ದೆ ನಿರೀಕ್ಷೆಯಲ್ಲಿದ್ದ ಏಳು IAS ಅಧಿಕಾರಿಗಳಿಗೆ ವಿವಿಧ ಜಿಲ್ಲೆಗಳ ಉಪವಿಭಾಗಗಳಲ್ಲಿ ಸಹಾಯಕ ಆಯುಕ್ತರಾಗಿ ನೇಮಕಾತಿ ನೀಡಲಾಗಿದೆ.

ಈ ವರ್ಗಾವಣೆಗಳಿಗೆ ಭಾರತ ಚುನಾವಣಾ ಆಯೋಗದ ಅನುಮೋದನೆದೊರೆತಿದ್ದು, ಸೆಪ್ಟೆಂಬರ್‌ 7, 2026ರಂದು ನೀಡಿರುವ ಪತ್ರದ ಮೂಲಕ ಆಯೋಗವು ಅನುಮತಿ ನೀಡಿದೆ. ಎಲ್ಲ ವರ್ಗಾವಣೆಗಳು ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ.

IAS KAS transfer Karnataka government has transferred several IAS KAS officers including seven 2024-batch

7 ಹೊಸ IAS ಅಧಿಕಾರಿಗಳಿಗೆ ಸಹಾಯಕ ಆಯುಕ್ತರ ಹುದ್ದೆ

ಪುರೂರಾಜ್ ಸಿಂಗ್ ಸೋಲಂಕಿ, IAS (KN:2024) ಅವರನ್ನು ಚಿಕ್ಕಮಗಳೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ KAS ಅಧಿಕಾರಿ ಎಸ್. ರವಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಿತಿಕಾ ವರ್ಮಾ, IAS (KN:2024) ಅವರನ್ನು ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ಸಾಹಿತ್ಯಾ ಎಂ. ಅಲಡಕಟ್ಟಿ, IAS ಅವರನ್ನು ವರ್ಗಾವಣೆ ಮಾಡಲಾಗಿದೆ.

ಜುಫಿಷಾನ್ ಹಕ್, IAS (KN:2024) ಅವರಿಗೆ ವಿಜಯಪುರ ಉಪವಿಭಾಗದ ಸಹಾಯಕ ಆಯುಕ್ತರ ಜವಾಬ್ದಾರಿ ನೀಡಲಾಗಿದೆ. ಈ ಹುದ್ದೆಯಲ್ಲಿದ್ದ ಗುರುನಾಥ ಶಿವಪುತ್ರಪ್ಪ ಧಡ್ಡೆ, KAS ಅವರನ್ನು ವರ್ಗಾವಣೆ ಮಾಡಲಾಗಿದೆ.

ಅಭಿನವ್ ಜೈನ್, IAS (KN:2024) ಅವರನ್ನು ಬೀದರ್ ಉಪವಿಭಾಗದ ಸಹಾಯಕ ಆಯುಕ್ತರಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ಮೊಹಮ್ಮದ್ ಶಕೀಲ್, KAS ಅವರನ್ನು ವರ್ಗಾವಣೆ ಮಾಡಲಾಗಿದೆ. ‌

ಖೋಡೆ ಸಮೀರ್ ಪ್ರಕಾಶ್, IAS (KN:2024) ಅವರನ್ನು ಹಾವೇರಿ ಜಿಲ್ಲೆಯ ಸವಣೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ವಿಜಯಕುಮಾರ್ ಎಚ್.ಬಿ., KAS ಅವರನ್ನು ವರ್ಗಾವಣೆ ಮಾಡಲಾಗಿದೆ.

ರಮ್ಯಾ ಆರ್., IAS (KN:2024) ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರ ಹುದ್ದೆ ನೀಡಲಾಗಿದೆ. ಈ ಹುದ್ದೆಯಲ್ಲಿದ್ದ ಶಲಂ ಹುಸೇನ್, KAS ಅವರನ್ನು ವರ್ಗಾವಣೆ ಮಾಡಲಾಗಿದೆ.

ನಾಗೇಂದ್ರ ಬಾಬು ಕುಮಾರ್, IAS (KN:2024) ಅವರನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ಬಸವನಪ್ಪ ಕಳಶೆಟ್ಟಿ, KAS ಅವರನ್ನು ವರ್ಗಾವಣೆ ಮಾಡಲಾಗಿದೆ. ‌

ಬೃಹತ್ ಬೆಂಗಳೂರು ಪ್ರದೇಶದಲ್ಲೂ ಬದಲಾವಣೆ

ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲೂ ಸರ್ಕಾರ ಪ್ರಮುಖ ಬದಲಾವಣೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ಡಾ. ರಾಕೇಶ್ ಕುಮಾರ್ ಕೆ., IAS (KN:2012) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೃಹತ್ ಬೆಂಗಳೂರು ಪ್ರದೇಶದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ರಮೇಶ್ ಕೆ.ಎನ್., IAS ಅವರನ್ನು ವರ್ಗಾವಣೆ ಮಾಡಲಾಗಿದೆ.

ರಮೇಶ್ ಕೆ.ಎನ್., IAS (KN:2012) ಅವರನ್ನು ಬೃಹತ್ ಬೆಂಗಳೂರು ಪ್ರಾಧಿಕಾರದ ಆರೋಗ್ಯ ಮತ್ತು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ವೆಂಕಟಾಚಲಪತಿ ಆರ್., IAS ಅವರನ್ನು ವರ್ಗಾವಣೆ ಮಾಡಲಾಗಿದೆ.

ಶಿಲ್ಪಾ ನಾಗ್ ಸಿ.ಟಿ., IAS (KN:2014) ಅವರನ್ನು ಹುದ್ದೆ ನಿರೀಕ್ಷೆಯಲ್ಲಿದ್ದವರಿಂದ ಬೃಹತ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಅವರಿಗೆ ಹಣಕಾಸು, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ ವಿಭಾಗಗಳ ಜವಾಬ್ದಾರಿ ನೀಡಲಾಗಿದೆ.

ವೆಂಕಟಾಚಲಪತಿ ಆರ್., IAS (KN:2019) ಅವರನ್ನು ಬೃಹತ್ ಬೆಂಗಳೂರು ಪ್ರದೇಶದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾಗಿ ನೇಮಿಸಲಾಗಿದೆ. ಅವರಿಗೆ ಅಭಿವೃದ್ಧಿ ವಿಭಾಗದ ಜವಾಬ್ದಾರಿ ವಹಿಸಲಾಗಿದೆ.

KAS ಅಧಿಕಾರಿಗಳಿಗೆ ಹೊಸ ಜವಾಬ್ದಾರಿ

ಸಹಾಯಕ ಆಯುಕ್ತರ ಹುದ್ದೆಗಳಿಂದ ವರ್ಗಾವಣೆಗೊಂಡಿರುವ KAS ಅಧಿಕಾರಿಗಳಿಗೂ ಸರ್ಕಾರ ಹೊಸ ಜವಾಬ್ದಾರಿಗಳನ್ನು ನೀಡಿದೆ.

* ಬಸವನಪ್ಪ ಕಳಶೆಟ್ಟಿ, KAS: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿಯಲ್ಲಿ ಉಪ ಕಾರ್ಯದರ್ಶಿ.

* ಎಸ್. ರವಿ, KAS: ದಾವಣಗೆರೆಯ ಕೊಟ್ಟೂರು-ಹರಿಹರ ರೈಲು ಬ್ರಾಡ್‌ಗೇಜ್ ನಿರ್ಮಾಣ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ.

* ಶಾಲಂ ಹುಸೇನ್, KAS: ಧಾರವಾಡದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ.

* ಗುರುನಾಥ್ ಶಿವಪುತ್ರಪ್ಪ ಧಡ್ಡೆ, KAS: ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ.

* ಮೊಹಮ್ಮದ್ ಶಕೀಲ್, KAS: ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ.

* ವಿಜಯಕುಮಾರ್ ಎಚ್.ಬಿ., KAS: ಬೃಹತ್ ಬೆಂಗಳೂರು ಪ್ರಾಧಿಕಾರದ ಚುನಾವಣಾ ವಿಭಾಗದ ಸಹಾಯಕ ಆಯುಕ್ತ.

ತಕ್ಷಣದಿಂದಲೇ ಜಾರಿ

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಎಲ್ಲಾ ವರ್ಗಾವಣೆ ಮತ್ತು ನೇಮಕಾತಿಗಳು ತಕ್ಷಣದಿಂದ ಜಾರಿಗೆ ಬರಲಿವೆ. ಮುಂದಿನ ಆದೇಶದವರೆಗೆ ಅಧಿಕಾರಿಗಳು ಹೊಸ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+