ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷ ಉಳಿಸಿ ಕೊನೆ ಉಸಿರೆಳೆಯುತ್ತೇನೆ : ದೇವೇಗೌಡ ಭಾವುಕ ಮಾತು

|
Google Oneindia Kannada News

Recommended Video

ಪಕ್ಷ ಉಳಿಸಿ ಕೊನೆ ಉಸಿರೆಳೆಯುತ್ತೆನೆ..! | Oneindia Kannada

ಬೆಂಗಳೂರು, ಜನವರಿ 03: ನನಗೆ ಶಕ್ತಿ ಇರುವವರೆಗೆ ದುಡಿಯುತ್ತೇನೆ, ಪಕ್ಷವನ್ನು ಉಳಿಸಿ, ಆ ನಂತರ ನನ್ನ ಕೊನೆ ಉಸಿರುಎಳೆಯಬೇಕು ಎಂದುಕೊಂಡಿದ್ದೇನೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಭಾವುಕರಾಗಿ ಮಾತನಾಡಿದರು.

ನಗರದಲ್ಲಿ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾವು ಒಮ್ಮೆ ಎಡವಿದ್ದೇವೆ, ಹಾಗೆಂದು ಮತ್ತೆ-ಮತ್ತೆ ಎಡವುವುದು ಬೇಡ. ಕತ್ತಲು ಕವಿದ ಮೇಲೆ ಬೆಳಕು ಬಂದೇ ಬರುತ್ತದೆ ಎಂದು ಹೇಳಿ ಮುಖಂಡರಲ್ಲಿ ಕಾರ್ಯಕರ್ತರಲ್ಲಿ ಭರವಸೆ ತುಂಬಿದರು.

ವಿಶ್ವನಾಥ್ ಅವರು ಅನುಭವಿಗಳು, ಆದರೆ ಅನಾರೋಗ್ಯದಿಂದ ಕಳೆದ ಏಳು ತಿಂಗಳಿಂದ ಅವರಿಗೆ ಏನೂ ಮಾಡಲು ಆಗಿಲ್ಲ ಹಾಗಾಗಿ ನಾನೇ ರಂಗಕ್ಕೆ ಇಳಿದೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು? ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು?

ಫೆಬ್ರವರಿಯಲ್ಲಿ ಅಲ್ಪಸಂಖ್ಯಾತರ ಸಮಾವೇಶ ಮತ್ತು ಮಹಿಳಾ ಸಮಾವೇಶ ಮಾಡುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳ ಸಂಚಾರ ಮಾಡುತ್ತೇನೆ ಎಂದು ಅವರು ಹೇಳಿದರು. ವೈಎಸ್‌ವಿ ದತ್ತ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿಸಲಾಗಿದ್ದು, ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದರು.

'ಕುಮಾರಸ್ವಾಮಿ ಕಷ್ಟಗಳು ಗೊತ್ತಿವೆ'

'ಕುಮಾರಸ್ವಾಮಿ ಕಷ್ಟಗಳು ಗೊತ್ತಿವೆ'

ಸರ್ಕಾರ ನಡೆಸುವಲ್ಲಿ ಕುಮಾರಸ್ವಾಮಿ ಅವರಿಗೆ ಎಷ್ಟು ಕಷ್ಟಗಳು ಇದೆ ಎಂಬುದು ಗೊತ್ತಿದೆ. ಆದರೆ ಅವರು ಆ ನೋವನ್ನು ಸಹಿಸಿಕೊಳ್ಳಲೇ ಬೇಕು. ಇಲ್ಲವಾದರೆ ಗುರಿ ಮುಟ್ಟುವುದು ಕಷ್ಟ ಎಂದು ದೇವೇಗೌಡ ಅವರು ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಚ್‌.ವಿಶ್ವನಾಥ್‌ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಚ್‌.ವಿಶ್ವನಾಥ್‌

'ನಾವು ದೇವರಲ್ಲಿ ನಂಬಿಕೆ ಇಟ್ಟವರು'

'ನಾವು ದೇವರಲ್ಲಿ ನಂಬಿಕೆ ಇಟ್ಟವರು'

ನಾವು ದೇವರಲ್ಲಿ ನಂಬಿಕೆ ಇಟ್ಟವರು, ದೇವರಲ್ಲಿ ನಂಬಿಕೆ ಇಟ್ಟವರು ಖಂಡಿತ ಗುರಿ ತಲುಪುತ್ತಾರೆ ಎಂದು ದೇವೇಗೌಡ, ಸರ್ಕಾರವನ್ನು ಉಳಿಸುವ ಜವಾಬ್ದಾರಿ ಶಾಸಕರು ಮತ್ತು ಮಂತ್ರಿಗಳ ಕೈಯಲ್ಲಿ ಇದೆ ಎಂದರು.

ವೈ.ಎಸ್.ವಿ.ದತ್ತಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವೈ.ಎಸ್.ವಿ.ದತ್ತಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ

ಜೆಡಿಎಸ್‌ಗೆ 10 ನಿಗಮ ಮಂಡಳಿ ಸ್ಥಾನ

ಜೆಡಿಎಸ್‌ಗೆ 10 ನಿಗಮ ಮಂಡಳಿ ಸ್ಥಾನ

ನಮ್ಮ ಭಾಗಕ್ಕೆ 10 ನಿಗಮ ಮಂಡಳಿಗಳು ಬಂದಿವೆ. ಎಲ್ಲ ಶಾಸಕರಿಗೆ ಅಧಿಕಾರ ಕೊಡಲು ಆಗುವುದಿಲ್ಲ. ಅಧಿಕಾರ ದೊರೆತವರಿಗೆ ಒಂದು ಗೂಟದ ಕಾರು, ಒಬ್ಬ ಅಧಿಕಾರಿಯನ್ನು ಕೊಡುತ್ತಾರೆ ಅದನ್ನು ಇಟ್ಟುಕೊಂಡು ಏನು ತಾನೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.

'ಅಪ್ಪ-ಮಕ್ಕಳ ಪಕ್ಷ ಮುಗಿಸುತ್ತಾರಂತೆ'

'ಅಪ್ಪ-ಮಕ್ಕಳ ಪಕ್ಷ ಮುಗಿಸುತ್ತಾರಂತೆ'

104 ಸ್ಥಾನ ಗೆದ್ದಿರುವ ವಿರೋಧ ಪಕ್ಷ ಜೆಡಿಎಸ್‌ ಪಕ್ಷದ ಬಗ್ಗೆ ಬಹಳು ಕಠಿಣವಾದ ಮಾತುಗಳನ್ನಾಡುತ್ತಿದೆ. ಅಪ್ಪ-ಮಕ್ಕಳ ಪಕ್ಷವನ್ನು ಮುಗಿಸಿಬಿಡುತ್ತೇವೆ ಎನ್ನುತ್ತಿದ್ದಾರೆ. ಅವರೇಕೆ ಹಾಗೆ ಹೇಳುತ್ತಿದ್ದಾರೋ ಗೊತ್ತಿಲ್ಲ, ಅವರೇ ಒಮ್ಮೆ ನಮ್ಮ ಮನೆ ಬಾಗಿಲಿಗೆ ಬಂದು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದಿದ್ದರು ಎಂದು ಹೇಳಿದರು.

English summary
JDS president HD Deve Gowda said i will work for people and party till my last breath. i will make party strong before my death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X