ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಪಕ್ಷ ಬಿಡೋಲ್ಲ ಅಂದ್ರು ಜಮೀರ್ ಅಹಮದ್

|
Google Oneindia Kannada News

ಬೆಂಗಳೂರು, ಸೆ. 18 : 'ಜೆಡಿಎಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಬೇಸರ ಮೂಡಿಸಿರುವುದು ನಿಜ, ಆದರೆ, ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲ. ನನಗೆ ಪಕ್ಷದವರು ಯಾವ ಹುದ್ದೆ ನೀಡುವುದು ಬೇಡ' ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಜಮೀರ್ ಅಹಮದ್ ಖಾನ್, ಜೆಡಿಎಸ್ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳು ಬೇಸರ ಉಂಟು ಮಾಡಿದ್ದವು ಆದ್ದರಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದೆ. ಆದರೆ, ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Zameer Ahmed Khan

ಜೆಡಿಎಸ್ ಪಕ್ಷ ನನಗೆ ಯಾವುದೇ ಸ್ಥಾನ-ಮಾನ ನೀಡುವುದು ಬೇಡ, ಪಕ್ಷದ ರಾಜ್ಯಾಧ್ಯಕ್ಷ ಅಥವ ಕೋರ್ ಕಮಿಟಿ ಸದಸ್ಯ ಸ್ಥಾನಕ್ಕಾಗಿ ನಾನು ಲಾಬಿ ಮಾಡುವುದಿಲ್ಲ. ಆ ಸ್ಥಾನ ನೀಡಿದರೂ ನನಗೆ ಬೇಡ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. [ಶಾಸಕಾಂಗ ಸಭೆಗೆ ಶಾಸಕ ಜಮೀರ್ ಗೈರು]

ಚಾಮರಾಜಪೇಟೆಯ ಜನರು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಪಕ್ಷದ ತೊರೆದು ಅವರ ವಿಶ್ವಾಸಕ್ಕೆ ಧಕ್ಕೆ ತರುವುದಿಲ್ಲ. ಕ್ಷೇತ್ರದ ಮತದಾರರ ಸೇವೆ ಮಾಡುತ್ತೇನೆ. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುತ್ತೇನೆ ಎಂದು ಜಮೀರ್ ಅಮಮದ್ ಹೇಳಿದರು. [ಆರೋಗ್ಯ ತಪಾಸಣೆಗೆ ಸಿಂಗಪುರಕ್ಕೆ ಕುಮಾರಣ್ಣ]

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನನ್ನ ನಡುವೆ ಚಿಕ್ಕಪುಟ್ಟ ಭಿನ್ನಾಭಿಪ್ರಾಯವಿರಬಹುದು ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಭಿನ್ನಾಭಿಪ್ರಾಯಗಳಿಂದಾಗಿ ಜಮೀರ್ ಜೆಡಿಎಸ್ ತೊರೆಯುತ್ತಾರೆ ಎಂಬ ಆರೋಪಗಳಲ್ಲಿ ಸತ್ಯವಿಲ್ಲ. ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೆ.3ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೂ ಜಮೀರ್ ಅಹಮದ್ ಖಾನ್ ಗೈರು ಹಾಜರಾಗಿದ್ದರು. ಆದ್ದರಿಂದ ಜಮೀರ್ ಜೆಡಿಎಸ್ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಗುರುವಾರ ಈ ಬಗ್ಗೆ ಮಾತನಾಡಿರುವ ಜಮೀರ್ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

English summary
Chamarajpet MLA Zameer Ahmed Khan said i will not quit JDS. On Thursday, Zameer Ahmed addressed media at Bangalore and denied the speculative reports of joining Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X