ರಾಜ್ಯಸಭೆ ಚುನಾವಣೆ ಕುರಿತು ಮೌನ ಮುರಿದ ದೇವೇಗೌಡ
ಬೆಂಗಳೂರು, ಜನವರಿ 12 : ರಾಜ್ಯಸಭೆ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮೌನ ಮುರಿದಿದ್ದಾರೆ. ಜೂನ್‌ನಲ್ಲಿ ಕರ್ನಾಟಕದಿಂದ ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.
"ಯಾವುದೇ ಕಾರಣಕ್ಕೂ ನಾನು ರಾಜ್ಯಸಭೆ ಸದಸ್ಯನಾಗುವುದಿಲ್ಲ. ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ" ಎಂದು ಎಚ್. ಡಿ. ದೇವೇಗೌಡರು ಹೇಳಿದರು. ಈ ಮೂಲಕ ಹಲವು ದಿನದಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು.

"ರಾಜ್ಯಸಭೆ ಸದಸ್ಯರಾಗುವ ಬಗ್ಗೆ ಸುದ್ದಿಗಳು ಹಬ್ಬುತ್ತಿವೆ. ಅದರ ಮೇಲೆ ಮಾಧ್ಯಮಗಳು ವಿಶ್ಲೇಷಣೆ ಮಾಡುತ್ತಿವೆ. ದೇವೇಗೌಡರಿಗೆ ಅಧಿಕಾರ ದಾಹ ಇನ್ನೂ ಹೋಗಿಲ್ಲ ಎನ್ನುತ್ತಾರೆ. ಜೀವನದಲ್ಲಿ ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡು ಕೂತವನಲ್ಲ" ಎಂದು ದೇವೇಗೌಡರು ಹೇಳಿದರು.
"ಯಾವ ಕಾರಣಕ್ಕೂ ರಾಜ್ಯಸಭೆಗೆ ಪ್ರವೇಶ ಮಾಡಲ್ಲ. ನಾನು ಬಡವರ ಪರ ಹೋರಾಡಲು ರಾಜ್ಯಸಭೆ ಸದಸ್ಯನಾಗಬೇಕಿಲ್ಲ. ಎಲ್ಲಿದ್ದರೂ ರೈತ ಪರ ಹೋರಾಟ ಮಾಡುತ್ತೇನೆ. ನನಗೆ ಅಧಿಕಾರ ದಾಹ ಇಲ್ಲ" ಎಂದು ದೇವೇಗೌಡರು ತಿಳಿಸಿದರು.
ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ನಿಂದ ಎಚ್. ಡಿ. ದೇವೇಗೌಡ ರಾಜ್ಯಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಇಬ್ಬರು ಸಹ 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ.












Click it and Unblock the Notifications