ಇದೇ ಬ್ರ್ಯಾಂಡ್ ಎಸ್.ಯು.ವಿ ಕಾರ್ ಬೇಕು ಎಂದಿಲ್ಲ: ಜಮೀರ್
Recommended Video

ಬೆಂಗಳೂರು, ಜೂನ್ 22: ತಮಗೆ ಓಡಾಡಲು ಐಶಾರಾಮಿ ಕಾರ್ ಬೇಕು ಎಂದು ಜಮೀರ್ ಅಹ್ಮದ್ ಖಾನ್ ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ನಾನು ಎಸ್ ಯುವಿ ವಾಹನವನ್ನು ಮಾತ್ರ ಕೇಳಿದ್ದೆ. ಇದೇ ಬ್ರ್ಯಾಂಡ್ ಬೇಕು ಎಂದು ಹೇಳಿಲ್ಲ ಎಂದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, "ಮಾಧ್ಯಮಗಳು ಇದನ್ನು ದೊಡ್ಡ ವಿಷಯವನ್ನಾಗಿ ಬಿಂಬಿಸಿವೆ. ನಾನು ಸರಳವಾಗಿ ಎಸ್ ಯುವಿ ಕಾರ್ ಬೇಕು ಎಂದು ಕೇಳಿದ್ದೆ, ಇದೇ ಬ್ರ್ಯಾಂಡ್ ನ ಕಾರು ಬೇಕು ಎಂದೇನೂ ಕೇಳಿಲ್ಲ. ನಾನು ಲೆಕ್ಸಸ್ ಅಥವಾ ಬಿಎಂಡಬ್ಲ್ಯೂ ಕಾರು ಕೇಳಿದ್ನಾ? ಎಲ್ಲಾ ಜಿಲ್ಲೆಗಳನ್ನು ಸುತ್ತಾಡಬೇಕಿದ್ದರೆ ನಾನು ಎಸ್ ಯುವಿಯಲ್ಲೇ ಓಡಾಡಬೇಕಾಗುತ್ತದೆ. ಸರಕಾರದ ಮಿತಿಯಲ್ಲೇ ನಾನು ಕಾರು ಕೇಳಿದ್ದೇನೆ," ಎಂದು ವಿವರಿಸಿದರು.

ಇನ್ನು ಹಜ್ ಹೌಸ್ ಹೆಸರನ್ನು ಟಿಪ್ಪು ಸುಲ್ತಾನ್ ಹಜ್ ಘರ್ ಎಂದು ಬದಲಾಯಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.
"ಹಜ್ ಹೌಸ್ ಹೆಸರನ್ನು ಟಿಪ್ಪು ಸುಲ್ತಾನ್ ಹಜ್ ಘರ್ ಎಂದು ಮರು ನಾಮಕರಣ ಮಾಡುವಂತೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೇ ಜನರು ಮತ್ತು ಉಲೇಮಾರಿಂದ ಬೇಡಿಕೆ ಇತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಅವರ ಜೊತೆಗೆ ಈ ಸಂಬಂಧ ನಾನು ಚರ್ಚೆ ಮಾಡುತ್ತೇನೆ," ಎಂದು ಅವರು ತಿಳಿಸಿದರು.












Click it and Unblock the Notifications