Darshan: ದರ್ಶನ್ ಆಪ್ತ ನಟರಿಗೂ ಎದುರಾಯ್ತು ಸಂಕಷ್ಟ: ರೇಣುಕಾಸ್ವಾಮಿ ಪ್ರಕರಣದ ಕುರಿತು ಚಿಕ್ಕಣ್ಣ ಹೇಳಿದ್ದೇನು?

ಬೆಂಗಳೂರು,ಜೂನ್‌ 18: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪೊಲೀಸರ ಅತಿಥಿಯಾಗಿದ್ದಾರೆ. ದರ್ಶನ್‌ ಹಾಗೂ ಪವಿತ್ರಗೌಡ ಸೇರಿದಂತೆ ಬರೋಬ್ಬರಿ 15 ಕ್ಕೂ ಹೆಚ್ಚು ಜನರನ್ನ ಪೊಲೀಸ್ರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರ ಆಪ್ತರಿಗೆ ಸಂಕಷ್ಟ ಎದುರಾಗಿದೆ. ದರ್ಶನ್ ಆಪ್ತ ಚಿಕ್ಕಣ್ಣ ಅವರನ್ನ ಜೂನ್ 17 ರಂದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಮತ್ತೋರ್ವ ನಟ ಯಶಸ್ ಸೂರ್ಯ ಅವರಿಗೂ ಸಂಕಷ್ಟ ಶುರುವಾಗುವ ಸಾಧ್ಯತೆ ಇದೆ.

I Have No Information About The Renukaswamy Murder Case Says Chikkanna

ರೇಣುಕಾ ಸ್ವಾಮಿ ಕೊಲೆಗೆ ಮುನ್ನ ಅಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಚಿಕ್ಕಣ್ಣ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದ ಕುರಿತು ಚಿಕ್ಕಣ್ಣ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣ ಅವರನ್ನ ಪೊಲೀಸರು ವಿಚಾರಣೆ ಒಳಪಡಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯಾಗಲಿ, ಇನ್ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ನನಗೆ ದರ್ಶನ್ ಕರೆ ಮಾಡಿ ಊಟಕ್ಕೆ ಬರುವಂತೆ ಕರೆದಿದ್ರು. ಒಟ್ಟಿಗೆ ಊಟ ಮಾಡೋಣ ಬಾ ಚಿಕ್ಕಣ್ಣ ಅಂತಾ ಕರೆದಿದ್ರು. ಹೀಗಾಗಿ ನಾನು ಊಟ ಮಾಡಲೆಂದು ಸ್ಟೋನಿ ಬ್ರೂಕ್ ರೆಸ್ಟೊರೆಂಟ್‌ಗೆ ಹೋಗಿದ್ದೆ ಎಂದು ರೇಣುಕಾ ಸ್ವಾಮಿ ಕೊಲೆಗೆ ಮುನ್ನ ರೆಸ್ಟೊರೆಂಟ್‌ ನಲ್ಲಿ ದರ್ಶನ್ ಜೊತೆಗೆ ಇದ್ದ ಕಾರಣವನ್ನು ಹಾಸ್ಯನಟ ಚಿಕ್ಕಣ್ಣ ಪೊಲೀಸ್ ಠಾಣೆಗೆ ತೆರಳಿ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಗೊತ್ತಾಗಿದ್ದೇ ನ್ಯೂಸ್ ನಲ್ಲಿ ನೋಡಿದಾಗ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕೊಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ತನಿಖಾಧಿಕಾರಿಗಳ ಎದುರು ಹಾಸ್ಯ ನಟ ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

ನಟ ದರ್ಶನ್ ಹಾಗೂ ನಾನು ಗೆಳೆಯರು ಸಾಮಾನ್ಯವಾಗಿ ಹಾಗಾಗ ಊಟಕ್ಕೆ ಸೇರುತ್ತಿದ್ದೆವು. ಅವತ್ತು ಕೂಡ ನನಗೆ ಊಟಕ್ಕೆ ಕರೆದಿದ್ದರಿಂದ ನಾನು ರೆಸ್ಟೊರೆಂಟ್‌ಗೆ ತೆರಳಿ ದರ್ಶನ್‌ರೊಂದಿಗೆ ಊಟ ಮಾಡಿಕೊಂಡು ಅಲ್ಲಿಂದ ನಾನು ಹೊರಟೆ. ಬಳಿಕ ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯಾಗಲಿ, ಇನ್ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಪ್ರಕರಣದ ಬಗ್ಗೆ ನನಗೆ ಗೊತ್ತಾಗಿದ್ದೇ ನ್ಯೂಸ್ ನಲ್ಲಿ ನೋಡಿದಾಗ. ಈ ಕೊಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಹಾಸ್ಯ ನಟ ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+