ಎಲ್ಲಾ ಕಡೆ ನಾನೇ ಇರಬೇಕು ಎಂಬ ದುರಾಸೆ ನನಗಿಲ್ಲ: ಎಂ ಬಿ ಪಾಟೀಲ್ ಹೀಗೆ ಹೇಳಿದ್ದು ಯಾರಿಗೆ?
ಬೆಂಗಳೂರು,ಡಿಸೆಂಬರ್ 18: ಲೋಕಸಭಾ ಚುನಾವಣೆಯಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲ್ಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ನಡೆಸಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನವನ್ನ ಶಮನಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆ ಕಾಂಗ್ರೆಸ್ ಮುಂದಾಗಿದೆ.
ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕುರಿತು ಮಾಧ್ಯಮಗಳ ಜೊತೆಗೆ ಸಚಿವ ಎಂ ಬಿ ಪಾಟೀಲ್ ಮಾತನಾಡಿ, ನಾನು ಸಚಿವನಾಗಿದ್ದೇನೆ ಪ್ರಚಾರ ಸಮಿತಿ ಅಧ್ಯಕ್ಷನೂ ಆಗಿದ್ದೇನೆ. ನನ್ನ ಕೇಳಿದರೆ ನಾನೇ ಹೇಳುತ್ತೇನೆ ಮತ್ತೊಬ್ಬರಿಗೆ ಅವಕಾಶ ಕೊಡಿ ಅಂತ, ಎಲ್ಲಾ ಕಡೆ ನಾನೇ ಇರಬೇಕು ಎಂಬ ದುರಾಸೆ ನನಗಿಲ್ಲ. ಪ್ರಚಾರ ಸಮಿತಿ ಅಧ್ಯಕ್ಷರನ್ನು ಬೇರೆ ಯಾರಿಗಾದರೂ ಮಾಡುವುದಾದರೆ ಮಾಡಿಕೊಳ್ಳಿ ಎಂದು ಹೇಳುತ್ತೇನೆ ಎಂದರು.

ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ ವಿಚಾರವಾಗಿ ಮಾತನಾಡಿ, ಕಾರ್ಯಾಧ್ಯಕ್ಷರನ್ನ ಬದಲಾವಣೆ ಮಾಡಿದ್ರೆ ತಪ್ಪೇನಿಲ್ಲ. ನಾನು ಸಚಿವನಾಗಿದ್ದೇನೆ,ಬೇಕಾದ್ರೆ ಪ್ರಚಾರ ಸಮಿತಿ ಯಾರಿಗಾದರೂ ಮಾಡಿ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ಮುಖ್ಯಮಂತ್ರಿ ಭೇಟಿಗೆ ಪ್ರಧಾನಿ ಕಾಲಾವಕಾಶ ನೀಡಿದ ವಿಚಾರವಾಗಿ ಮಾತನಾಡಿ, ವರ್ಷಾನುಗಟ್ಟಲೆ ಅವಕಾಶ ಕೊಟ್ಟಿರಲಿಲ್ಲ. ರಾಜ್ಯದ ಸಮಸ್ಯೆಗಳು, ರಾಜ್ಯದ ಅನುದಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದಾಗ ಸಮಯ ಕೇಳಿದಾಗ ಕೊಟ್ಟಿರಲಿಲ್ಲ. ಈಗ ಕೊನೆ ಮೂಮೆಂಟ್‌ನಲ್ಲಿ ಅವಕಾಶ ಕೊಟ್ಟಿದ್ದಾರೆ, ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಕೋಡ್ ಆಫ್ ಕಂಡಕ್ಟ್ ಬಂದು ಬಿಡ್ತಿತ್ತು. ವಿರೋಧ ಪಕ್ಷದ ಮುಖ್ಯಮಂತ್ರಿಗಳಿರಬಹುದು ಸ್ವಪಕ್ಷದ ಮುಖ್ಯಮಂತ್ರಿಗಳಿರಬಹುದು ಈ ರೀತಿ ಕಡೆಗಣಿಸಿರುವ ಇತಿಹಾಸ ಇರಲಿಲ್ಲ.
ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಈ ರೀತಿ ನಡೆಸಿಕೊಂಡಿರಲಿಲ್ಲ. ಈ ರೀತಿಯಾಗಿ ಮುಖ್ಯಮಂತ್ರಿಗಳನ್ನು ನಡೆಸಿಕೊಂಡಿಲ್ಲ, ಪ್ರಧಾನಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನ ಕಡೆಗಣಿಸುತ್ತಾರೆ. ಆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು ಅನುದಾನ ಸಿಕ್ಕಬಾರದು ಅಂತ ಮನಸ್ಥಿತಿ ಇದ್ದಂತೆ ಕಾಣುತ್ತದೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ಹೋಗುತ್ತಿದ್ದಾರೆ. ಶಾಸಕರನ್ನ ನೇಮಕಾತಿ ಮಾಡಬೇಕು ಅಂತ ಚಿಂತನೆ ನಡೆದಿದೆ, ಲೋಕಸಭಾ ಚುನಾವಣೆಯ ನಂತರ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂಬ ಮಾಹಿತಿ ಇದೆ. ಅಧಿಕಾರ ಕೆಲವೇ ಜನರ ಬಳಿ ಇರಬಾರದು. ನನ್ನ ಇಲಾಖೆಯಲ್ಲೂ ಮೂರು ನಿಗಮಗಳು ಬರುತ್ತವೆ, ನನ್ನದು ಯಾವುದೇ ಅಭ್ಯಂತರ ಇಲ್ಲ ಯಾರನ್ನಾದರೂ ನೇಮಕ ಮಾಡಬಹುದು. ಎಲ್ಲರಿಗೂ ಅಧಿಕಾರ ಹಂಚಬೇಕು, ಮೂರು ಬಾರಿ ನಾಲ್ಕು ಬಾರಿ ಆಗಿರುವ ಶಾಸಕರಿದ್ದಾರೆ. ಆರೇಳು ಬಾರಿ ಗೆದ್ದಿರುವವರೂ ಇದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಅಂತಿಮವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಜಾತಿ ಗಣತಿ ವಿರೋಧಕ್ಕೆ ಸಹಿ ಹಾಕಿದ ವಿಚಾರವಾಗಿ ಮಾತನಾಡಿ, ಯಾರು ಮುಚ್ಚು ಮರೆ ಇಲ್ಲ. ಎಲ್ಲಾರು ಮಾಡಿರೋದೆ ಇದು. ನಾವು ಜಾತಿಗಣತಗೆ ವಿರೋಧ ಮಾಡುತ್ತಿಲ್ಲ, ಲಿಂಗಾಯತ ಸಮುದಾಯಗಳನ್ನೆಲ್ಲಾ ಒಟ್ಟಿಗೆ ಕೌಂಟ್ ಮಾಡಿ ಜನಸಂಖ್ಯೆ ನಿರ್ಧಾರ ಮಾಡಿ. ವರದಿ ವಿರೋಧಿಸಿ ಅಲ್ಲ, ಈ ಗೊಂದಲ ಸರಿಪಡಿಸಿ ಅಂತ ನಮ್ಮ ವಾದ. ಸಮೀಕ್ಷೆಯನ್ನ ಜಾತಿಗಣತಿ ಅಂತ ಹೇಳೋಕೆ ಬರಲ್ಲ. ಜಾತಿಗಣತಿ ಮಾಡುವುದು ಕೇಂದ್ರ ಸರ್ಕಾರ. ಇರುವ ಡಾಟದಲ್ಲೇ ಗೊಂದಲ ಸರಿಮಾಡಬಹುದಲ್ವಾ? ಸಿಎಂ ಮೇಲೆ ವಿಶ್ವಾಸ ಇದೆ, ಸರಿಪಡಿಸುತ್ತಾರೆ ಎಂದು ಎಂ ಬಿ ಪಾಟೀಲ್ ಹೇಳಿದರು.












Click it and Unblock the Notifications