ಮೈತ್ರಿಗೆ ಮುಳುವಾಗುತ್ತಾ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ: ನಿಖಿಲ್‌ ಕುಮಾರಸ್ವಾಮಿ ಹೇಳಿದ್ದೇನು?

ಕೊಪ್ಪಳ, ಸೆಪ್ಟೆಂಬರ್‌ 04: ರಾಜ್ಯ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್‌ ಕೊಡಲು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, 28 ಲೋಕಸಭಾ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಜಯಗಳಿಸಿದ್ದರು. ಇದೀಗ ಮೈತ್ರಿ ನಾಯಕರಿಗೆ ಚನ್ನಪಟ್ಟಣದ ಅಭ್ಯರ್ಥಿ ಆಯ್ಕೆಗೆ ದೊಡ್ಡ ಸವಾಲಾಗಿದೆ.

ಕಳೆದ ಲೋಕಸಭಾ ಚುಣಾವಣೆಯ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಅಳಿಯ ಡಾ. ಮಂಜುನಾಥ್‌ ಅವರ ಗೆಲುವಿಗೆ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್‌ ಶ್ರಮಿಸಿದ್ದು, ಇದೀಗ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನ ಬಿಜೆಪಿಗೆ ಬಿಟ್ಟುಕೊಂಡಲು ಜೆಡಿಎಸ್‌ ನಾಯಕರು ವಿರೋಧ ವ್ಯಕ್ತಪಸಿದ್ದಾರೆ.

I Have Never Openly Spoken About Competition In Channapatna Said Nikhil Kumaraswamy

ಇತ್ತ ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಸಿ ಪಿ ಯೋಗೇಶ್ವರ್‌ ಅವರಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡದಿದ್ದರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಒಂದು ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧೆ ನಡೆಸಿದರೇ ಮೈತ್ರಿಗೆ ಮುಳುವಾಗುತ್ತಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್‌ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಬೇಕು ಎನ್ನುವ ಚರ್ಚೆ ಜೆಡಿಎಸ್‌ ಘಟಕದಲ್ಲಿ ಕೇಳಿ ಬರುತ್ತಿದ್ದು, ಈ ಕುರಿತು ಸ್ವತಃ ನಿಖಿಲ್‌ ಕುಮಾರಸ್ವಾಮಿ ಅವರೇ ಪ್ರತಿಕ್ರಿಯಿಸಿದ್ದಾರೆ. ನಾನು ಚನ್ನಪಟ್ಟಣದಲ್ಲಿ ಸ್ಪರ್ಧೆ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ . ಆದರೆ, ಪಕ್ಷ ಸಂಘಟನೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಚನ್ನಪಟ್ಟಣ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಪ್ರತಿನಿಧಿಸಿದ ಕ್ಷೇತ್ರ. ಕುಮಾರಸ್ವಾಮಿ ಯವರು ದೆಹಲಿಗೆ ಹೋಗಿದ್ದಾರೆ, ನಾನು ನಿರಂತರವಾಗಿ ಕ್ಷೇತ್ರದಲ್ಲಿ ಭೇಟಿ ನೀಡ್ತಿದ್ದೇನೆ. ಜನರ ಅಭಿಪ್ರಾಯ ಸಂಗ್ರಹ ಮಾಡಿ ವರಿಷ್ಠರ ಮುಂದೆ ಇಡ್ತೇನೆ. ಟಿಕೆಟ್ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಅಲ್ಲಿ ಯಾರೇ ಆಗಲಿ ಎನ್ ಡಿಎ ಅಭ್ಯರ್ಥಿ ಸ್ಪರ್ಧೆ ಮಾಡುತ್ತಾರೆ.

ಬಿಜೆಪಿ ನಾಯಕರಾದ ಸಿ ಪಿಯೋಗೇಶ್ವರ್ ಅವರು ಸದ್ಯ ಎಂಎಲ್ಸಿಯಾಗಿದ್ದಾರೆ. ಅವರ ಅಧಿಕಾರವಧಿ ಇನ್ನು ಇದೆ, ಕಾಂಗ್ರೆಸ್ ನ್ನು ದೂರ ಇಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ, ನಾನು ಕಾರ್ಯಕರ್ತನಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ಅವರಿಗೆ ಐದು ವರ್ಷದ ಅಧಿಕಾರ ನೀಡಿ ಚನ್ನಪಟ್ಟಣ ಜನ ಗೆಲ್ಲಿಸಿದ್ದಾರೆ. ಎರಡು ಪಕ್ಷದ ನಾಯಕರು ಸೇರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ, ಯಾರಿಗೆ ಅವಕಾಶ ಅನ್ನೋ ಬಗ್ಗೆ ಜನ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಐದು ಗ್ಯಾರಂಟಿಗಳನ್ನು ಸರ್ಕಾರ ಸರಿಯಾಗಿ ಅನುಷ್ಠಾನ ಆಗಿಲ್ಲ. ಗ್ಯಾರಂಟಿ ನೀಡಿರೋ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಇವಾಗ ಏನಾಗಿದೆ? ಹೆಚ್‌ ಡಿ ಕುಮಾರಸ್ವಾಮಿಯವರು ರಾಜಕಾರಣದಲ್ಲಿ ಹಿಟ್ ಆಂಡ್ ರನ್ ಮಾಡಿಲ್ಲ. ಎಲ್ಲಾ ದಾಖಲಾತಿ ಗಳನ್ನು ಇಟ್ಟುಕೊಂಡು ಮಾತನಾಡುತ್ತಾರೆ, ಯಾವಾಗ ಏನು ಮಾಡಬೇಕೋ, ಬಿಡುಗಡೆ ಮಾಡಬೇಕೋ ಅದು ಗೊತ್ತು. ನಾವು ಎಲ್ಲಾ ಸಮಾಜ ಪರವಾಗಿ ಕೆಲಸ ಮಾಡುತ್ತೇವೆ, ಬಿಜೆಪಿ ಜೆಡಿಎಸ್ ಸಂಬಂಧ ನಿರಂತರವಾಗಿ ಇರಬೇಕು ಅನ್ನೋದು ಎಲ್ಲರ ಬಯಕೆಯಾಗಿದೆ. ಜೆಡಿಎಸ್ ರಾಜ್ಯಾದ್ಯಕ್ಷ ಸ್ಥಾನ ಮುಂದಿನ ದಿನದಲ್ಲಿ ಯಾರಿಗೆ ಅನ್ನೋದು ತೀರ್ಮಾನ ವಾಗಲಿದೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲಿ ಅಭಿಯಾನ ನಡೆಯುತ್ತಿದೆ. ಜನತಾದಳ ಅಂದ್ರೆ ಜನತಾ ಪರಿವಾರ ಎನ್ನುವುದು ದೇವೆಗೌಡರ್ ಕಾಲದಿಂದಲೂ ಬಂದಿದೆ, ಬಿಜೆಪಿ ಜೊತೆಗೆ ಕೈಜೋಡಿಸಿದ್ದೇವೆ ಎಂದರೆ ನಮ್ಮ ಸಿದ್ಧಾಂತಗಳನ್ನು ಮರೆತಿಲ್ಲ.ಸಿದ್ಧಾಂತಗಳನ್ನು ಮಾರಾಟ ಮಾಡಿಕೊಂಡಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಅವರು ತಿಳಿಸಿದರು.

ನಟ ದರ್ಶನ ಜೈಲು ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಜೈಲಲ್ಲಿ‌ ತಾರತಮ್ಯ ನಡೆದಿರೋ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ, ಮುಂದಿನ ದಿನದಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದ ನಿಖಿಲ್ ಕುಮಾರಸ್ವಾಮಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+