ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಹೆಚ್ ಡಿ ಕುಮಾರಸ್ವಾಮಿ
ದಾವಣಗೆರೆ, ಅಕ್ಟೋಬರ್ 14: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಸಾಕಷ್ಟು ಮಹತ್ವವನ್ನ ಪಡೆದಿದ್ದು, ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಲಿದೆ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಪ್ರತಿಷ್ಠೆಯ ಕ್ಷೇತ್ರವಾದ್ರೆ, ಡಿ ಕೆ ಬದ್ರರ್ಸ್ ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ ಡಿ ಕಮಾರಸ್ವಾಮಿ ಹಾಗೂ ಡಿ ಕೆ ಶಿವಕುಮಾರ್ ಹೆಚ್ಚು ಆಕ್ಟೀವ್ ಆಗಿದ್ದು, ಅಭ್ಯರ್ಥಿ ಆಯ್ಕೆಯೇ ದೊಡ್ಡ ತಲೆನೋವಾಗಿದೆ.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಯಾರು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಾನೇ ಅಭ್ಯರ್ಥಿ, ಎನೇ ಆಗಲಿ ಎನ್ ಡಿಎ ಅಭ್ಯರ್ಥಿ ಕುಮಾರಸ್ವಾಮಿನೇ ಎಂದು ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.

ಹುಬ್ಬಳ್ಳಿ ಪ್ರಕರಣದ ಕೇಸ್ ಗಳನ್ನು ಹಿಂಪಡೆಯಲು ಸರ್ಕಾರ ನಿರ್ಧಾರ ವಿಚಾರವಾಗಿ ಮಾತನಾಡಿ, ಹುಬ್ಬಳ್ಳಿ ನಡೆದ ಹಿಂದಿನ ಹಲವು ಪ್ರಕರಣ ಗಳಲ್ಲಿನ ಕೇಸ್ ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಕೇಸ್ ಗಳನ್ನು ವಾಪಾಸ್ ಪಡಿಯಬೇಕಾದ್ರೆ ಡೆಪ್ತ್ ಏನಿದೆ ಅಂತಾ ನೋಡಬೇಕು, ಇದ್ರಿಂದ ಗಲಾಭೆಕೋರರು ಬಚಾವ್ ಆಗಬಹುದು. ಗಲಾಭೆಕೋರರಿಗೆ ಸರ್ಕಾರದ ಕಡೆಯಿಂದಲೇ ರಕ್ಷಣೆ ನೀಡಲಾಗುತ್ತಿದೆ, ದ್ವೇಷದ ರಾಜಕಾರಣ ಒಂದು ಕಡೆ ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಕಾಂಗ್ರೆಸ್ ಗೆ ಇಷ್ಟ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ಜಾಹೀರಾತು ನೀಡಿದ ವಿಚಾರವಾಗಿವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ಜಾಹೀರಾತಿಗಾಗಿ 17 ಕೋಟಿ ಹಣ ವ್ಯಯ ಮಾಡಿದೆ. ಅದ್ರಲ್ಲಿ ಒಂದು ಪಂಚಾಯತಿಯಲ್ಲಿ ಮಾಡೆಲ್ ಮಾಡಬಹುದಿತ್ತು, ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡಿಯಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ವಿರುದ್ಧದ ಪ್ರಕರಣ ಕುರಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕುಮಾರಸ್ಬಾಮಿ, ನ್ಯಾಯಾಲದಲ್ಲಿ ಫೈಟ್ ಮಾಡೋಣ ಚರ್ಚೆ ಬೇಡ. ದೂರು ಕೊಟ್ಟಿದ್ದಾರೆ ಅದರ ಹಿಂದೆ ಯಾರಿದ್ದಾರೆ ಗೊತ್ತಿದೆ. ನನ್ನ ಕೇಸ್ 2012 ರಿಂದ ಎಸ್ ಐ ಟಿ ಯಲ್ಲಿ ನಡೆಯುತ್ತಿದೆ, ಹತ್ತು ವರ್ಷ ಆದ್ರೂ ಅದನ್ನ ಯಾಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದೀರಿ. ತನಿಖೆ ನಡೆಯುತ್ತಿದೆ ಕೊರ್ಟ್ ನಲ್ಲಿ ಉತ್ತರ ನೀಡೋಣ, ನಾನು ಸಂವಿಧಾನ ಬದ್ದ ರಾಜ್ಯಪಾಲರ ವಿಷಯಕ್ಕೆ ಸಂಭಂಧಿಸಿದಂತೆ ಮಾತಾಡಿದ್ದೆ, ನನ್ನ ಮೇಲೆ ಕೇಸ್ ಹಾಕಿದ್ದಾರೆ ಕೋರ್ಟ್ ನಲ್ಲಿ ಉತ್ತರ ಕೊಡುವೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಅನ್ಯಾಯ ಅಭಿಯಾನದ ಕುರಿತು ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಪೈನಾನ್ಸ್ ಕಮಿಷನ್ ರಚನೆಯಾಗಿದೆ. ಪೈನಾನ್ಸ್ ಕಮಿಷನ್ ಪ್ರತಿ 5 ವರ್ಷಕ್ಕೊಮ್ಮೆ ಯಾವ್ಯಾವ ರಾಜ್ಯಕ್ಕೆ ಏನೇನು ಕೊಡಬೇಕೆಂಬುದನ್ನು ತೀರ್ಮಾನ ಮಾಡುತ್ತಾರೆ. 16 ನೇ ಪೈನಾನ್ಸ್ ಕಮಿಷನ್ ಮೊನ್ನೆ ರಾಜ್ಯಕ್ಕೆ ಬಂದು ಹೋಗಿದೆ. ಪ್ರತಿ ರಾಜ್ಯಕ್ಕು ಭೇಟಿ ಕೊಟ್ಟು ಅವರ ಕಡೆಯಿಂದ ಮಾಹಿತಿಯನ್ನು ತೆಗೆದುಕೊಂಡು
ಆ ಗೈಡ್ ಲೈನ್ ಗಳ ಪ್ರಕಾರ ಹಣ ನೀಡುತ್ತೇ 1952 -1953 ರಲ್ಲಿ ಗೈಡ್ ಲೈನ್ ಆಗಿದೆ.
ಸರ್ಕಾರಗಳು ಬಂದ ಮೇಲೆ ರಾಜ್ಯದ ಅಭಿವೃದ್ಧಿಗಳ ಮೇಲೆ ಕೆಲ ಗೈಡ್ ಲೈನ್ ಗಳು ಬದಲಾವಣೆ ಆಗಿದೆ. ಇದು ಕೇಂದ್ರದಲ್ಲಿರುವ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದಲ್ಲ ರಾಷ್ಟ್ರಪತಿಗಳಿಂದ ಪೈನಾನ್ಸ್ ಕಮಿಷನ್ ರಚನೆಯಾಗಿರುತ್ತದೆ. ಈ ಸರ್ಕಾರ ಏನ್ ಹೇಳತಿದೆ ಆರ್ಥಿಕ ತಜ್ಞರು ಏನ್ ಹೇಳ್ತಾರೆ ಅದರ ಮೇಲೆ ಚರ್ಚೆ ಮಾಡೋಣ. ಪೈನಾನ್ಸ್ ಕಮಿಷನ್ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಐದು ವರ್ಷ ರಾಜ್ಯದಲ್ಲಿ ಯಾರು ಸಿ ಎಂ ಆಗಿರುತ್ತಾರೆ. ದೇಶದಲ್ಲಿ ಏನ್ ಬದಲಾವಣೆ ಆಗುತ್ತೇ ನೋಡೋಣ ಎಂದು ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications