• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ರಾಜಕೀಯ ಹೈಡ್ರಾಮ : ಯಾರು, ಏನು ಹೇಳಿದರು?

|
   ಕರ್ನಾಟಕ ರಾಜಕೀಯದ ಹೈ ಡ್ರಾಮಾ ಬಗ್ಗೆ ಯಾರು ಏನು ಹೇಳಿದರು?

   ಬೆಂಗಳೂರು, ಜುಲೈ 10 : ಕರ್ನಾಟಕದ ರಾಜಕೀಯ ಹೈಡ್ರಾಮ 5ನೇ ದಿನವೂ ಮುಂದುವರೆದಿದೆ. ಶಾಸಕ ಸ್ಥಾನಕ್ಕೆ ಇದುವರೆಗೂ 16 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.

   ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ವಿವಿಧ ಪಕ್ಷಗಳ ನಾಯಕರು, ಜನರು ರಾಜಕಾರಣದ ಬಗ್ಗೆ ಸ್ಟೇಟಸ್‌ಗಳನ್ನು ಹಾಕುತ್ತಿದ್ದಾರೆ. ಟ್ವೀಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

   ರಣರಂಗವಾದ ವಿಧಾನಸೌಧ: ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ಜಟಾ-ಪಟಿ

   ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯಕ್ಕಿಂತ ಕರ್ನಾಟಕದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಅತ್ತ ಮುಂಬೈನಲ್ಲಿ ಡಿ.ಕೆ.ಶಿವಕುಮಾರ್ ಅವರು ಹೈಡ್ರಾಮ ನಡೆಸಿದ್ದಾರೆ. ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

   ರಾಜೀನಾಮೆ ನೀಡಿದ ಸುಧಾಕರ್‌ ಗೆ ದಿಗ್ಬಂದನ ಹಾಕಿದ ಕೈ ಮುಖಂಡರು!

   ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ. ಹೈಡ್ರಾಮಕ್ಕೆ ಎಂದು ತೆರೆ ಬೀಳಲಿದೆ ಎಂದು ಕಾದು ನೋಡಬೇಕಿದೆ....

   ಬಿಜೆಪಿಯ ಹುಚ್ಚು ಕನಸು

   ಬಿಜೆಪಿಯ ಹುಚ್ಚು ಕನಸು

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, 'ಪ್ರಧಾನಿ @narendramodiಸರ್ವಾಧಿಕಾರ, ಸ್ವಾಭಿಮಾನಿ ಕರ್ನಾಟಕದಲ್ಲಿ ನಡೆಯದು. ಅಡ್ಡಹಾದಿಯ ಮೂಲಕ,ಹಣದ ಥೈಲಿ ಹಿಡಿದುಕೊಂಡು ಅಧಿಕಾರಕ್ಕೆ ಬರುವ @BJP4India ಹುಚ್ಚುಕನಸನ್ನು ನನಸು ಮಾಡಲು ನಾವು ಬಿಡುವುದಿಲ್ಲ. ನಮ್ಮ ಈ ಹೋರಾಟ ರಾಜ್ಯದಾದ್ಯಂತ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

   ಎರಡು ಮುಖದ ನಟನೆ

   ಎರಡು ಮುಖದ ನಟನೆ

   'ಸಿದ್ದರಾಮಯ್ಯ ಅವರೇ, ನಿಮ್ಮ ಸೂಚನೆ ದಿಂದ ನಿಮ್ಮ ಸ್ನೇಹಿತರು ರಾಜೀನಾಮೆ ಕೊಟ್ಟಿದಾರೆ ,ಈವಾಗ ನರೇಂದ್ರ ಮೋದಿ ಮತು ಅಮಿತ್ ಶಾಹ್ ಅವರ ಮೇಲು ಯಾಕ ಹಾಕತೀರ.? ನಿಮ್ಮ ಈ ಎರಡು ಮುಖ ನಟನೆ ಜನರಿಗೆ ತಿಳಿದಿದೆ' ಎಂದು ಟ್ವೀಟ್ ಮಾಡಲಾಗಿದೆ.

   ಶಾಸಕರನ್ನು ಕೂಡಿ ಹಾಕಲು ನಾಚಿಕೆಯಾಗಬೇಕು

   ಶಾಸಕರನ್ನು ಕೂಡಿ ಹಾಕಲು ನಾಚಿಕೆಯಾಗಬೇಕು

   ಕರ್ನಾಟಕದಲ್ಲಿ ನಾಚಿಗೇಡಿನ ರಾಜಕೀಯ ನಡೆಯುತ್ತಿದೆ. ಶಾಸಕ ಸುಧಾಕರ್ ಅವರನ್ನು ವಿಧಾನಸೌಧದಲ್ಲಿ ಕೂಡಿಹಾಕಲಾಗಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

   ಕರ್ನಾಟಕ ಕಾಂಗ್ರೆಸ್‌ ಟ್ವೀಟ್

   ಕರ್ನಾಟಕ ಕಾಂಗ್ರೆಸ್‌ ಟ್ವೀಟ್

   ಕರ್ನಾಟಕ ಕಾಂಗ್ರೆಸ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, '@narendramodi ಅವರು ಈ ಹಿಂದೆ ಭಾಷಣದಲ್ಲಿ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಕೊಡುವುದಾಗಿ ಹೇಳಿದ್ದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎನ್ನುವ ಭರವಸೆ ನೀಡಿದ್ದರು. ಆದರೆ, ಇದೀಗ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಆಪರೇಷನ್ ಕಮಲ ಮಾಡುತ್ತಿದ್ದಾರೆ' ಎಂದು ಬಿಜೆಪಿ ವಿರುದ್ಧ ಆರೋಪ ಮಾಡಲಾಗಿದೆ.

   ಡಾ.ಜಿ.ಪರಮೇಶ್ವರ ಟ್ವೀಟ್

   ಡಾ.ಜಿ.ಪರಮೇಶ್ವರ ಟ್ವೀಟ್

   ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಟ್ವೀಟ್ ಮಾಡಿದ್ದು, 'ಮಾನಮರ್ಯಾದೆಯ ಬಗ್ಗೆ ಮಾತನಾಡಲು ನಿಮಗೆ, ನಿಮ್ಮ ಪಕ್ಷಕ್ಕೆ ಯಾವ ನೈತಿಕ ಹಕ್ಕೂ ಇಲ್ಲ, @BSYBJP ಅವರೆ! ನೀವು ನಮ್ಮ ಶಾಸಕರನ್ನು ಮುಂಬೈಯಲ್ಲಿ ಅಕ್ಷರಶಃ ಅಪಹರಿಸಿ ಕಟ್ಟಿಹಾಕಿ, ಸರಕಾರ ಬೀಳಲಿ ಎಂದು ಚಾತಕಪಕ್ಷಿಯಂತೆ ಕಾದು ಕುಳಿತಿರುವುದು ನಿಮ್ಮ ಅಧಿಕಾರದಾಹವನ್ನು ಜಗಜ್ಜಾಹಿರು ಮಾಡಿದೆ' ಎಂದು ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka politics witnessing for Hydrama after 12 Congress MLAs resigned for the post. Who said what about the issue.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more