ಲಾಕ್ ಡೌನ್: ಮಹತ್ವದ ಅಭಿಪ್ರಾಯ ವ್ಯಕ್ತ ಪಡಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

ಬೆಂಗಳೂರು, ಏಪ್ರಿಲ್ 30: ಲಾಕ್ ಡೌನ್ ವಿಸ್ತರಣೆಯಾಗುತ್ತಾ ಹೋದರೆ, ಅದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮಾತನಾಡಿದ್ದಾರೆ.

"ಇದೇ ರೀತಿ ಲಾಕ್ ಡೌನ್ ಮುಂದುವರಿದರೆ, ಕೊರೊನಾ ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚು ಹಸಿವಿನಿಂದಾಗಿ ಭಾರತದಲ್ಲಿ ಜನ ಸಾವನ್ನಪ್ಪಬಹುದು" ಎನ್ನುವ ಆತಂಕವನ್ನು ನಾರಾಯಣಮೂರ್ತಿ ವ್ಯಕ್ತ ಪಡಿಸಿದ್ದಾರೆ.

"ನಮ್ಮ ದೇಶ ಇಂತಹ ಪರಿಸ್ಥಿತಿಯಲ್ಲಿ (ಲಾಕ್ ಡೌನ್) ತುಂಬಾ ದಿನ ಮುಂದವರಿಯಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ನಾವು ಮೊದಲು ಅರಿತುಕೊಳ್ಲಬೇಕು" ಎಂದು ನಾರಾಯಣಮೂರ್ತಿ, ಉದ್ಯಮಿಗಳ ವೆಬಿನಾರ್ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.

Lengthy Lockdown Will Kill More People Than Covid: NR Narayana Murthy

"ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದ ಸಾವಿನ ಪ್ರಮಾಣ 0.25-0.5% ರಷ್ಟು ಮತ್ತು ಪಾಸಿಟೀವ್ ಪ್ರಕರಣಗಳು ತೀರಾ ಕಡಿಮೆ" ಎಂದು ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

"ನಮ್ಮ ದೇಶದಲ್ಲಿ ಸರಾಸರಿ ಒಂಬತ್ತು ಮಿಲಿಯನ್ ಜನರು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ, ಇದರಲ್ಲಿ ಪ್ರಮುಖವಾಗಿ ಮಾಲಿನ್ಯದ ಕಾರಣದಿಂದ. ಕಳೆದ ಎರಡು ತಿಂಗಳಲ್ಲಿ ಕೊರೊನಾ ವೈರಸ್ ನಿಂದ ಸುಮಾರು ಒಂದು ಸಾವಿರ ಜನ ಸಾವನ್ನಪ್ಪಿದ್ದಾರೆ".

"ನಮ್ಮ ದೇಶದ ಒಟ್ಟಾರೆ ಸಾವಿನ ಪ್ರಮಾಣವನ್ನು ನೋಡಿದಾಗ, ಕೊರೊನಾದಿಂದ ಸಾವನ್ನಪ್ಪಿರುವ ಸಂಖ್ಯೆ ನೋಡಿ, ನಾವೆಲ್ಲಾ ದಿಗಿಲು ಪಡಬೇಕಾಗಿಲ್ಲ" ಎಂದು ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+