SWR: ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಸೇವೆಗಳ ವಿಸ್ತರಣೆ, ವಿವರ ತಿಳಿಯಿರಿ

ಬೆಂಗಳೂರು, ಜುಲೈ 25: ಪ್ರಯಾಣಿಕರ ಸಂಚಾರ ಹೆಚ್ಚಿರುವ ರೈಲ್ವೆ ಮಾರ್ಗಗಳಲ್ಲಿ ಒಂದಾಗಿರುವ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಮಧ್ಯದ ನಿತ್ಯ ಸಂಚರಿಸಲಿರುವ ಎರಡು ವಿಶೇಷ ಎಕ್ಸ್‌ಪ್ರೆಸ್ (07339/40) ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ ಬೆಂಗಳೂರು ನಿಲ್ದಾಣದ ವರೆಗೆ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ 07339) ಸೇವೆಯನ್ನು ಜುಲೈ 28 ರಿಂದ ಸೆಪ್ಟೆಂಬರ್ 30 ರವರೆಗೆ ನೃರುತ್ಯ ರೈಲ್ವೆ ವಿಸ್ತರಿಸಿದೆ. ಈ ರೈಲು ನಿತ್ಯ ರಾತ್ರಿ 11.15ಕ್ಕೆ ಹುಬ್ಬಳ್ಳಿಯಿಂದ ಹೊರಟು ದಾವಣಗೆರೆ, ಅರಸೀಕೆರೆ, ತುಮಕೂರು ಮಾರ್ಗವಾಗಿ ಬೆಂಗಳೂರನ್ನು ಬೆಳಗ್ಗೆ 7 ಗಂಟೆ ಸುಮಾರಿಗೆ ತಲುಪಲಿದೆ.

Hubballi To Bengaluru Route Two Special Railway Service Extension,Know Train Details

ಇತ್ತ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುವ ವಿಶೇಷ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ 07340) ಸಂಚಾರವನ್ನು ಜುಲೈ 29 ರಿಂದ ಅಕ್ಟೋಬರ್ 1 ರವರೆಗೆ ವಿಸ್ತರಿಸಲಾಗಿದೆ. ಈ ರೈಲು ಪ್ರತಿ ದಿನ ರಾತ್ರಿ 11.55ಕ್ಕೆ KSR ಬೆಂಗಳೂರು ನಿಲ್ದಾಣದಿಂದ ಹೊರಟು ದಾವಣಗೆರೆ ಮಾರ್ಗವಾಗಿ ಬೆಳಗ್ಗೆ 7.30ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಇದರ ಹೊರತಾಗಿ ಇನ್ನುಳಿದ ರೈಲು ಸೇವೆಗಳ ಸೇವೆಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ನೆರೆ ರಾಜ್ಯ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್‌ ಮತ್ತು ಅರಾವಳಿ ರೈಲು ನಿಲ್ದಾಣಗಳ ಮಧ್ಯೆ ತುರ್ತು ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಇಂದು ಜುಲೈ 25 ರಂದು ಈ ಮಾರ್ಗದಲ್ಲಿ ಮೂರು ಗಂಟೆ ತಡವಾಗಿ ರೈಲುಗಳು ಸಂಚರಿಸಲಿದೆ. ಜುಲೈ 24 ರಂದು ಸಹ ಕೊಯಮತ್ತೂರು ಜಂಕ್ಷನ್‌- ಜಬಲ್‌ಪುರ ಜಂಕ್ಷನ್‌ ಸ್ಪೆಷಲ್‌ ರೈಲು (ರೈಲು ಸಂಖ್ಯೆ 02197) ಮಡಗಾಂವ್‌ ಜಂಕ್ಷನ್‌ ಮತ್ತು ಸಂಗಮೇಶ್ವರ ರಸ್ತೆ ನಡುವೆ ಸುಮಾರು 2.30 ಗಂಟೆ ತಡವಾಗಯಿ ಚಲಿಸಿತು.

Hubballi To Bengaluru Route Two Special Railway Service Extension,Know Train Details

ಇಂದು ಜುಲೈ 25 ರಂದು ಸಾವಂತವಾಡಿ ರಸ್ತೆ - ದಿವಾ ಎಕ್ಸ್‌ಪ್ರೆಸ್‌ (ಗಾಡಿ ಸಂಖ್ಯೆ 10106) ಪ್ರಯಾಣ ಸಾವಂತವಾಡಿ ರಸ್ತೆ ಮತ್ತು ಸಂಗಮೇಶ್ವರ ರಸ್ತೆ ನಡುವೆ ಎರಡು ಗಂಟೆ ತಡವಾಗಿ ಹೊರಡಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ, ಕರ್ನಾಟಕ ಮಧ್ಯಭಾಗ ಮತ್ತು ಕರಾವಳಿಯಲ್ಲಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಕಾರಣ ಮತ್ತು ತುರ್ತು ಕಾಮಗಾರಿ ಸಂಬಂಧ ಆಗಾಗ ರೈಲು ಸೇವೆಯಲ್ಲಿ ವ್ಯತ್ಯಯವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+