Hubballi-Dharwad Bypass: ತಾರಿಹಾಳ-ಯರಿಕೊಪ್ಪ ಮಾರ್ಗ ಶೀಘ್ರವೇ ಮುಕ್ತಾಯ, ಮಾರ್ಚ್ 2026 ಡೆಡ್‌ಲೈನ್
ಹುಬ್ಬಳ್ಳಿ: ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಆರು ಪಥದ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನೀಡಿದ್ದ ಕಾಲಾವಕಾಶದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಗುತ್ತಿಗೆದಾರರು ಪೂರ್ಣಗೊಳಿಸುವ ನಿರೀಕ್ಷೆ ಇದೆ. ಗಬ್ಬೂರಿನಿಂದ ನರೇಂದ್ರವರೆಗಿನ ಒಟ್ಟು 30.06 ಕಿಲೋ ಮೀಟರ್ ಮಾರ್ಗದಲ್ಲಿ ಈ ಬೈಪಾಸ್ ಹೆದ್ದಾರಿ ಸ್ಥಾಪನೆ ಆಗುತ್ತಿದೆ. ಈ ಮಾರ್ಗದಲ್ಲಿ ಕೈಗೊಂಡ ಕೆಲಸಗಳು ಶೇಕಡಾ 80ರಷ್ಟು ಪೂರ್ಣಗೊಂಡಿವೆ. ಬಾಕಿ ಉಳಿದ ಕಾಮಗಾರಿಗಳೆಷ್ಟು, ಸವಾರರ ಗಮನಿಸಬೇಕಾದ ವಿಷಯಗಳು ಹಾಗೂ ಬೈಪಾಸ್ ಪೂರ್ಣಗೊಳ್ಳೋದು ಯಾವಾಗ?
ಮೂರು ವರ್ಷಗಳ ಹಿಂದೆ (2023ರಲ್ಲಿ) ಆರಂಭವಾಗಿದ್ದ ಈ ರಸ್ತೆ ಅಭಿವೃದ್ಧಿ ಕಾಮಗಾರಿಯು 2025ರ ಸೆಪ್ಟಂಬರ್ ಹೊತ್ತಿಗೆ ಮುಗಿಯಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದ್ದು, ಗುತ್ತಿಗೆದಾರರು ಹೆದ್ದಾರಿ ಪ್ರಾಧಿಕಾರದಿಂದ ಮತ್ತಷ್ಟು ಅವಕಾಶ ಪಡೆದುಕೊಂಡಿದ್ದರು. ಪ್ರಾಧಿಕಾರದ ಅಧಿಕಾರಿಗಳು ಮಾರ್ಚ್ 2026ರೊಳಗೆ ಪೂರ್ಣಗೊಳಿಸುವಂತೆ ಗಡುವು ನೀಡಿದೆ. ಹುಬ್ಬಳ್ಳಿ, ಕಲಘಟಗಿ, ಧಾರವಾಡ, ಹಳಿಯಾಳ ಸೇರಿ ಯಾವೆಲ್ಲ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸ, ರಸ್ತೆ ಅಗಲೀಕರಣ, ಡೌನ್‌ರಾಂಪ್ ಕೆಲಸಗಳು ಮುಗಿದಿವೆ ಹಾಗೂ ಎಷ್ಟು ಕೆಲಸ ಬಾಕಿ ಇವೆ ಎಂಬುದನ್ನು ಖುದ್ದು ಪರಿಶೀಲಿಸಿ ಸಂಕ್ಷಿಪ್ತ ವಿವರವನ್ನು ಎಂಜಿನಿಯರ್ ವರುಣ್ ರಾವ್ ಅವರು ಎಕ್ಸ್‌ನಲ್ಲಿ (@varungrao) ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿ ರಸ್ತೆಯು ಇದು ಬೆಂಗಳೂರು, ಪುಣೆ, ಮುಂಬೈ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಅವಳಿನಗರ ಭಾಗದಲ್ಲಿ ನಡೆದ ಕಾಮಗಾರಿಗಳು ಪ್ರಾಮುಖ್ಯತೆ ಪಡೆದಿದೆ. ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಂಗಳುಗಳ ಹಿಂದೆ ಪರಿಶೀಲಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಗುತ್ತಿಗೆದಾರರಿಗೆ ಸೂಚಿಸಿದ್ದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ಯೋಜನೆ ಕುರಿತು..
ಹಳಿಯಾಳ ರಸ್ತೆಯಿಂದ ನಗರ ಕಡೆಯಿಂದ ಬೈಪಾಸ್ ಕಡೆಗೆ ಹೋಗುವ ಇಳಿಜಾರಿನಲ್ಲಿ ಡಾಂಬರೀಕರಣ ಮಾಡಲಾಗಿದೆ. ಇದು ಬೈಪಾಸ್‌ಗೆ ನೇರ ಸಂಪರ್ಕ ನೀಡುತ್ತದೆ. ಬೈಪಾಸ್‌ನಿಂದ ಹಳಿಯಾಳ ಕಡೆಗೆ ಹೋಗುವ ಇಳಿಜಾರು ಮತ್ತು ನರೇಂದ್ರ ಕ್ರಾಸ್‌ಗೆ ಬೈಪಾಸ್‌ನ ಇನ್ನೊಂದು ಬದಿ ಇನ್ನೂ ನಿರ್ಮಾಣ ಹಂತದಲ್ಲಿದೆ, ಮುಂದಿನ ಕೆಲವೇ ದಿನಗಳಲ್ಲಿ ಈ ಕೆಲಸ ಸಹ ಪೂರ್ಣಗೊಳ್ಳಲಿದೆ.
ಹುಬ್ಬಳ್ಳಿ ಕಡೆಗೆ ಹೋಗುವ ಕಲಘಟಗಿ ರಸ್ತೆ ನಿರ್ಗಮನದಲ್ಲಿರುವ ಹಳೆಯ ಸೇತುವೆ ಕೆಡವಿ, ಹೊಸದನ್ನು ನಿರ್ಮಿಸಲಾಗಿದೆ. ಹೊಸ ಸೇತುವೆಯನ್ನು ಎಲಿವೇಟೆಡ್ ಇಳಿಜಾರಿನೊಂದಿಗೆ ಸಂಪರ್ಕಿಸಲು ಸ್ಪ್ಯಾನ್ ಕೆಲಸಗಳು ನಡೆಯುತ್ತಿವೆ. ಕಲಘಟಗಿ ರಸ್ತೆ ನಿರ್ಗಮನದಲ್ಲಿರುವ ಇನ್ನೊಂದು ಸೇತುವೆಯನ್ನು ಬಹಳ ಹಿಂದೆಯೇ ಸಂಚಾರಕ್ಕೆ ತೆರೆಯಲಾಗಿದೆ. ವಾಹನ ಸವಾರರು ಅದರ ಪ್ರಯೋಜನ ಪಡೆಯುತ್ತಿದ್ದಾರೆ.
ಮಿಶ್ರಾ ಪೇಢಾದಿಂದ ಇಟಿಗಟ್ಟಿಯವರೆಗೆ ಒಂದು ಸಣ್ಣ ತಿರುವು ಹೊರತುಪಡಿಸಿ 6 ಪಥದ ರಸ್ತೆ ನಿರ್ಮಾಣ ಕೆಲಸಗಳು ಪೂರ್ಣಗೊಂಡಿವೆ. ಹೊಸ ರಸ್ತೆ ಸಂಚಾರ ಸುಗಮವಾಗಿದೆ. ಇನ್ನೂ ಇಟಿಗಟ್ಟಿ ಕ್ರಾಸ್‌ನಲ್ಲಿ ರಸ್ತೆಯ ಇನ್ನೊಂದು ಬದಿಯ ನಿರ್ಮಾಣ ಕೆಲಸ ಮುಗಿದಿದ್ದು, ಕೆಲವು ಪ್ಯಾಚ್ ಡಾಂಬರೀಕರಣ ಬಾಕಿ ಇದೆ. ಅದರತ್ತ ಅಧಿಕಾರಿಗಳು ಗಮನ ಹರಿಸಬೇಕಿದೆ. ಇಟಿಗಟ್ಟಿಯ ನಂತರ ತಾರಿಹಾಳ ಇಂಟರ್‌ಚೇಂಜ್ ಕಡೆಗೆ ಎಲಿವೇಟೆಡ್ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ.
ತಾರಿಹಾಳ್ ಕ್ರಾಸ್‌ನಲ್ಲಿ ಹೆದ್ದಾರಿಯ ಪಕ್ಕದಲ್ಲಿರುವ ಕಲ್ಲುಗಳನ್ನು ತೆರವು ಮಾಡುವ ಕೆಲಸ ಬಹುತೇಕ ಮುಗಿದಿದೆ. ಇಲ್ಲಿ ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿದೆ. ಇಟಿಗಟ್ಟಿಯಿಂದ ವಿಮಾನ ನಿಲ್ದಾಣಕ್ಕೆ, ಸೇತುವೆಯ ನಂತರ ನಿರ್ಗಮನವನ್ನು ಒದಗಿಸಲಾಗಿದೆ. ಗೋಕುಲ್ ರಸ್ತೆಯಿಂದ ಧಾರವಾಡಕ್ಕೆ, ಬೈಪಾಸ್ ತಲುಪಲು ನಾವು ಹಳೆಯ ಮಾರ್ಗವನ್ನು ಟೋಲ್ ಬೂತ್ ಮೂಲಕ ಹೋಗಬೇಕಿದೆ.
ಸೇತುವೆ ಮತ್ತು ಸರ್ವೀಸ್ ರಸ್ತೆ ಕಾರ್ಯ
ಕ್ಯಾರ್ಕೋಪ್ ರಸ್ತೆಯಲ್ಲಿ ಬೈಪಾಸ್‌ಗಾಗಿ ಹೊಸ ರೈಲ್ವೆ ಓವರ್ ಬ್ರಿಡ್ಜ್‌ಗಾಗಿ ಪಿಲ್ಲರ್ ಕೆಲಸ ಮಾಡಲಾಗುತ್ತಿದೆ. ಈ ಭಾಗದಲ್ಲಿ ಸಮೀಪವೇ ಶಾಲೆ ಇದ್ದು, ಇದೇ ಭಾಗದಲ್ಲಿಇನ್ನೊಂದು ಸೇತುವೆ ಸ್ಥಾಪನೆ ಆಗಲಿದೆ. ಪಿಲ್ಲರ್ ವಿನ್ಯಾಸದ ಪ್ರಕಾರ, ಬೌಸ್ಟ್ರಿಂಗ್ ಗಿರ್ಡರ್ ಅನ್ನು ಇರಿಸುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ರೈಲ್ವೆ ಅಧಿಕಾರಿಗಳು ಒಪ್ಪಿಗೆ ನೀಡಿದರೆ ಡಿಪಿಆರ್ ಮತ್ತು ವಿನ್ಯಾಸ ಆಧಾರದಲ್ಲಿ ಸೇತುವೆ ತಲೆ ಎತ್ತಲಿದೆ.
ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳು
ಈ ಭಾಗದ ಕೆಲವೆಡೆ ರಸ್ತೆ ಧೂಳಿನಿಂದ ಕೂಡಿವೆ, ಅನೇಕ ಸ್ಥಳಗಳಲ್ಲಿ ಗುಂಡಿಗಳಿವೆ. ಅವುಗಳನ್ನು ತುರ್ತಾಗಿ ಮುಚ್ಚಬೇಕಿದೆ. ವಾಹನ ಸವಾರರು ಈ ಭಾಗದಲ್ಲಿ ಸಂಚರಿಸುವಾಗ ಸುರಕ್ಷಿತವಾಗಿರಬೇಕು. ವೇಗ ನಿಯಂತ್ರಣದಲ್ಲಿದ್ದ ಈ ರಸ್ತೆಯಲ್ಲಿರುವ ಅಧಿಕ ತಿರುವುಗಳಲ್ಲಿ ಜಾಗರೂಕರಾಗಿ ತೆರಳಬಹುದಾಗಿದೆ. ಇತ್ತೀಚೆಗೆ ಇಲ್ಲಿ ಸುರಕ್ಷತಾ ಫಲಕಗಳನ್ನು ಗುತ್ತಿಗೆದಾರರು ಅಳವಡಿಸಿದ್ದಾರೆ.
ತಾರಿಹಾಳ - ಯರಿಕೊಪ್ಪ ಮಾರ್ಗ ತೆರೆಯುವ ನಿರೀಕ್ಷೆ
ರಸ್ತೆ ಹಾಗೂ ಇತರ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಯ ವೇಗವನ್ನು ನೋಡಿದರೆ, ತಾರಿಹಾಳ ಸೇತುವೆ ಮತ್ತು ರ‍್ಯಾಂಪ್ ಹೊರತುಪಡಿಸಿ ತಾರಿಹಾಳ - ಯರಿಕೊಪ್ಪ (ಮಿಶ್ರ ಪೇಢ) ಮಾರ್ಗವು ಮೊದಲು ತೆರೆಯುವ ನಿರೀಕ್ಷೆ ಇದೆ. ಡಿಪಿಆರ್ ಪ್ರಕಾರ ಹುಬ್ಬಳ್ಳಿ ಕಡೆಯಿಂದ ಹಳಿಯಾಳ ರಸ್ತೆ ನಿರ್ಗಮನ ಕಡೆಗೆ ಟೋಲ್ ಪ್ಲಾಜಾ ಬರುವ ಸಾಧ್ಯತೆ ಇದೆ.
4. Construction of another side of the road at Itigatti cross has been completed barring a few patch asphalting. This work on this stretch was pending for a long time.
— Varun Rao (@varungrao) January 26, 2026
5. Elevated road construction is in progress after Itigatti towards Tarihal interchange.
(2/n) pic.twitter.com/Ororg2ElF1
ಇನ್ಣೂ ಯರಿಕೊಪ್ಪದಿಂದ ನರೇಂದ್ರ ಕ್ರಾಸ್‌ವರೆಗೆ ಉತ್ತಮವಾಗಿ ರಸ್ತೆ ಅಭಿಯಾಗಿದೆ. ಆದರೆ ಕಾಮಗಾರಿ ನಿಧಾನವಾಗಿದೆ. ಕೆಲವು ಸ್ಥಳಗಳಲ್ಲಿ ಭೂಮಿ ಸಮತಟ್ಟಾಗಿಲ್ಲ. ನರೇಂದ್ರ ಕ್ರಾಸ್‌ಗೆ ಕೆಲಗೇರಿ ರಸ್ತೆ ನಿರ್ಗಮನದಿಂದ ತಾರಿಹಾಳಕ್ಕೆ ಹೋಗುವ ಬಹಳಷ್ಟು ಕೆಲಸಗಳು ಬಾಕಿ ಉಳಿದಿದ್ದು, ಗುತ್ತಿಗೆದಾರರು ಗಡುವಿನೊಳಗೆ ಪೂರ್ಣಗೊಳಿಸುವ ವಿಶ್ವಾಸ ಇದೆ.
ತಾರಿಹಾಳ ಮತ್ತು ಇಟಿಗಟ್ಟಿ ವರೆಗಿನ ರಸ್ತೆಯಲ್ಲಿ ಕೆಲವು ತಿರುವುಗಳನ್ನು ಹೊರತುಪಡಿಸಿದರೆ ತಾರಿಹಾಳ ಇಂಟರ್‌ಚೇಂಜ್ ಮತ್ತು ಧಾರವಾಡ (ಯರಿಕೊಪ್ಪ, ಮಿಶ್ರ ಪೇಢಾ ಬಳಿ) ನಡುವೆ ಬೈಪಾಸ್ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಆದರೆ ಹಳಿಯಾಳ ರಸ್ತೆಯ ಬಳಿ, ವಿಶೇಷವಾಗಿ ನರೇಂದ್ರ ಕ್ರಾಸ್‌ವರೆಗೆ ಕೆಲಸ ನಿಧಾನವಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಭೂ ಸಮತಟ್ಟು ಮಾಡುವ ಕೆಲಸ ಆರಂಭವಾಗಿಲ್ಲ. ತಾರಿಹಾಳದ ಹೊಸ ಸೇತುವೆ ಕೆಲಸ ತಡವಾಗಿ ಆರಂಭವಾಗಿದೆ. ಇದಕ್ಕೆ ಆ ಭಾಗದಲ್ಲಿನ ಭೂಮಿ ಸ್ವಾಧೀನದಂತಹ ಸಮಸ್ಯೆಗಳು ಇರುಬಹುದೆಂದು ಅಂದಾಜಿಸಲಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications