ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗಿಲ್ಲ ಅನುಮತಿ: ಇಲ್ಲಿದೆ ಕಾರಣ

ಬೆಂಗಳೂರು, ಮಾರ್ಚ್ 10: ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಯೋಜನೆಗೆ ಅನುಮತಿ ನೀಡಲು ರಾಜ್ಯ ವನ್ಯ ಜೀವಿ ಮಂಡಳಿ ನಿರಾಕರಿಸಿದೆ.

ಈ ರೈಲ್ವೆ ಹಳಿ ಪಶ್ಚಿಮ ಘಟ್ಟದಲ್ಲಿ ಹಾದುಹೋಗುವ ಕಾರಣ ಸಾಕಷ್ಟು ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕಲಿವೆ. ಪರ್ಯಾಯ ಮಾರ್ಗಗಳಿರುವುದರಿಂದ ಈ ಯೋಜನೆ ಬೇಡ ಎಂದು ಮಂಡಳಿಯ ಸದಸ್ಯರಾದ ಸಂಜಯ್ ಗುಬ್ಬಿ, ಮಲ್ಲೇಶಪ್ಪ, ಸೌಮ್ಯಾ ರೆಡ್ಡಿ ವಿವರಿಸಿದ ಬಳಿಕ ಪ್ರಸ್ತಾಪ ಕೈಬಿಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.

ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಬಹಳ ಹಾನಿಯುಂಟಾಗಲಿದೆ. ಹೀಗಾಗಿ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ.

train


ಕಾರವಾರದ ಮುಗುಳಿಯಿಂದ ಅಪ್ಸರಕೊಂಡ ನಡುವಿನ ತೀರವನ್ನು ಕಡಲ ವನ್ಯಜೀವಿಧಾಮ ಎಂದು ಘೋಷಿಸಲು ವನ್ಯಜೀವಿ ಮಂಡಳಿ ತಯಾರಿದೆ.

ಇದರಿಂದ ಮೀನುಗಾರಿಕೇನು ಧಕ್ಕೆ ಇಲ್ಲ, ಈ ಪ್ರದೇಶದಲ್ಲಿರುವ ಹಂದಿ ಮೀನು, ತಿಮಿಂಗಿಲ, ಹುಲಿಮೀನು, ಕಡಲಾಮೆ 34 ಬಗೆಯ ಕಡಲಜೀವಿಗಳ ಸಂರಕ್ಷಣೆಗೆ ಮೀನುಗಾರರ ಸಹಾಯ ಬೇಕು ಎಂದು ತಿಳಿಸಿದೆ.

ಈ ಯೋಜನೆಯಿಂದ ಪಶ್ಚಿಮಘಟ್ಟಕ್ಕೆ, ವನ್ಯಜೀವಿಗಳಿಗೆ ಅಪಾಯವಿದೆ. ಭಾರಿ ಸಂಖ್ಯೆಯಲ್ಲಿ ಮರಗಳ ಹನನಕ್ಕೆ ಕಾರಣವಾಗುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+