• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ? ಸದನದ ಘಟನಾವಳಿಗಳು

|

ಬೆಂಗಳೂರು, ಜುಲೈ 29: ಮೂರು ಸಿಎಂಗಳನ್ನು ಕಂಡಿರುವ 15ನೇ ವಿಧಾನಸಭೆ ಮತ್ತೊಮ್ಮೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಸಿದ್ಧವಾಗುತ್ತಿದ್ದು, ಸೋಮವಾರ(ಜುಲೈ 29) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸಮತ ನಿರ್ಣಯ ಮಂಡಿಸಲಿದ್ದಾರೆ.ಎಚ್. ಡಿ ಕುಮಾರಸ್ವಾಮಿ ನೇತೃತ್ವದ 14ತಿಂಗಳ ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಸಂಖ್ಯಾಬಲವನ್ನು ವಿಧಾನಸಭೆಯಲ್ಲಿ ಹೊಂದಿದೆಯೇ? ಎಂಬ ಪ್ರಶ್ನೆಗೆ ಸೋಮವಾರ ಬೆಳಗ್ಗೆ 11 ಗಂಟೆ ನಂತರ ಉತ್ತರ ಸಿಗಲಿದೆ.

15ನೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಬಗ್ಗೆ ಚರ್ಚೆಯನ್ನು ಇಡೀ ದೇಶಕ್ಕೆ ಕಣ್ಣರಳಿಸಿ ನೋಡಿದೆ. ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು? ಕಾಯ್ದೆ ಆರಂಭವಾಗಿದ್ದು ಹೇಗೆ? ಈ ಕಾಯ್ದೆ ಮಹತ್ವವೇನು? ಎಂಬುದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದರು. ಕೃಷ್ಣಬೈರೇಗೌಡ ಹಾಗೂ ಸಿದ್ದರಾಮಯ್ಯ ಅವರು ವಿಪ್ ಜಾರಿಗೊಳಿಸುವುದರ ಬಗ್ಗೆ ತಿಳಿ ಹೇಳಿದರು. ಡಿಕೆ ಶಿವಕುಮಾರ್ ಅವರು ಮುಂಬೈನಲ್ಲಿರುವ ಅತೃಪ್ತ ಶಾಸಕರು, ಅಧಿಕಾರ ದುರುಪಯೋಗದ ಬಗ್ಗೆ ವಿವರಿಸಿ ಸಿದ್ಧಾಂತ ರಾಜಕಾರಣ ಸತ್ತಿದೆ ಎಂದು ಘೋಷಿಸಿದರು. ಎಚ್ಡಿ ಕುಮಾರಸ್ವಾಮಿ ಅವರು 2008ರಿಂದ 2019 ತನಕದ ರಾಜಕೀಯ ಬದುಕನ್ನು ತೆರೆದಿಟ್ಟರು. ಬಿಜೆಪಿ ಪರ ಜೆಸಿ ಮಾಧುಸ್ವಾಮಿ ಅವರು ಸಮರ್ಥವಾಗಿ ಪ್ರತಿವಾದ ಹೂಡಿದರು. ಸುದೀರ್ಘ ಚರ್ಚೆ ಬಳಿಕ ವಿಶ್ವಾಸಮತ ಯಾಚನೆಯಾಗಿ ಮೈತ್ರಿ ಸರ್ಕಾರ ಸೋಲು ಕಂಡಿದ್ದು ಈಗ ಇತಿಹಾಸ.

15ನೇ ವಿಧಾನಸಭೆಯಿಂದ 17 ಶಾಸಕರು ಅನರ್ಹ, ಮುಂದೇನು?15ನೇ ವಿಧಾನಸಭೆಯಿಂದ 17 ಶಾಸಕರು ಅನರ್ಹ, ಮುಂದೇನು?

ಜುಲೈ 29ರಂದು ಬೆಳಗ್ಗೆ 11 ಗಂಟೆಗೆ ವಿಶ್ವಾಸಯತ ಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ. ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭಾಷಣ ಮಾಡಿ, ವಿಶ್ವಾಸಮತ ಯಾಚಿಸಿ ಮತ ಹಾಕಲು ಕೋರಬಹುದು ಅಥವಾ ವಿಶ್ವಾಸಮತಯಾಚನೆ ಬಗ್ಗೆ ಚರ್ಚೆ ಆರಂಭಿಸಬಹುದು. ಈ ಚರ್ಚೆಯ ಅವಧಿಯನ್ನು ಸ್ಪೀಕರ್ ನಿರ್ಧರಿಸಲಿದ್ದು, ನಿಮಿಷ, ಗಂಟೆ, ದಿನದ ಮಟ್ಟಿಗೆ ಅವಕಾಶ ನೀಡಬಹುದು. ಇಡೀ ಪ್ರಕ್ರಿಯೆ ಹೇಗೆ ಹೇಗೆ ನಡೆಸಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸಲಿದ್ದಾರೆ. ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಸದನದ ಘಟನಾವಳಿಗಳ ಬಗ್ಗೆ ಈಗಾಗಲೆ ಓದಿರುತ್ತೀರಿ, ಈಗ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬಗ್ಗೆ ಇನ್ನಷ್ಟು ವಿವರ ತಿಳಿದುಕೊಳ್ಳಿ...

ವಿಶ್ವಾಸಮತ ಹೇಗೆ ನಡೆಯುತ್ತದೆ?

ವಿಶ್ವಾಸಮತ ಹೇಗೆ ನಡೆಯುತ್ತದೆ?

ವಿಶ್ವಾಸಮತ ಹೇಗೆ ನಡೆಯುತ್ತದೆ? ಸಾಮಾನ್ಯವಾಗಿ ಧ್ವನಿಮತದ ಮೂಲಕ ವಿಶ್ವಾಸಮತ ನಡೆಯುತ್ತದೆ. ಧ್ವನಿಮತದ ಮೂಲಕ ನಡೆದರೆ ವಿಶ್ವಾಸಮತದ ಪರವಾಗಿರುವವರು 'ಹೌದು' ಅಥವಾ 'ಇಲ್ಲ' ಎನ್ನುವ ಮೂಲಕ ಮತ ಚಲಾಯಿಸುತ್ತಾರೆ. ಕೈ ಎತ್ತುವ ಅಥವಾ ಚೀಟಿಯ ಮೂಲಕ ಅಥವಾ ಎಲೆಕ್ಟ್ರಾನಿಕ್ ಎಂತ್ರದ ಮೂಲಕವೂ ಮತ ಚಲಾವಣೆ ನಡೆಯುತ್ತದೆ. ಹಾಜರಿರುವ ಸದಸ್ಯರು ಕೈ ಎತ್ತಿ ಧ್ವನಿಮತ ಕೂಗಬಹುದು.

* ಮತದಾನ ಪ್ರಕ್ರಿಯೆ ಬಳಿಕ, ಸ್ಪೀಕರ್ ಅವರು ಫಲಿತಾಂಶ ಘೋಷಿಸುತ್ತಾರೆ. ಆದರೆ, ಕೆಲವೊಮ್ಮೆ ಧ್ವನಿಮತ ಸರಿಯಾಗಿ ದಾಖಲಾಗದೆ ಗಲಾಟೆಗಳು ನಡೆದ ಪ್ರಸಂಗಗಳು ಘಟಿಸಿವೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಬಗ್ಗೆ ಭಾರಿ ಕೋಲಾಹಲವೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಸಂಸತ್ತಿನಲ್ಲಿ ಧ್ವನಿಮತ ಎಣಿಕೆಗೆ ಎಲೆಕ್ಟ್ರಾನಿಕ್ ಬೋರ್ಡ್ ಇರುವುದರಿಂದ ಸಮಸ್ಯೆಯಿಲ್ಲ.

ವಿಭಾಗೀಕರಣ ಎಂದರೇನು?

ವಿಭಾಗೀಕರಣ ಎಂದರೇನು?

ಧ್ವನಿಮತ ಮೂಲಕ ವಿಧಾನಸಭೆಗಳಲ್ಲಿ ಎಣಿಕೆ ಕೆಲವೊಮ್ಮೆ ಅನುಮಾನ ಉಂಟು ಮಾಡುವುದರಿಂದ ಹೆಚ್ಚಿನ ಪ್ರಮಾಣದ ಸ್ಪಷ್ಟತೆಗಾಗಿ ವಿಪಕ್ಷ ನಾಯಕರು ಡಿವಿಷನ್ ವೋಟ್ ಮೂಲಕ ನಿರ್ಣಯ ಕೈಗೊಳ್ಳುವಂತೆ ಕೋರಬಹುದು. ಎಚ್ಡಿಕೆ ವಿಶ್ವಾಸಮತ ಪ್ರಕ್ರಿಯೆ ವೇಳೆ ಯಡಿಯೂರಪ್ಪ ಅವರು ಡಿವಿಷನ್ ಗೆ ಹಾಕುವಂತೆ ಸ್ಪೀಕರ್ ರಮೇಶ್ ಕುಮಾರ್ ರನ್ನು ಕೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಭಾಗೀಕರಣ ಎಂದರೇನು? : ಧ್ವನಿಮತದ ಮೂಲಕ ಬಂದ ಮತಎಣಿಕೆಯ ವಿರುದ್ಧ ಯಾವ ಪಕ್ಷವಾದರೂ ಧ್ವನಿಯೆತ್ತಿದರೆ, ಬಿದ್ದ ಮತಗಳ ಸರಿಯಾದ ಲೆಕ್ಕ ತೆಗೆದುಕೊಳ್ಳಲು ವಿಭಾಗೀಕರಣ ಮಾಡಲಾಗುತ್ತದೆ. ಆಗ, ಸ್ಪಷ್ಟ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.

ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಯಾವಾಗ ವಿಭಾಗೀಕರಣದ ಅಗತ್ಯವಿರುತ್ತದೆ?

ಯಾವಾಗ ವಿಭಾಗೀಕರಣದ ಅಗತ್ಯವಿರುತ್ತದೆ?

ವಿಭಾಗೀಕರಣದ ಅಗತ್ಯವೇನು? ಯಾವಾಗ ವಿಭಾಗೀಕರಣದ ಅಗತ್ಯವಿರುತ್ತದೆ? ಇದನ್ನು ಸಾಮಾನ್ಯವಾಗಿ ಸಂಸತ್ತಿನಲ್ಲಿ ಪಾಲಿಸಲಾಗುತ್ತದೆ. ವಿಧಾನಸಭೆಗಳಲ್ಲಿ ಪಾಲಿಸಲಾಗುವುದಿಲ್ಲ. ಕೋರಿಕೆ ಮೇರೆಗೆ ಸಭಾಪತಿಗಳು ಇದನ್ನು ಪರಿಗಣಿಸುತ್ತಾರೆ. ಯಾವುದಾದರೂ ಸಾಂವಿಧಾನಿಕ ತಿದ್ದುಪಡಿಗೆ ಮತಹಾಕುವ ಸಮಯದಲ್ಲಿ ಈ ವಿಭಾಗೀಕರಣದ ಅಗತ್ಯವಿರುತ್ತದೆ.

ವಿಶ್ವಾಸಮತ ಪ್ರಕ್ರಿಯೆ ವಿರುದ್ಧ ದೂರು ಸಾಧ್ಯವೆ?

ವಿಶ್ವಾಸಮತ ಪ್ರಕ್ರಿಯೆ ವಿರುದ್ಧ ದೂರು ಸಾಧ್ಯವೆ?

ಈ ಪ್ರಕ್ರಿಯೆಯ ಬಗ್ಗೆ ಯಾವುದಾದರೂ ಪಕ್ಷ ಅಸಮಾಧಾನ ತೋರಿದರೆ? ಇಂಥ ಸಂದರ್ಭ ಬಂದಾಗ ರಾಜ್ಯಪಾಲರಿಗೆ ಮನವಿ ಸಲ್ಲಿಸಬಹುದು. ಆಗ, ರಾಜ್ಯಪಾಲರು ಮತ್ತೊಮ್ಮೆ ಸದನವನ್ನು ಕರೆದು ಮತ್ತೆ ವಿಶ್ವಾಸಮತ ಯಾಚಿಸಲು ಸೂಚಿಸಬಹುದು. ರಾಜ್ಯಪಾಲರು ಸಭಾಧ್ಯಕ್ಷರಿಗೆ ಸರಿಯಾಗಿ ನಿರ್ವಹಿಸಲು ಕೆಲ ಸೂಚನೆಗಳನ್ನೂ ನೀಡಬಹುದು. ಮತ್ತೂ ಸಮಸ್ಯೆ ಬಗೆಹರಿಯದಿದ್ದರೆ ಕೋರ್ಟಿನ ಕದವನ್ನೂ ತಟ್ಟಬಹುದು.

17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!

ವಿಶ್ವಾಸಮತ ಯಾಚನೆ ದಿನಗಳಂದು ಶಕ್ತಿಸೌಧ

ವಿಶ್ವಾಸಮತ ಯಾಚನೆ ದಿನಗಳಂದು ಶಕ್ತಿಸೌಧ

* ವಿಶ್ವಾಸಮತ ಯಾಚನೆ ದಿನಗಳಂದು ವಿಧಾನಸಭಾಂಗಣದಲ್ಲಿ ಸುಮಾರು 150ಕ್ಕೂ ಅಧಿಕ ಮಾರ್ಷಲ್ಲುಗಳಿರುತ್ತಾರೆ. ಗನ್ ಮ್ಯಾನ್, ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಪ್ರವೇಶವಿರುವುದಿಲ್ಲ.
* ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿರುತ್ತದೆ. ಆದರೆ, ಒಬ್ಬ ವರದಿಗಾರ ಒಬ್ಬ ಕ್ಯಾಮರಾ ಮನ್ ಗೆ ಸೀಮಿತವಾಗಿರುತ್ತದೆ.
* ವಿಶ್ವಾಸಮತ ಯಾಚನೆ ದಿನದಂದು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ನೌಕರರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಅರ್ಧ ದಿನ ರಜೆ ನೀಡಲಾಗುತ್ತದೆ.

15ನೇ ವಿಧಾನಸಭೆ ಸದಸ್ಯರ ಬಲಾಬಲ

15ನೇ ವಿಧಾನಸಭೆ ಸದಸ್ಯರ ಬಲಾಬಲ

15ನೇ ವಿಧಾನಸಭೆಯಿಂದ ಒಟ್ಟು 17 ಶಾಸಕರು ಅನರ್ಹ ಎಂದು ಸ್ಪೀಕರ್ ರಮೇಶ್ ಕುಮಾರ್ ಜುಲೈ 28ರಂದು ಘೋಷಿಸಿದ್ದಾರೆ. ಭಾನುವಾರದಿಂದಲೇ ಆದೇಶ ಜಾರಿಯಲ್ಲಿರುತ್ತದೆ.
ವಿಧಾನಸಭೆ ಬಲಾಬಲ: 224-17=207
ಮ್ಯಾಜಿಕ್ ನಂಬರ್: 104
ಬಿಜೆಪಿ: 105+1 (ಎಚ್ ನಾಗೇಶ್ ಬೆಂಬಲ)
ಬಿಎಸ್ಪಿ: 1 ತಟಸ್ಥ
ಕಾಂಗ್ರೆಸ್: 76-11=65
ಜೆಡಿಎಸ್: 37-3=34
ಮೈತ್ರಿ: 99
ಅನರ್ಹ: 3+14=17

English summary
How Trust vote can take place and How Floor test will be conducted in Legislative assembly. BS Yeddyurappa is set to seek trust on July 29, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X