ಎಲ್‌ಪಿಜಿ ಜೊತೆ ಆಧಾರ್ ನಂಬರ್ ಸೇರಿಸುವುದು ಹೇಗೆ?

ಬೆಂಗಳೂರು, ಮಾ. 30 : ನೇರ ನಗದು ವರ್ಗಾವಣೆ ಯೋಜನೆಯಡಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಆಧಾರ್‌ ಸಂಖ್ಯೆ ಕಡ್ಡಾಯ. ಏ.1ರಿಂದ ತಮ್ಮ ಆಧಾರ್ ಸಂಖ್ಯೆಯನ್ನು ನೀಡದ ಗ್ರಾಹಕರಿಗೆ ಸಬ್ಸಿಡಿ ಹಣ ದೊರೆಯುವುದಿಲ್ಲ.

ಎಲ್‌ಪಿಜಿ ಗ್ರಾಹಕ ಸಂಖ್ಯೆಯೊಂದಿಗೆ ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಮಾ.31ರ ಮಂಗಳವಾರ ಕೊನೆಯ ದಿನ. ಏ.1ರಿಂದ ಗೃಹ ಬಳಕೆ ಸಿಲಿಂಡರ್‌ ಖರೀದಿ ಮಾಡಿದರೆ ಅವರಿಗೆ ತಕ್ಷಣಕ್ಕೆ ಸಬ್ಸಿಡಿ ದೊರೆಯುವುದಿಲ್ಲ. ಎಲ್‌ಪಿಜಿ ಜೊತೆ ನೀವು ಆಧಾರ್ ಸಂಖ್ಯೆ ನೀಡುವ ಮೊದಲು ಬ್ಯಾಂಕ್‌ಗೆ ಆಧಾರ್ ಸಂಖ್ಯೆಯನ್ನು ನೀಡಿರಬೇಕಾಗುತ್ತದೆ.

LPG

ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸಫರ್‌ ಆಫ್‌ ಎಲ್‌ಪಿಜಿ (DBTL) ಯೋಜನೆ ಅನ್ವಯ ಆಧಾರ್ ಸಂಖ್ಯೆಯನ್ನು ಎಲ್‌ಪಿಗೆ ಜೋಡಣೆ ಮಾಡದವರಿಗೆ ತಕ್ಷಣ ಸಬ್ಸಿಡಿ ದೊರೆಯುವುದಿಲ್ಲ. ತೈಲ ಕಂಪನಿಗಳು ಗ್ರಾಹಕರಿಗೆ ಮೂರು ತಿಂಗಳ ಕಾಲಮಿತಿಯನ್ನು ನೀಡಿವೆ. ಇದರವೊಳಗೆ ಸಂಖ್ಯೆಯನ್ನು ಜೋಡಣೆ ಮಾಡಿದರೆ, ಬಳಿಕ ಸಬ್ಸಿಡಿ ಜನರ ಖಾತೆಗೆ ಬಂದು ಸೇರಲಿದೆ. [ಹೊಸ ಗ್ಯಾಸ್ ಸಂಪರ್ಕ ಪಡೆಯುವುದು ಹೇಗೆ?]

ನೇರ ನಗದು ವರ್ಗಾವಣೆ ಯೋಜನೆಯಡಿ ಆಧಾರ್ ಸಂಖ್ಯೆಯನ್ನು ಎಲ್‌ಪಿಜಿಯೊಂದಿಗೆ ಆನ್‌ಲೈನ್ ಮೂಲಕವೂ ಸೇರಿಸಬಹುದಾಗಿದೆ. ಕೇವಲ ನಾಲ್ಕು ಹಂತಗಳಲ್ಲಿ ಈ ಪ್ರಕ್ರಿಯೆ ಮುಗಿದು ಹೋಗುತ್ತದೆ. ವಿವರಗಳು ಇಲ್ಲಿವೆ ನೋಡಿ. [ಆಧಾರ್ ಕಾರ್ಡ್ ಪಡೆಯುವುದು ಹೇಗೆ?]

ಪ್ರಾಥಮಿಕ ಹಂತ : ಗ್ರಾಹಕರು ಮೊದಲ ಹಂತದಲ್ಲಿ https://rasf.uidai.gov.in/seeding/User/ResidentSplash.aspx ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ Start Now ಕ್ಲಿಕ್ ಮಾಡಿದರೆ ಸಂಖ್ಯೆಯನ್ನು ಜೋಡಣೆ ಮಾಡುವ ವಿಧಾನ ತಿಳಿಯುತ್ತದೆ. [ವೆಬ್ ಸೈಟ್ ವಿಳಾಸ]

ಮೊದಲ ಹಂತದಲ್ಲಿ ನೀವು ನಿಮ್ಮ ರಾಜ್ಯ ಮತ್ತು ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಬೇಕು. ಎರಡನೇ ಹಂತದಲ್ಲಿ ನೀವು ಯೋಜನೆಯನ್ನು ಆಯ್ಕೆ ಮಾಡಬೇಕು, ಅಲ್ಲಿ ಎಲ್‌ಪಿಜಿ ಎಂಬ ಆಯ್ಕೆ ಇದೆ. ನಂತರ ನೀವು ಯಾವ ತೈಲ ಕಂಪನಿಯಿಂದ ಎಲ್‌ಪಿಜಿ ಸಂಪರ್ಕ ಪಡೆದಿದ್ದೀರಿ ಎಂಬ ಮಾಹಿತಿ ಭರ್ತಿ ಮಾಡಬೇಕು.

ಮುಂದಿನ ಹಂತದಲ್ಲಿ ನಿಮ್ಮ ಎಲ್‌ಪಿಜಿ ವಿತರಕರ ಹೆಸರನ್ನು ಭರ್ತಿ ಮಾಡಬೇಕು. ನಂತರ ಗ್ಯಾಸ್ ಸಂಪರ್ಕ ಪಡೆಯುವಾಗ ನಿಮಗೆ ನೀಡುವ ಗ್ರಾಹಕರ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಗ್ರಾಹಕ ಸಂಖ್ಯೆಯನ್ನು ನೀಡಿದ ತಕ್ಷಣ ನಿಮ್ಮ ಹೆಸರು ಅಲ್ಲಿ ಕಾಣುತ್ತದೆ, ಅದು ಸರಿಯಾಗಿದೆಯೇ? ಎಂದು ಒಮ್ಮೆ ಖಚಿತಪಡಿಸಿಕೊಳ್ಳಿ.

ಮುಂದಿನ ಹಂತದಲ್ಲಿ ನೀವು ಈ ಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್‌ ನಂಬರ್‌ಗಳನ್ನು ಭರ್ತಿ ಮಾಡಬೇಕು. ಕೊನೆಯ ಹಂತದಲ್ಲಿ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ರೂಪದಲ್ಲಿ ಒಂದು ಸಂಖ್ಯೆ ಬರುತ್ತದೆ ಅದನ್ನು ಭರ್ತಿ ಮಾಡಿ Submit ಎಂದು ಕ್ಲಿಕ್ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+