ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!
ಬೆಂಗಳೂರು, ಮೇ 05 : ಕರ್ನಾಟಕ ಸರ್ಕಾರ ಲಾಡ್ ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿಗಳನ್ನು ನೀಡಿದೆ. ಹಳದಿ, ಕೆಂಪು ಮತ್ತು ಹಸಿರು ವಲಯವನ್ನಾಗಿ ರಾಜ್ಯವನ್ನು ವಿಂಗಡನೆ ಮಾಡಲಾಗಿದೆ. ಹಸಿರು ವಲಯದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ.
Recommended Video
ವಿವಿಧ ನಗರದಲ್ಲಿ ಸಿಲುಕಿರುವ ಜನರು ಅಂತರ ಜಿಲ್ಲೆ ಪ್ರಯಾಣ ಮಾಡುವುದು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ. ತುರ್ತು ಸಂದರ್ಭದಲ್ಲಿ ಅಂತರ ಜಿಲ್ಲೆಗೆ ತೆರಳಲು ಪೊಲೀಸ್ ಇಲಾಖೆ ಪಾಸುಗಳ ವ್ಯವಸ್ಥೆ ಮಾಡಿದೆ.
ಪಾಸುಗಳು ಇಲ್ಲದೇ ಖಾಸಗಿ ವಾಹನಗಳನ್ನು ತೆಗೆದುಕೊಂಡು ರಸ್ತೆಗೆ ಇಳಿದರೆ ವಾಹನವನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ವಾಹನದಲ್ಲಿ ಇದ್ದವರನ್ನು ಕ್ವಾರಂಟೈನ್‌ಗೆ ಹಾಕುವ ಅವಕಾಶವೂ ಸಹ ಇದೆ. ಆದ್ದರಿಂದ, ಪಾಸು ಪಡೆದು ಪ್ರಯಾಣ ಮಾಡಿ.
ಪೊಲೀಸರು ನೀಡಿರುವ ವೆಬ್ ಸೈಟ್‌ಗೆ ಭೇಟಿ ನೀಡಿ ಪಾಸುಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕು. ಮೊಬೈಲ್ ಮೂಲಕವೂ ಪಾಸುಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಬೆರಳ ತುದಿಯಲ್ಲಿ ಪಾಸು ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ..

ಪಾಸ್ ಪಡೆಯುವುದು ಹೇಗೆ
ಅಂತರ ಜಿಲ್ಲೆ ಸಂಚಾರ ನಡೆಸುವವರು ಮೊದಲು kspclearpass.idp.mygate.com ವೆಬ್ ಸೈಟ್‌ಗೆ ಭೇಟಿ ಕೊಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಬೇಕು. ಆಗ ನಿಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ವೆಬ್ ಸೈಟ್ ಪ್ರವೇಶ ಮಾಡಬಹುದು.

ವಿವರಗಳನ್ನು ಭರ್ತಿ ಮಾಡಿ
ವೆಬ್ ಸೈಟ್ ಪ್ರವೇಶ ಮಾಡಿದ ಮೇಲೆ ಜನರು ತಮ್ಮ ಸರ್ಕಾರಿ ಗುರುತಿನ ಚೀಟಿಯಲ್ಲಿ ಇರುವಂತೆ ಹೆಸರು, ವಿವರ ನೋಂದಣಿ ಮಾಡಬೇಕು. ವಾಹನದ ನೋಂದಣಿ ಸಂಖ್ಯೆಯನ್ನು ಸಹ ನಮೂದಿಸಬೇಕು. ಸ್ವಂತ ವಾಹನಗಳ ಸಂಖ್ಯೆ ಮಾತ್ರ ಹಾಕಬೇಕು ಬಸ್, ರೈಲು ಮುಂತಾದವುಗಳ ಮೂಲಕ ಸಂಚಾರ ನಡೆಸಲು ಈ ಪಾಸು ಅನ್ವಯ ಆಗುವುದಿಲ್ಲ.

ಪಾಸ್ ಪೋನ್‌ನಲ್ಲಿಯೆ ಸಿಗುತ್ತದೆ
ನೀವು ಎಲ್ಲಾ ವಿವರಗಳನ್ನು ನಮೂದಿಸಿದ ಬಳಿಕ ನಿಮ್ಮ ಸಂಖ್ಯೆಗೆ ಪಾಸು ಬರುತ್ತದೆ. ಅದನ್ನು ಬಳಸಿಕೊಂಡು ಸಂಚಾರ ನಡೆಸಬಹುದಾಗಿದೆ. ಆದರೆ, ನೆನಪಿರಲಿ ಇದು ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿಯ ಪಾಸ್ ಮಾತ್ರ ಆಗಿರುತ್ತದೆ.

ಪಾಸು ದುರುಪಯೋಗ ಅಪರಾಧ
ಪೊಲೀಸ್ ಇಲಾಖೆ ನೀಡುತ್ತಿರುವ ಪಾಸು ಒಬ್ಬ ವ್ಯಕ್ತಿಗೆ ಮಾತ್ರ ಮಾನ್ಯವಾಗಿರುತ್ತದೆ. ಇದನ್ನು ದುರುಪಯೋಗ ಮಾಡುವವರ ವಿರುದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಶಿಕ್ಷಿಸಲು ಅವಕಾಶವಿದೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ಎಲ್ಪಿಜಿ ಪೂರೈಕೆಯಲ್ಲಿ ತೊಂದರೆ ಇಲ್ಲ, ಕೇಂದ್ರ ಸಚಿವರಿಂದ ಭರವಸೆ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ -
HPCL Recruitment 2026: HPCL ನಿಂದ 731 ಹುದ್ದೆಗಳಿಗೆ ಬೃಹತ್ ನೇಮಕಾತಿ, ವಾರ್ಷಿಕ 60 ಲಕ್ಷ ರೂ. ವರೆಗೆ ಸಂಬಳ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ










Click it and Unblock the Notifications