HSRP Apply Online: ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್‌ಗಾಗಿ ನೋಂದಣಿ ಹೇಗೆ?, ಪ್ರಯೋಜನೆಗಳೇನು?
ಬೆಂಗಳೂರು, ನವೆಂಬರ್ 16: ದೇಶಾದ್ಯಂತ ಅತೀ ಸುರಕ್ಷತಾ ನೋಂದಣಿ ಫಲಕ (HSRP) ಅಳವಡಿಕೆಗೆ ಈಗಾಗಲೇ ಚಾಲನೆ ನೀಡಿ ಆದೇಶಿಸಲಾಗಿದೆ. ನೋಂದಣಿ ದಿನಾಂಕ ಮತ್ತೆ ವಿಸ್ತರಿಸಿದೆ. ಹಾಗಾದರೆ ಸರ್ಕಾರದ ಆದೇಶದಂತೆ 2019ಕ್ಕೂ ಮೊದಲಿನ ವಾಹನ ಸವಾರರು ಈ ನಂಬರ್ ಪಡೆಯಲು ಎಲ್ಲಿ ನೋಂದಾಯಿಸಿಕೊಳ್ಳಬೇಕು, ವಿಧಾನಗಳು ಮತ್ತು ವಿವರಗಳನ್ನು ಇಲ್ಲಿ ತಿಳಿಯಬಹುದು.
2019ರ ಏಪ್ರೀಲ್ ನಂತರದ ಖರೀದಿಸಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳು ಇವೆ. ಅದಕ್ಕೂ ಮುನ್ನ ಹೊಂದಿದ ವಾಹನಗಳ ಸವಾರರಿಗೆ ಹೊಸ ನಂಬರ್ ಪ್ಲೇಟ್ ಅವಳವಡಿಕೆ ಅನ್ವಯಿಸಲಿದೆ. ಮೊದಲು ಈ ನಂಬರ್ ಪ್ಲೇಟ್ ಗೆ ನೋಂದಣಿ ವಿಧಾನ, ಸಾಮಾನ್ಯ ನಂಬರ್ ಪ್ಲೇಟ್ ಹಾಗೂ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ವ್ಯತ್ಯಾಸ, ಎಚ್‌ಎಸ್‌ಆರ್‌ಪಿ ಪ್ರಯೋಜನಗಳ ಕುರಿತು ಇಲ್ಲಿ ತಿಳಿಯೋಣ.

ಮುಂದಿನ ಮೂರು ತಿಂಗಳು (ಫೆ.17ರವರೆಗೆ) ಅಳಡಿಕೆ ದಿನಾಂಕ ವಿಸ್ತರಿಸಲಾಗಿದೆ. ಸವಾರರು ಹೊಸ ನಂಬರ್ ಪ್ಲೇಟ್‌ಗಾಗಿ www.siam.in ಭೇಟಿ ನೀಡಿ ಮತ್ತು https://bookmyhsrp.com/ ಗೆ ಭೇಟಿ ನೀಡಬೇಕು.
* ಪರದೇ ಮೇಲೆ ಕೇಳಲಾಗುವ ಎಚ್‌ಎಸ್‌ಆರ್‌ಪಿ ಬುಕ್ ಮೇಲೆ ಕ್ಲೀನ್ ಮಾಡಬೇಕು.
* ನಂತರ ತೆರೆದುಕೊಳ್ಳುವ ಬುಕ್ಕಿಂಗ್ ಡಿಟೇಲ್ಸ್ ಕಾಲಂನಲ್ಲಿ ವಾಹನ ತಯಾರಿಕ ಕಂಪನಿ ಆಯ್ಕೆ ಮಾಡಿಕೊಳ್ಳಬೇಕು.
* ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡು ನಿಮ್ಮ ವಾಹನದ ನಂಬರ್, ಚೆಸ್ಸಿ ಮತ್ತು ಇಂಜಿನ್ ನಂಬರ್ ಕ್ಯಾಪ್ಚಾ ನಮೂದಿಸಿ.
* ವಿವರ ಭರ್ತಿ ಆದ ನಂತರ ನಂಬರ್ ಪ್ಲೇಟ್‌ಗಾಗಿ ಹತ್ತಿರ ಡೀಲರ್ ಸ್ಥಳ ಆಯ್ಕೆ ಮಾಡಿಕೊಳ್ಳಿ.
* ನಂತರ ಕೇಳಲಾಗುವ ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.
* ನಿಮ್ಮ ಮೊಬೈಲ್‌ಗೆ ಬರುವ ಸಂದೇಶದ ಆಧಾರದಲ್ಲಿ ನೀವು ಸಮಯಕ್ಕೆ ಸರಿಯಾಗಿ ಹತ್ತಿರದ ಡೀಲರ್ ಸ್ಥಳಕ್ಕೆ ಭೇಟಿ ನೀಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.
* ಹೊಸ ನಂಬರ್ ಪ್ಲೇಟ್ ಅಳಡಿಕೆಗೆ ನೋಂದಾಯಿಕೊಂಡ ಮೇಲೆ ಅದನ್ನು ಟ್ರ್ಯಾಕ್ ಸಹ ಮಾಡಬಹುದು.
HSRP ನಂಬರ್ ಪ್ಲೇಟ್ ಅಂದ್ರೇನು?
ಸಾರ್ವಜನಿಕ ವಾಹನಗಳ ಸುರಕ್ಷತೆ ಕಾರಣದಿಂದ, ಅಪರಾಧ ತಡೆಗೆ ಈ ನಿಯಮ ಜಾರಿಗೆ ತಂದಿದೆ. ಈಗಾಗಲೇ ದಿನಾಂಕ ವಿಸ್ತರಣೆ ಮಾಡಿರುವ ಸರ್ಕಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಕನಿಷ್ಠ 500-1000 ರೂ.ದಂಡ ಹಾಕುವ ಸಾಧ್ಯತೆ ಇದೆ.
ಹೆಸರೆ ಹೇಳುವಂತೆ ಇದೊಂದು ಸುರಕ್ಷಿತಾ ನೋಂದಣಿ ಪ್ಲೇಟ್ ಆಗಿದೆ. ಅಲ್ಯುಮಿನಿಯಂ ಲೋಹದಿಂದ ತಯಾರಿಸಿದ ಪ್ಲೇಟ್ ನಲ್ಲಿ ಇಂಗ್ಲೀಷ್ ಅಕ್ಷಗಳು ಉಬ್ಬಿರುವ ಅಚ್ಚಾಗಿರುತ್ತವೆ. ಇಂಡಿಯಾ ಸ್ಟಿಕ್ಕರ್ ಸಹ ಇರಲಿದೆ.

ಹೊಸ ನಂಬರ್ ಪ್ಲೇಟ್ ಪ್ರಯೋಜನ
* ನೀವ ಹಾಕುವ HSRP ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ (ಕಾರು/ಬೈಕ್ ಸಂಪೂರ್ಣ ಮಾಹಿತಿ) ಎಲ್ಲ ಮಾಹಿತಿ ಅಡಕವಾಗಿರುತ್ತದೆ.
* ಈ ವಾಹನದ ಮಾಹಿತಿಗಳು ಸರ್ಕಾರದ ಕಚೇರಿಯಲ್ಲಿ (ಡೆಟಾಬೇಸ್) ಸಂಗ್ರಹವಾಗಿರುತ್ತದೆ.
* ನಿಮ್ಮ ವಾಹನ ಕಳ್ಳತನವಾದರೆ ಇದರ ಸಹಾಯದಿಂದ ಬೇಗನೇ ಹುಡುಕಲು ಅನುಕೂಲವಾಗುತ್ತದೆ
* ಕಳ್ಳತನದ ಬೈಕ್ ಅಪರಾಧ ಕೃತ್ಯಕ್ಕೆ ಬಳಕೆ ಆಗುವುದನ್ನು ತಡೆಯಬಹುದು.
* ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನಧಿಕೃತ ಬದಲಾವಣೆ ಅಸಾಧ್ಯವಾಗಿದೆ.
* ಈ ನಂಬರ್ ಪ್ಲೇಟ್‌ನಲ್ಲಿ ಮಾಹಿತಿ ತಿದ್ದಲು ಆಗುವುದಿಲ್ಲ.
* ಈ ಪ್ಲೇಟ್‌ನ ಮರುಬಳಕೆಯು ಸಾಧ್ಯವಿಲ್ಲ.












Click it and Unblock the Notifications