Gruha Jyothi Scheme: ಮನೆ ಬದಲಿಸುವವರು ಗೃಹಜ್ಯೋತಿ ಲಾಭ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಫೆಬ್ರವರಿ 17: ಗೃಹಜ್ಯೋತಿ ಯೋಜನೆಯಿಂದ ಕೋಟ್ಯಾಂತರ ಜನ ರಾಜ್ಯದಲ್ಲಿ ಲಾಭ ಪಡೆಯುತ್ತಿದ್ದಾರೆ. ಸ್ವಂತ ಮನೆಯವರು ಉಚಿತ ಕರೆಂಟ್ ಬಿಲ್‌ ಪಡೆಯುವುದು ಒಂದೆಡೆಯಾದರೆ, ಬಾಡಿಗೆ ಮನೆಯವರು ಮನೆ ಬದಲಾಯಿಸಿದಾಗಲೂ ಯೋಜನೆ ಲಾಭ ಮತ್ತೊಮ್ಮೆ ಹೊಸ ಮನೆಯಲ್ಲಿ ಪಡೆಯುವುದು ಹೇಗೆ ಎಂದು ಇಂಧನ ಇಲಾಖೆ ಹೊಸ ಮಾರ್ಗೋಪಾಯ ನೀಡಿದೆ.

ಮನೆ ಬದಲಾವಣೆ ಮಾಡಿದ್ದರೂ ಹೊಸ ಮನೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಪಯೋಗ ಸಿಗುತ್ತಿಲ್ಲವೇ. ಹಳೆಯ ಮನೆಯಲ್ಲಿದ್ದಾಗ ಪಡೆದಿದ್ದಾ ಗೃಹಜ್ಯೋತಿ ಯೋಜನೆಯ ಅಲ್ಲಿನ ಖಾತೆಯನ್ನು ಡಿ ಲಿಂಕ್ ಮಾಡಬೇಕೇ. ಇದಕ್ಕಾಗಿ ಕರ್ನಾಟಕ ಇಂಧನ ಇಲಾಖೆಯೂ ಅವಕಾಶವನ್ನು ಮಾಡಿಕೊಟ್ಟಿದೆ. ಈಗಾಗಲೇ ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯುವುದು ಹೇಗೆ ಎಂಬ ಗೊಂದಲ ಸಾಕಷ್ಟು ಜನರನ್ನು ಕಾಡಿತ್ತು. ಹೀಗಾಗಿ ಯೋಜನೆ ಜಾರಿಯಾದ ಬಳಿಕ ಬೆಸ್ಕಾಂ ಹೊಸ ಮಾಹಿತಿಯನ್ನ ನೀಡಿದೆ.

How To Get Gruha Jyothi Benefit Again For Those Who Change House

ಗೃಹಜ್ಯೋತಿ ಯೋಜನೆ ಮಾಡಿಸಿಕೊಂಡಿರುವ ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್ ಆದ ನಂತರ ಹೊದ ಮನೆ ಹಾಗೂ ಬಾಡಿಗೆ ಮನೆಯ ಆರ್‌ ಆರ್‌ ಸಂಖ್ಯೆಗೂ ಗೃಹ ಜ್ಯೋತಿ ಸೌಲಭ್ಯ ದೊರಕಲಿದ್ದು, ಹಳೆಯ ಮನೆಯ ಆರ್‌ ಆರ್‌ ಸಂಖ್ಯೆಯನ್ನು ಡಿ ಲಿಂಕ್‌ ಮಾಡಬೇಕಾಗಿರುತ್ತದೆ. ಈಗಾಗಲೇ ರಾಜ್ಯಾದ್ಯಂತ 179078 ಡಿ- ಲಿಂಕ್‌ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 131936 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದಾಗಿದೆ.

ಮನೆ ಬದಲಿಸುವ ಸಂದರ್ಭಲ್ಲಿ ಆಧಾರ್‌ ನಂಬರ್‌ ಜತೆ ಲಿಂಕ್‌ ಆಗಿರುವ ಆರ್‌.ಆರ್‌. ನಂಬರ್‌ ವಿವರ ಪರಿಶೀಲಿಸಿ ಡಿ-ಲಿಂಕ್‌ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್‌ ಜತೆ ಲಿಂಕ್‌ ಆಗಿರದ ಆರ್‌ .ಆರ್‌. ನಂಬರ್‌ಗೆ ಲಿಂಕ್‌ ಮಾಡಬಹುದು. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್‌ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

ಈ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಮಾತನಾಡಿ, ಗೃಹ ಜ್ಯೋತಿ ಯೋಜನೆಯ ಲಾಭವನ್ನು ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್‌ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್‌ ಫೀ, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಡಿ ಲಿಂಕ್‌ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ. ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ಮಾಡಿ, ಜನತೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಡಿ-ಲಿಂಕ್‌ ಮಾಡುವುದು ಹೇಗೆ?

ಗ್ರಾಹಕರ https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+