ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊತ್ತೇ... ಸಿಮಿ ಉಗ್ರವಾದ ತಳೆದಿದ್ದೇ ಕರ್ನಾಟಕದಲ್ಲಿ..!

By ವಿಕ್ಕಿ ನಂಜಪ್ಪ
|
Google Oneindia Kannada News

ಚರ್ಚ್ ಸ್ಟ್ರೀಟ್‌ನಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ ಸಿಮಿ ಕೈವಾಡವಿರುವ ಕುರಿತು ಪೊಲೀಸರು ಸಾಕ್ಷಿಗಾಗಿ ಹುಡುಕುತ್ತಿದ್ದಾರೆ. ಆದರೆ, ಸಿಮಿ ಸಂಘಟನೆ ತೀವ್ರಗಾಮಿಯಾಗಿ ಬದಲಾಗಿದ್ದೇ ಕರ್ನಾಟಕದಲ್ಲಿ ಎಂಬುದು ಗೊತ್ತೇ..?

ಸರ್ಕಾರ ಹೇರಿರುವ ನಿಷೇಧದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕೆಂದು ಅನೇಕ ಕಾರ್ಯಕರ್ತರು ಬಯಸಿದ್ದರು. ಆದರೆ, ಸಿಮಿ ಸಂಘಟನೆಗೆ ನಿಷೇಧ ಹೇರಿದ ಒಂದು ವರ್ಷದ ನಂತರ ಸಫ್ದಾರ್ ನಗೋರಿ ಹಾಗೂ ಆತನ ಸಹೋದರ ಕಮ್ರುದ್ದೀನ್ ನಗೋರಿ ನೇತೃತ್ವದಲ್ಲಿ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ನಡೆಸಿದ ಸಭೆಯಲ್ಲಿ ಹಿಂಸಾತ್ಮಕ ಹೋರಾಟಕ್ಕಿಳಿಯಲು ನಿರ್ಧರಿಸಿದರು.

ಹುಬ್ಬಳ್ಳಿ ಬಸ್ ನಿಲ್ದಾಣದ ಹತ್ತಿರ ಹಮ್ಮಿಕೊಂಡಿದ್ದ ಈ ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸಿಮಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇತರ ರಾಜ್ಯಗಳಿಂದಲೂ ಕಾರ್ಯಕರ್ತರು ಇಲ್ಲಿಗೆ ಆಗಮಿಸಿದ್ದರು.

simi

ಈದ್ಗಾ ಮೈದಾನ ವಿವಾದದ ಲಾಭ ಪಡೆಯುವ ಉದ್ದೇಶ
ಆಗ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ತಾರಕಕ್ಕೇರಿತ್ತು. ಈ ಸನ್ನಿವೇಷದ ಲಾಭ ಪಡೆಯುವ ಉದ್ದೇಶದಿಂದ ಸಿಮಿ ಸಭೆ ಸೇರಿತ್ತು. ಸುಭಾನ್, ರಿಯಾಜುದ್ದೀನ್ ನಾಜಿರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಇಲ್ಲಿ ಸಂಘದ ಕಾರ್ಯಚಟುವಟಿಕೆಯನ್ನು ಕೇರಳ ಸೇರಿದಂತೆ ದೇಶಾದ್ಯಂತ ಹರಡಲು ನಿರ್ಧರಿಸಲಾಯಿತು.

ಇಂತಹುದೇ ಸಭೆಯನ್ನು ಮತ್ತೆ ಐದು ವರ್ಷಗಳ ನಂತರ ಕೇರಳದ ವಾಗಮೊನ್ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ನಗೋರಿ ಮಧ್ಯ ಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದ. ಆಗ ಆತನ ಹಿಂಬಾಲಕರು ದೇಶಾದ್ಯಂತ ದಾಳಿ ನಡೆಸುವ ಪ್ರತಿಜ್ಞೆಗೈದರು.

ಆಗ ಮಧ್ಯ ಪ್ರವೇಶಿಸಿದ ಪಾಕಿಸ್ತಾನದ ಐಎಸ್ಐ ಭಾರತದಲ್ಲಿಯೇ ಹುಟ್ಟಿ ಬೆಳೆದವರನ್ನು ಉಗ್ರರನ್ನಾಗಿ ತಯಾರಿಸಲು ಯೋಜನೆ ರೂಪಿಸಿತು. ಸಿಮಿ ಆಗಲೇ ಪೊಲೀಸರ ಕಣ್ಣಿನಲ್ಲಿ ಉಗ್ರವಾದಿ ಸಂಘಟನೆಯಾಗಿತ್ತು. ಆದ್ದರಿಂದ 'ಇಂಡಿಯನ್ ಮುಜಾಹಿದೀನ್' ಸಂಘಟನೆ ಜನ್ಮ ತಳೆಯಿತು.

ಜನ್ಮ ತಳೆಯಿತು ಇಂಡಿಯನ್ ಮುಜಾಹಿದೀನ್
ಆಗ ಇಂಡಿಯನ್ ಮುಜಾಹಿದೀನ್ ನೇತೃತ್ವ ವಹಿಸಿದ್ದು ಸಿಮಿ ಪ್ರಕಟಿಸುತ್ತಿದ್ದ ನಿಯತಕಾಲಿಕೆಯ ಸಂಪಾದಕನಾಗಿದ್ದ ಸುಭಾನ್. ಆತನ ನೇತೃತ್ವದಲ್ಲಿಯೇ ಉತ್ತರ ಪ್ರದೇಶದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು.

ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಸದಸ್ಯರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್ ಸಹೋದರರಿಗೆ ಸಾಕಷ್ಟು ಬೆಂಬಲ ಸಿಕ್ಕಿತು. ಅವರು ಯಾಸಿನ್ ಭಟ್ಕಳ್‌ನನ್ನು ಸೇರಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಿದರು.

ಉಡುಪಿಯಿಂದ ಬಹುದೊಡ್ಡ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ತರಿಸಿ ದೇಶದ ಇತರೆಡೆ ಸಾಗಿಸಿದರು. ನಂತರ ಇದನ್ನೇ ಅನೇಕ ಸ್ಫೋಟಗಳಲ್ಲಿ ಬಳಸಲಾಯಿತು.

yasin

ಐಎಂ ಜಾಲ ಪತ್ತೆ ಹಚ್ಚಿದ ಅಲೋಕ್ ಕುಮಾರ್
ಪ್ರಸ್ತುತ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ)ರಾಗಿರುವ ಅಲೋಕ್ ಕುಮಾರ್ ಈ ಜಾಲವನ್ನು ಪತ್ತೆ ಹಚ್ಚಿದರು. ಅಂದೇ ಅವರೆಲ್ಲರೂ ಪೊಲೀಸ್ ಬಲೆಗೆ ಸಿಕ್ಕಿಬೀಳುತ್ತಿದ್ದರು. ಆದರೆ, ಶಿವಮೊಗ್ಗದಲ್ಲಿದ್ದ ಉಗ್ರರು ಅಲ್ಲಿಗೆ ಪೊಲೀಸರು ಬರುವುದರೊಳಗೆ ಪರಾರಿಯಾಗಿದ್ದರು.

ಆದರೆ, ಯಾಸಿನ್ ಭಟ್ಕಳ್ ಪೊಲೀಸರಿಗೆ ಸಿಕ್ಕಿಬೀಳುವುದರೊಂದಿಗೆ ಇಂಡಿಯನ್ ಮುಜಾಹಿದೀನ್ ಎಂಬ ಬೃಹತ್ ಉಗ್ರ ಸಂಘಟನೆ ಕಟ್ಟುವ ಕನಸು ಮುರಿದುಬಿದ್ದಿತ್ತು. ಸುಭಾನ್, ರಿಯಾಜ್ ಮತ್ತು ಇಕ್ಬಾಲ್ ಪ್ರಸ್ತುತ ಪಾಕಿಸ್ತಾನದಲ್ಲಿ ಇದ್ದಾರೆಂದು ಇಂಟೆಲಿಜೆನ್ಸ್ ಬ್ಯೂರೊ ಹೇಳುತ್ತಿದೆ.

ಮತ್ತೆ ಚಿಗುರಿದ ಸಿಮಿ : ಯಾಸಿನ್ ಬಂಧನದ ನಂತರ ಐಎಂ ಶಕ್ತಿಗುಂದಿತು. ಆಗ ಮತ್ತೆ ಸಿಮಿ ಚಿಗುರಿಕೊಂಡಿತು. ಬೋಧಗಯಾ ಹಾಗೂ ಪಾಟ್ನಾದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ತಾನು ವಾಪಸ್ ಬಂದಿದ್ದೇನೆ ಎಂಬುದನ್ನು ಜಗತ್ತಿಗೆ ಅರುಹಿತು.

ಇಂದು ಸಿಮಿ ಸಂಘಟನೆಯನ್ನು ಮಧ್ಯ ಪ್ರದೇಶದ ಖಾಂಡ್ವಾ ಜೈಲಿನಿಂದ ಪರಾರಿಯಾದ ಐವರು ಉಗ್ರರು ನಿಯಂತ್ರಿಸುತ್ತಿದ್ದಾರೆ. ಪುಣೆ, ಚೆನ್ನೈ ಹಾಗೂ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದಿರುವ ಬಾಂಬ್ ಸ್ಫೋಟಗಳಲ್ಲಿ ಈ ಐವರದ್ದೇ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.

English summary
It would be interesting to note that the radical version of this outfit was born in Karnataka. A year after the ban there was a major meeting of the SIMI operatives led by Safdar Nagori held at Hubbali in which it was decided that the outfit would go radical and there is no point in fighting the governments against the ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X