ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ಹಣವೆಷ್ಟು?

ಬೆಂಗಳೂರು, ಆಗಸ್ಟ್ 14: ರಾಜ್ಯದ ಹಲೆವೆಡೆ ಉಂಟಾಗಿರುವ ಪ್ರವಾಹ ಪರಿಸ್ಥಿತಿಯು ಈಗಾಗಲೇ ಸಾವಿರಾರು ಕೋಟಿ ನಷ್ಟವನ್ನುಂಟುಮಾಡಿದೆ. ಸಿಎಂ ಯಡಿಯೂರಪ್ಪ ಅವರ ಅಗತ್ಯ ದೇಣಿಗೆ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

ಸಿಎಂ ಮನವಿಗೆ ಓಗೊಟ್ಟು ರಾಜ್ಯದ ಹಲವಾರು ಮಂದಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಪರಿಹಾರ ನಿಧಿಯಲ್ಲಿರುವ ಒಟ್ಟು ಮೊತ್ತು, ಜನರು ಕಳುಹಿಸಿರುವ ಮೊತ್ತ ಎಲ್ಲದರ ಮಾಹಿತಿಯನ್ನು ಸಿಎಂ ಕಚೇರಿ ಇಂದು ಬಿಡುಗಡೆ ಮಾಡಿದೆ.

ಆಗಸ್ಟ್ 9 ನೇ ತಾರೀಖಿನಿಂದ ಆಗಸ್ಟ್ 13 ರ ವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2.69 ಕೋಟಿ ರೂಪಾಯಿ ಹರಿದುಬಂದಿದೆ. ಇವುಗಳಲ್ಲಿ ಡಿಡಿ ಮೂಲಕ ಬಂದ ಹಣವೂ ಸೇರಿದೆ.

How much money is in Chief minister relief fund Karnataka

ಆಗಸ್ಟ್ 13 ಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಒಟ್ಟು 101.7 ಕೋಟಿ ರೂಪಾಯಿ ಹಣವಿದೆ. ಹಲವು ಪ್ರಮುಖ ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ನಾಗರೀಕರು, ಐಟಿ ಉದ್ಯೋಗಿಗಳು ಎಲ್ಲರೂ ಸಿಎಂ ಅವರ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ಎಂಟಿಬಿ ನಾಗರಾಜು ಅವರು ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ನಿನ್ನೆಯಷ್ಟೆ ಪ್ರಕಟಿಸಿದ್ದರು. ಅವರಿನ್ನೂ ಸಿಎಂ ಅವರಿಗೆ ಚೆಕ್ ಹಸ್ತಾಂತರ ಮಾಡಿದಂತಿಲ್ಲ.

ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಇನ್ನಷ್ಟು ಹಣಕಾಸಿನ ನೆರವಿನ ಅಗತ್ಯವಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಖಾತೆಗೆ ನೇರವಾಗಿ ಆನ್‌ಲೈನ್ ಮೂಲಕ ವರ್ಗಾಯಿಸಬಹುದು ಅಥವಾ ಚೆಕ್ ಅಥವಾ ಡಿ. ಡಿ. ಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಕಳುಹಿಸಬಹುದು.

ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ : ವಿಧಾನಸೌಧ ಖಾತೆ ಸಂಖ್ಯೆ : 37887098605 ಐ.ಎಫ್.ಎಸ್.ಸಿ. ಕೋಡ್ : SBIN0040277 ಎಂ.ಐ.ಸಿ.ಆರ್. ಸಂಖ್ಯೆ : 560002419 PAN No. : AAAGC1692P ಅಥವಾ GGGGG0000G ಈ ಖಾತೆಗೆ ನೀಡುವ ದೇಣಿಗೆಯು ಆದಾಯ ತೆರಿಗೆ ಕಾಯ್ದೆ 80ಜಿ (2) ಯಡಿ ತೆರಿಗೆ ವಿನಾಯಿತಿ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+