Hostel Hudugaru: ಕನ್ನಡಿಗರ ‘ಹಾಸ್ಟೆಲ್ ಹುಡುಗರು’ ತೆಲುಗಿಗೆ ಎಂಟ್ರಿ!

ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಯುತ್ತಿದ್ದು, ಜಗತ್ತಿನಾದ್ಯಂದ ಭಾರಿ ಸೌಂಡ್ ಮಾಡುತ್ತಿದೆ. ಅದರಲ್ಲೂ ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳು ಸ್ಯಾಂಡಲ್‌ವುಡ್ ಗತ್ತು ಹೆಚ್ಚುವಂತೆ ಮಾಡಿವೆ. ಹೀಗೆ ಉತ್ತುಂಗದ ಅಲೆಯಲ್ಲಿ ಕನ್ನಡ ಚಿತ್ರರಂಗ ಖುಷಿಪಡುವಾಗಲೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಕೂಡ ಬಾಕ್ಸ್ ಆಫಿಸ್‌ನಲ್ಲಿ ಧೂಳೆಬ್ಬಿಸಿದೆ. ಕನ್ನಡಿಗರ ಸಿನಿಮಾ ತೆಲುಗು ಇಂಡಸ್ಟ್ರಿಗೂ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಕೋಟಿ ಕೋಟಿ ಬಾಚಿ ಸೌಂಡ್ ಮಾಡುತ್ತಿದೆ. ವಿದ್ಯಾರ್ಥಿ ಜೀವನದ ಕಥೆ ಕೆತ್ತಿಕೊಟ್ಟಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಹೌಸ್‌ಫುಲ್ ಪ್ರದರ್ಶನ ಕಂಡು ಖುಷಿ ಕೊಟ್ಟಿತ್ತು. ಹೀಗೆ ಕನ್ನಡ ನಾಡಿನಲ್ಲಿ ಧೂಳೆಬ್ಬಿಸಿದ್ದ ಹಾಸ್ಟೆಲ್ ಹುಡುಗರಿಗೆ ಬೇರೆ ಬೇರೆ ರಾಜ್ಯದಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ಪೈಕಿ ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ತೆಲುಗು ಭಾಷೆಯಲ್ಲೇ ಡಬ್ ಮಾಡಲಾಗಿದೆ. ಈ ಮೂಲಕ ಕನ್ನಡ ಸಿನಿಮಾ ತೆಲುಗು ರಾಜ್ಯಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

Hostel Hudugaru Bekagiddare will release in Telugu soon

ತೆಲಗು ಚಿತ್ರರಂಗದಲ್ಲೂ ಕನ್ನಡಿಗರ ಸದ್ದು

ಹೌದು ಎಲ್ಲಾ ಅಂದುಕೊಂಡಂತೆ ನಡೆದಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವೀಗ ತೆಲುಗಿನತ್ತ ಹೆಜ್ಜೆ ಇಟ್ಟಿದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿರುವ ಚಿತ್ರವನ್ನು 'ಬಾಯ್ಸ್ ಹಾಸ್ಟೆಲ್' ಟೈಟಲ್ ಅಡಿ ತೆಲುಗು ಭಾಷೆಗೆ ಡಬ್ ಮಾಡಲಾಗ್ತಿದೆ. ಅಷ್ಟೇ ಅಲ್ಲ ಇದೇ ತಿಂಗಳ‌ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಭರ್ಜರಿಯಾಗಿ ಎಂಟ್ರಿ ಕೊಡಲಿದೆ. ಹೀಗೆ ಕನ್ನಡದಲ್ಲಿ ಗೆದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗು ಚಿತ್ರರಂಗದಲ್ಲೂ ಹೊಸ ಹವಾ ಸೃಷ್ಟಿಸಲು ಸಿದ್ಧವಾಗಿದೆ.

ನಕ್ಕು ನಕ್ಕು ಹೊಟ್ಟೆ ನೋವು!

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಫಲವಾಗಿ ಹಾಸ್ಟೆಲ್ ಹುಡುಗರು ತೆರೆಯ ಮೇಲೆ ಅಬ್ಬರಿಸಿದೆ. ಈ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಈಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಟೈಲಟ್ ನಡಿ ತೆಲುಗು ಭಾಷೆಗೆ ಡಬ್ ಆಗ್ತಿರೋದು ಖುಷಿ ವಿಚಾರ ಅಂತಾ ಸಿನಿಮಾ ತಂಡ ಸಂತಸ ಹಂಚಿಕೊಂಡಿದೆ. ಈಗಾಗಲೇ ಸಾಕಷ್ಟು ಕನ್ನಡಿಗರ ಸಿನಿಮಾಗಳು ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದಲ್ಲದೆ ಸದ್ದು ಮಾಡಿದ್ದವು.

ಈಗ ಕನ್ನಡ ಸಿನಿಮಾಗಳದ್ದೇ ಸೌಂಡ್

ಚಾಯ್ ಬಿಸ್ಕೆಟ್ ಫಿಲ್ಮ್ಸ್ & ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಶೀರ್ಷಿಕೆಯಲ್ಲಿ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನ ನಟ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್‌ ಅಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯನ್ನ ಹೊಂದಿದ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ ಹಾಗೂ ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ & ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್ಮೊಹರ್ ಫಿಲ್ಮ್ಸ್ ಹಾಗೂ ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಈಗ ತೆಲುಗು ಪ್ರೇಕ್ಷಕರು ಅವರದ್ದೇ ಭಾಷೆಯಲ್ಲಿ ಚಿತ್ರ ಕಣ್ತುಂಬಿಕೊಳ್ಳಲಿದ್ದಾರೆ.

Hostel Hudugaru Bekagiddare will release in Telugu soon

ಒಟ್ನಲ್ಲಿ ಕನ್ನಡಿಗರ ಸಿನಿಮಾಗಳು ದಿನದಿಂದ ದಿನಕ್ಕೆ ದೊಡ್ಡ ಸದ್ದು ಮಾಡುತ್ತಿವೆ. ಕನ್ನಡ ಚಿತ್ರರಂಗದ ಮಟ್ಟಿಗೆ ಕೆಜಿಎಫ್ ಹಾಗೂ ಕಾಂತಾರ ದೊಡ್ಡ ಯಶಸ್ಸು ಸಾಧಿಸಿವೆ. ಹೀಗಾಗಿ ನೆರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಾಸ್ಟೆಲ್ ಬಾಯ್ಸ್‌ಗೂ ಬೇಡಿಕೆ ಹೆಚ್ಚಾಗಿದ್ದು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೂಡ ತುಂಬಿದ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಹೀಗಾಗಿ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+