ಪ್ರೇಮಲತಾ ದಿವಾಕರ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ

Posted By:
Subscribe to Oneindia Kannada

ಬೆಂಗಳೂರು, ಫೆ 9: ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರ ಶ್ರೀಗಳ ವಿರುದ್ಧ ಮಾಡಲಾಗಿದ್ದ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿ, ಪ್ರೇಮಲತಾ ದಿವಾಕರ್ ದಂಪತಿ ಮತ್ತು ಚ. ಮೂ ಕೃಷ್ಣಶಾಸ್ತ್ರಿ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಿಸಿ, ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಜನವರಿ 29ರಂದು ಸಿಐಡಿ ಸಲ್ಲಿಸಿದ್ದ ಬಿ'ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಇದೀಗ ಪ್ರೇಮಲತಾ , ದಿವಾಕರ್ ಶಾಸ್ತ್ರಿ, ಚ.ಮೂ ಕೃಷ್ಣಶಾಸ್ತ್ರಿ, ಸಿ.ಎಂ.ಎನ್ ಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಸರಕಾರಿ ಅಭಿಯೋಜಕ ಬಿ.ಟಿ ವೆಂಕಟೇಶ್, ಬಿ ಪದ್ಮನಾಭ ಶರ್ಮ ಎಂಬುವರ ವಿರುದ್ಧ ಐಪಿಸಿ 384, 389, 504, 506, 511, 120(ಬಿ) ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಧೀಶರು ಹಿಂದೆ ಸರಿದಿದ್ದು ದೂರುಗಾರ್ತಿಯ ಅವಿಶ್ವಾಸದಿಂದ

ಜೊತೆಗೆ, ಎಲ್ಲಾ ಏಳು ಆರೋಪಿಗಳಿಗೂ ಸಮನ್ಸ್ ಜಾರಿಗೊಳಿಸಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ರಾಮಚಂದ್ರಾಪುರ ಮಠದ ಭಕ್ತರು ದಾಖಲಿಸಿದ್ದ ದೂರಿನನ್ವಯ ಸಿಐಡಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿ; ವಿಚಾರಣೆ ಆರಂಭಿಸಿರುವ ಹೊನ್ನಾವರದ ನ್ಯಾಯಾಲಯ ಪೂರಕ ದಾಖಲೆಗಳು ಲಭ್ಯವಾಗಿರುವುದರಿಂದ ಈ ಕ್ರಮ ಕೈಗೊಂಡಿದೆ.

Honnavara court directed to file criminal case against Premalatha Diwakar Shastry

ಬ್ಲ್ಯಾಕ್ ಮೇಲ್ ಕೇಸಿಗೆ ಸಂಬಂಧಿಸಿ ಬಂಧಿತರಾಗಿದ್ದ ಪ್ರೇಮಲತಾ ದಂಪತಿಗಳು, ಪಂಚನಾಮೆಯಲ್ಲಿ ತಾವು ರಾಮಚಂದ್ರಾಪುರ ಮಠವನ್ನು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಹಾಗೂ ರಾಘವೇಶ್ವರ ಶ್ರೀಗಳ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ದಾಖಲಿಸುವ ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.

ಆದರೆ ಬಲವಾದ ಸಾಕ್ಷಗಳ ಹೊರತಾಗಿಯೂ 'ಬಿ' ರಿಪೋರ್ಟ್ ಸಲ್ಲಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಇದೀಗ ನ್ಯಾಯಾಲಯ ವಿಚಾರಣೆ ಆರಂಭಿಸಿದ್ದು, ಆರೋಪಿಗಳಾದ ಪ್ರೇಮಲತಾ ದಂಪತಿ, ಚ ಮೂ ಕೃಷ್ಣಶಾಸ್ತ್ರಿ ಹಾಗೂ ಮತ್ತಿತರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rape and blackmail case filed against Raghaveshwara Seer of Ramachandrapura Math. Big relief to Seer as Honnavara court directed to file criminal case against Premalatha Diwakar and seven others.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ