ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ? ಪರಮೇಶ್ವರ್ ನೋಟ ಎತ್ತ!

Posted By:
Subscribe to Oneindia Kannada

ಸಚಿವ ಸಂಪುಟದಲ್ಲಿ ನಂಬರ್ ಎರಡನೇ ಸ್ಥಾನವಾಗಿರುವ ಆಯಕಟ್ಟಿನ ಗೃಹ ಸಚಿವ ಸ್ಥಾನದ ಮೇಲೆ ಡಾ. ಪರಮೇಶ್ವರ್ ಅವರಿಗೆ ಆಸಕ್ತಿ ಕಮ್ಮಿಯಾಗುತ್ತಿದೆಯೇ? ಹೈಕಮಾಂಡ್ ವಲಯದಲ್ಲಿ ಪ್ರಾಬಲ್ಯ ಹೊಂದಿರುವ ಪರಮೇಶ್ವರ್ ಅವರು ಬೇರೇನೇ ಆಲೋಚನೆ ಹೊಂದಿದ್ದಾರೆಯೇ?

ಪರಮೇಶ್ವರ್ ಆಪ್ತ ವಲಯದ ಪ್ರಕಾರ ಹೌದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಪರಮೇಶ್ವರ್ ಬಯಸುತ್ತಿರುವುದರಿಂದ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯದೇ ಇರುವ ಇಂಗಿತವನ್ನು ಪರಮೇಶ್ವರ್ ಹೊಂದಿದ್ದಾರೆಂದು ವಿಜಯವಾಣಿ ಪತ್ರಿಕೆ ವರದಿ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಮತ್ತು ಹಾಲೀ ಇಂಧನ ಸಚಿವ ಡಿ ಕೆ ಶಿವಕುಮಾರ್ ಹೆಸರು ಇನ್ನೇನು ಅಂತಿಮವಾಯಿತು ಎನ್ನುವಷ್ಟರಲ್ಲಿ, ಪಕ್ಷದ ಕೆಲವು ಹಿರಿಯ ತಲೆಗಳ ತಕರಾರಿನಿಂದ ಘೋಷಣೆ ಸದ್ಯದ ಮಟ್ಟಿಗೆ ಮುಂದೂಡಲ್ಪಟ್ಟಿತು ಎನ್ನುವುದು ಗೌಪ್ಯವಾಗಿ ಉಳಿದಿಲ್ಲ.

ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಅವಧಿಗೂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬಯಸಿದ್ದಾರೆ ಎನ್ನುವುದು ಕಾಂಗ್ರೆಸ್ ಅಂಗಣದಲ್ಲಿ ಹರಿದಾಡುತ್ತಿರುವ ಸುದ್ದಿ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಸೋತ ನಂತರ, ಉಪಮುಖ್ಯಮಂತ್ರಿ ಹುದ್ದೆಗೇರಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಪರಮೇಶ್ವರ್, ಕೊನೆಗೆ ಗೃಹ ಸಚಿವ ಸ್ಥಾನವನ್ನು ಒಲ್ಲದ ಮನಸ್ಸಿಂದಲೇ ಒಪ್ಪಿಕೊಂಡಿದ್ದರು. ಮುಂದಿನ ಚುನಾವಣೆಗೆ ಈಗಿಂದಲೇ ತಯಾರಿ? ಮುಂದೆ ಓದಿ.

ಕೆಪಿಸಿಸಿ ಅಧ್ಯಕ್ಷ ಹುದ್ದೆ

ಕೆಪಿಸಿಸಿ ಅಧ್ಯಕ್ಷ ಹುದ್ದೆ

ಗೃಹ ಸಚಿವರಾದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ವಲಯದಲ್ಲಿ ನಡೆಯುತ್ತಿದ್ದ ಬಿರುಸಿನ ಚಟುವಟಿಕೆಯ ಬಗ್ಗೆ ಅಷ್ಟೇನೂ ತಲೆಕೆಡೆಸಿಕೊಂಡಿರದಿದ್ದ ಪರಮೇಶ್ವರ್, ಈಗ ಮೂರನೇ ಅವಧಿಗೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದಕ್ಕೆ ಹಲವು ಕಾರಣಗಳು ಇಲ್ಲದೇ ಇಲ್ಲ.

ಜಿ ಪರಮೇಶ್ವರ್

ಜಿ ಪರಮೇಶ್ವರ್

ಮುಂದಿನ ಅಸೆಂಬ್ಲಿ ಚುನಾವಣೆಗೆ ಒಂದೂವರೆ ವರ್ಷ ಉಳಿದಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಿಂದ ಹಿಡಿದು ಪಕ್ಷದ ಎಲ್ಲಾ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಲು ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿರ್ಣಾಯಕ ಎಂದರಿತಿರುವ ಪರಮೇಶ್ವರ್ ಅವರಿಗೆ ಗೃಹ ಖಾತೆಯ ಮೇಲೆ ತುಸು ಆಸಕ್ತಿ ಕಮ್ಮಿಯಾಗುತ್ತಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಅಧ್ಯಕ್ಷ ಹುದ್ದೆಯತ್ತ ಒಲವು

ಅಧ್ಯಕ್ಷ ಹುದ್ದೆಯತ್ತ ಒಲವು

ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪಕ್ಷ ಸಂಘಟನೆ ಮತ್ತು ಗೃಹ ಖಾತೆ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟ ಎಂದರತಿರುವ ಪರಮೇಶ್ವರ್, ಪಕ್ಷದ ಹಿತಾದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ಹೆಚ್ಚಿನ ಒಲವನ್ನು ಹೊಂದಿದ್ದಾರೆ.

ಸಿದ್ದರಾಮಯ್ಯ ಸರಕಾರ

ಸಿದ್ದರಾಮಯ್ಯ ಸರಕಾರ

ಸಚಿವರಾದರೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ತಾನೂ ಒಬ್ಬ ಎಂದಾಗುವುದರಿಂದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬಳಿ ಈಗಾಗಲೇ ತಮ್ಮ ಮನದ ಇಂಗಿತವನ್ನು ತಿಳಿಸಿದ್ದಾರೆ ಎನ್ನುವ ಮಾಹಿತಿಯಿದೆ. ವರಿಷ್ಠರ ಜೊತೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪಗೆ ಬ್ರೇಕ್

ಯಡಿಯೂರಪ್ಪಗೆ ಬ್ರೇಕ್

ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕೋರ್ಟ್ ಕೇಸುಗಳಿಂದ ಹೊರಬಂದು ರಾಜ್ಯದೆಲ್ಲಡೆ ಪಾದರಸದಂತೆ ಪಕ್ಷ ಸಂಘಟನೆ, ಜನರ ಒಲವು ಗಳಿಸುವತ್ತ ದಾಪುಗಾಲು ಹಾಕುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಎಲ್ಲರೂ ಒಪ್ಪುವಂತಹ 'ನಾಯಕನು ನಾನು' ಎಂದು ಹೈಕಮಾಂಡ್ ಅವರಿಗೆ ಪರಮೇಶ್ವರ್ ಮನವರಿಕೆ ಮಾಡಿದ್ದಾರೆ ಎನ್ನುವ ಸುದ್ದಿಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Home Minister G Parameshwar interested continue as KPCC President for third term. To gear up the assembly election Parameshwar intended to be active in the party activities.
Please Wait while comments are loading...