Rain News: ಮಳೆ ಅಬ್ಬರ ಮತ್ತಷ್ಟು ಜೋರು, ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ!
ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಮಳೆರಾಯನ ಅಬ್ಬರ ಬಲು ಜೋರಾಗಿದ್ದು, ಕರ್ನಾಟಕದ ಜನ ಪರದಾಡುತ್ತಿದ್ದಾರೆ. ಹೀಗಾಗಿ ಮಳೆ ನಿಲ್ಲಲಿ ದೇವರೆ ಅಂತಾ ಪ್ರಾರ್ಥನೆ ಮಾಡುವ ಪರಿಸ್ಥಿತಿ ಬಂದಿದೆ. ಆದರೆ ಕೇವಲ 3 ತಿಂಗಳ ಹಿಂದೆ ಮಳೆ ಬರಲಿ ದೇವರೆ ಅಂತಾ ಕನ್ನಡಿಗರು ದೇವರಿಗೆ ಪ್ರಾರ್ಥನೆ ಮಾಡಿದ್ದರು. ಹೀಗಿದ್ದಾಗ ಕಳೆದ 1 ತಿಂಗಳಿಂದ ನಿರಂತರವಾಗಿ ಮಳೆ ಬೀಳುತ್ತಿದ್ದು, ಈ ರೀತಿ ಮಳೆ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಇದೇ ಸಮಯದಲ್ಲಿ ಮುಂದಿನ 24 ಗಂಟೆ ರಣ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದ್ದು, ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರ್ನಾಟಕದ ಕರಾವಳಿ ಭಾಗದಿಂದ ಹಿಡಿದು ಮಲೆನಾಡು ತನಕ ಮಳೆ ಅಬ್ಬರ ಬಲು ಜೋರಾಗಿದೆ. ಮುಂಗಾರು ಮಳೆ ಮುಗಿಯಲು ಇನ್ನೂ ಕೆಲವು ತಿಂಗಳು ಬಾಕಿ ಇದೆ. ಆದರೆ ಈಗಾಗಲೇ ನಮ್ಮ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿ ಆಗಿವೆ. ಅದರಲ್ಲೂ ಕರ್ನಾಟಕದ ಮಲೆನಾಡು ಭಾಗ & ಕರಾವಳಿ ಪ್ರದೇಶ ಈಗ ಭರ್ಜರಿ ಮಳೆಗೆ ಬೆಚ್ಚಿಬಿದ್ದಿದೆ. ಕಾವೇರಿ ನದಿ ಪ್ರದೇಶದ ಡ್ಯಾಂಗಳು ಸೇರಿ ಕೃಷ್ಣಾ ನದಿ ಭಾಗದ ಜಲಾಶಯಗಳು, ಮಲೆನಾಡು ಭಾಗದ ಡ್ಯಾಂ ಭರ್ತಿಯಾಗಿವೆ. ಹೀಗಿದ್ದರೂ ಕರ್ನಾಟಕದಲ್ಲಿ ಮಳೆ ಅಬ್ಬರ ಕಡಿಮೆ ಆಗಿಲ್ಲ. ಮುಂದಿನ 24 ಗಂಟೆ ಭಾರಿ ಮಳೆ ಬೀಳುವ ಬಗ್ಗೆ ಎಚ್ಚರಿಕೆ ನೀಡಿರುವ ಕಾರಣಕ್ಕೆ ಈಗ ಈ ಕೆಳಗಿನ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆಯನ್ನ ನೀಡಲಾಗಿದೆ.

ಭರ್ಜರಿ ಮಳೆಗೆ ಶಾಲೆಗಳು ಬಂದ್!
ಅರಬ್ಬಿ ಸಮುದ್ರದ ಪೂರ್ವ ದಿಕ್ಕಿನಲ್ಲಿ ಸುಳಿಗಾಳಿಯ ಸಂಚಾರ ಚುರುಕುಗೊಂಡಿದೆ. ಹೀಗೆ ಜುಲೈ 23 ರಿಂದ 26 ರವರೆಗೆ ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಮುಂಗಾರು ಮಾರುತ ಮತ್ತಷ್ಟು ಮಳೆ ಸುರಿಸಲು ಚುರುಕಾಗುತ್ತಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಾಳೆ ಭರ್ಜರಿ ಮಳೆ ಬೀಳಲಿರುವ ಜಾಗಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳಿಗೆ ಜುಲೈ 24 ರಿಂದ 26 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಕೊಡಗು & ಚಿಕ್ಕಮಗಳೂರು ಜಿಲ್ಲೆಗಳಿಗೆ ಕೂಡ ಜುಲೈ 24ರವರೆಗೆ ಯೆಲ್ಲೋ ಅಲರ್ಟ್ ಇದೆ. ಈ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ನಾಳೆ ಭರ್ಜರಿ ಮಳೆ ಬೀಳುವ ಕಾರಣಕ್ಕೆ ಬೆಳಗಾವಿ, ಖಾನಾಪುರ, ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರೈತರ ಮುಖದಲ್ಲಿ ಮಂದಹಾಸ!
ಒಟ್ನಲ್ಲಿ ಈ ಬಾರಿ ಕರ್ನಾಟಕದಲ್ಲಿ ಭರ್ಜರಿ ಮಳೆ ಬಿದ್ದಿದೆ. ಈ ಮೂಲಕ ಕರ್ನಾಟಕದ ಜನರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ 2023 ರಲ್ಲಿ ಕರ್ನಾಟಕ ತೀವ್ರ ಬರಗಾಲವನ್ನು ಎದುರಿಸಿತ್ತು. ಆದ್ರೆ 2024 ರಲ್ಲಿ ಈ ಮಾತು ಸುಳ್ಳಾಗಿದ್ದು ಮಳೆರಾಯ ಕನ್ನಡ ನಾಡಲ್ಲಿ ಭರ್ಜರಿ ಮಳೆ ಸುರಿಸಿದ್ದಾನೆ. ಅದ್ರಲ್ಲೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುತ್ತಿದ್ದು ಮುಂದಿನ ದಿನಗಳಲ್ಲಿ ಮಳೆ ಕೊರತೆ ಉಂಟಾದರೂ ಅದನ್ನ ಸಹಿಸುವ ಶಕ್ತಿ ಈಗ ಸಿಕ್ಕಂತಾಗಿದೆ. ಹೀಗಾಗಿ ಕನ್ನಡ ನಾಡಿನ ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications