ಉತ್ತರ ಕರ್ನಾಟಕದ ಈ ಜಿಲ್ಲೆಯಲ್ಲಿ ಹಿಟಾಚಿ ನಿರ್ಮಾಣ ಯಂತ್ರೋಪಕರಣ ಅಭಿವೃದ್ಧಿ ಕೇಂದ್ರ...Industry
ಬೆಂಗಳೂರು, ಸೆಪ್ಟಂಬರ್ 10: ಕರ್ನಾಟಕ ಸರ್ಕಾರ ಉತ್ತರ ಕರ್ನಾಟಕದ ಧಾರವಾಡಲ್ಲಿ 6000 ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಘೋಷಣೆ ಮಾಡಿತ್ತು. ಇದೀಗ ಇದೇ ಜಿಲ್ಲೆಯಲ್ಲಿ ಜಪಾನಿನ ಹಿಟಾಚಿ ಕನ್ಸ್ಟ್ರಕ್ಷನ್ ಮಷಿನರಿ ಕಂಪನಿಯು ನಿರ್ಮಾಣ ಯಂತ್ರೋಪಕರಣಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ತೀರ್ಮಾನಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದ್ದಾರೆ.
ಸಚಿವ ಎಂಬಿ ಪಾಟೀಲ್ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಜಪಾನ್‌ಗೆ ಭೇಟಿ ನೀಡಿದೆ. ಎರಡನೇ ದಿನ ಪ್ರಮುಖ ಕಂಪನಿಗಳ ಜೊತೆ ಚರ್ಚಿಸಿತು. ಮಂಗಳವಾರ ಹಿಟಾಚಿ ಕನ್ಸ್ಟ್ರಕ್ಷನ್ ಕಂಪನಿಯ ಉನ್ನತ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಈ ನಿರ್ಧಾರ ಘೋಷಿಸಲಾಯಿತು. ರಾಜ್ಯದ ನಿಯೋಗವು ತನ್ನ ಜಪಾನ್ ಭೇಟಿಯಲ್ಲಿ ರೆನೆಸಾಸ್ ಡಿವೈಸಸ್, ಅಸಾಹಿ ಕಸೆಯಿ ಮತ್ತು ಯಮಹಾ ರೋಬೊಟಿಕ್ಸ್‌ನ ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು.

ಧಾರವಾಡದಲ್ಲಿ ಕಾರ್ಯಾರಂಭ ಯಾವಾಗ?
ಧಾರವಾಡದಲ್ಲಿ 2027ರ ವೇಳೆಗೆ ಕಾರ್ಯಾರಂಭಗೊಳ್ಳಲಿರುವ ಈ ಕೇಂದ್ರದಲ್ಲಿ ಜಾಗತಿಕ ಮಟ್ಟದ ನಿರ್ಮಾಣ ಯಂತ್ರೋಪಕರಣಗಳ ವಿನ್ಯಾಸ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸುಮಾರು 200 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಜಾಗತಿಕ ಪೈಪೋಟಿಯ ನಡುವೆ ಧಾರವಾಡವನ್ನು ಆಯ್ಕೆ ಮಾಡಿರುವುದು ಕರ್ನಾಟಕಕ್ಕೆ ಮಹತ್ವದ ಸಾಧನೆಯಾಗಿದೆ ಎಂದು ಸಚಿವರು ಹೇಳಿದರು.
ಅಸಾಹಿ ಕಸೆಯಿ ಕಂಪನಿಯು ಬೆಂಗಳೂರಿನಲ್ಲಿ ಏರ್‌ಬ್ಯಾಗ್ ಬಿಡಿಭಾಗಗಳ ತಯಾರಿಕಾ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಇದು ರಾಜ್ಯದ ವಾಹನೋದ್ಯಮ ವಿಸ್ತರಣೆಗೆ ಪೂರಕವಾಗಿದೆ. ಭಾರತದಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಸಂದರ್ಭದಲ್ಲಿ ಮೈಸೂರನ್ನು ಆದ್ಯತೆ ನೀಡುವಂತೆ ನಿಯೋಗವು ರೆನೆಸಾಸ್ ಕಂಪನಿಗೆ ಮನವಿ ಮಾಡಿದೆ. ಮೈಸೂರು ನಾವೀನ್ಯತೆ ಆಧಾರಿತ ಹೂಡಿಕೆಗೆ ಉತ್ತಮ ತಾಣ ಎಂದು ಸಭೆಯಲ್ಲಿ ವಿವರಿಸಲಾಗಿದೆ.
Hitachi Construction Machinery -HCM ಜೊತೆಗೆ ಮಾತುಕತೆ ಫಲಪ್ರದ
— M B Patil (@MBPatil) September 9, 2025
ಹುಬ್ಬಳ್ಳಿ–ಧಾರವಾಡದಲ್ಲಿ ಡೆವಲಪ್'ಮೆಂಟ್ ಸೆಂಟರ್ ; 200 ಎಂಜಿನಿಯರ್ ಗಳಿಗೆ ಉದ್ಯೋಗ!
ಹಿಟಾಚಿ ಸಂಸ್ಥೆಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದೆವು. ರಾಜ್ಯದ ಹೂಡಿಕೆಸ್ನೇಹಿ ಪರಿಸರವನ್ನು ಪರಿಚಯಿಸಿ ಹೆಚ್ಚಿನ ಹೂಡಿಕೆಗೆ ಆಹ್ವಾನ ನೀಡಿದೆವು.… pic.twitter.com/xy2hSGUtwt
ಯಮಹಾ ರೋಬೊಟಿಕ್ಸ್ ಗೆ ರಾಜಧಾನಿ ಬೆಂಗಳೂರಿನಲ್ಲಿ ತಯಾರಿಕಾ ಘಟಕ ಸ್ಥಾಪಿಸಬೇಕೆಂದು ನಿಯೋಗ ಮನವಿ ಮಾಡಿದ್ದು, ಇದರಿಂದ ಸ್ಥಳೀಯ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ. ಅಲ್ಲದೇ ರಾಜ್ಯ ಸರ್ಕಾರದ ಪರವಾಗಿ ಕಂಪನಿಗಳಿಗೆ ಧನ್ಯವಾದ ಅರ್ಪಿಸಿದ ಸಚಿವರು, ಟೆಕ್ಸ್‌ಟೈಲ್ಸ್, ಉತ್ಪನ್ನಗಳು ಮತ್ತು ಕೆಮಿಕಲ್ಸ್ ಕ್ಷೇತ್ರದಲ್ಲಿಯೂ ಕರ್ನಾಟಕದಲ್ಲಿ ಹೂಡಿಕೆ ವಿಸ್ತರಿಸಲು ಚರ್ಚೆ ವೇಳೆ ಮನವಿ ಮಾಡಿದರು. ಇನ್ನೂ ಜಪಾನಿನಲ್ಲಿ ಯಶಸ್ವಿ ರೋಡ್‌ಶೋ ಬಳಿಕ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಾಗೂ ವಾಣಿಜ್ಯ ಬಾಂಧವ್ಯ ಬಲಪಡಿಸಲು ರಾಜ್ಯ ನಿಯೋಗ ಕೋರಿತು. ಜೊತೆಗೆ ಇಲ್ಲಿರುವ ಹೂಡಿಕೆಯ ವಿಫುಲ ಅವಕಾಶಗಳು, ಸಂಪನ್ಮೂಲಗಳ ಸದ್ಬಳಕೆ ಬಗ್ಗೆ ತಿಳಿಸಿತು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications