ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಬಾರಿ ತಂದೆ – ಮಗ ಗೆದ್ದ ನರಸಿಂಹರಾಜ ಕ್ಷೇತ್ರದ ಹಿನ್ನೋಟ!

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 6: ಮೈಸೂರು ಸಂಸ್ಥಾನವನ್ನು ಆಳಿದ ಮೂವರು ರಾಜರ ಹೆಸರನ್ನೇ ಹೊತ್ತಿರುವ ನಗರದ ಮೂರು ವಿದಾನಸಭಾ ಕ್ಷೇತ್ರಗಳ ಪೈಕಿ ನರಸಿಂಹರಾಜದ್ದು ಅಗ್ರಸ್ಥಾನ. ಸ್ವಾತಂತ್ರ್ಯಾನಂತರ 1952ರಲ್ಲಿ ನಡೆದ ಮೊದಲ ಚುನಾವಣೆ ಯಿಂದ ಮೈಸೂರು ನಗರ ಉತ್ತರ ಕ್ಷೇತ್ರಕ್ಕೆ ಸೇರಿದ್ದ ಈ ಭಾಗ 1967ರಲ್ಲಿ ಪ್ರತ್ಯೇಕಗೊಂಡು ನರಸಿಂಹರಾಜ ವಿಧಾನಸಭಾ ಕ್ಷೇತ್ರವಾಗಿ ಉದಯವಾಯಿತು.

ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ 1,27,720 ಮಹಿಳಾ ಮತದಾರರಿದ್ದಾರೆ. 1,25,331 ಪುರುಷ ಮತದಾರರಿದ್ದು, ಒಟ್ಟು 2,53,051 ಮತದಾರರಿದ್ದಾರೆ. ಮುಸ್ಲಿಮರ ಪ್ರಾಬಲ್ಯವುಳ್ಳ ಈ ಕ್ಷೇತ್ರದಲ್ಲಿ 1.15 ಲಕ್ಷ ಮಂದಿ ಮುಸ್ಲಿಂ ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಸಮುದಾ ಯದವರು ಎರಡನೇ ಸ್ಥಾನದಲ್ಲಿದ್ದು 25 ಸಾವಿರ ಮಂದಿ ಇದ್ದಾರೆ. ಉಳಿದಂತೆ ಒಕ್ಕಲಿಗರು 15 ಸಾವಿರ, ನಾಯಕರು 14 ಸಾವಿರ, ಲಿಂಗಾಯತರು 12 ಸಾವಿರ, ಕ್ರಿಶ್ಚಿಯನ್ನರು 12 ಸಾವಿರ, ಕುರುಬರು 9 ಸಾವಿರ, ಮರಾಠರು 9 ಸಾವಿರ, ಬ್ರಾಹ್ಮಣರು 5 ಸಾವಿರ ಹಾಗೂ ಇತರೆ ಸಣ್ಣ ಪುಟ್ಟ ಸಮುದಾಯದವರು 30 ಸಾವಿರ ಮಂದಿ ಇದ್ದಾರೆ.

ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟ

ಕ್ಷೇತ್ರ ಉದಯವಾದ ದಿನದಿಂದ ಇಲ್ಲಿಯವರೆಗೆ ಉಪ ಚುನಾವಣೆಯೂ ಸೇರಿ 12 ಚುನಾವಣೆಗಳು ನಡೆದಿದ್ದು 10 ಬಾರಿಯೂ ಒಂದೇ ಕುಟುಂಬ ಅಧಿಕಾರ ಅನುಭವಿಸಿದೆ. ಕಾಂಗ್ರೆಸ್‍ನಿಂದ ಮುಕ್ತರುನ್ನೀಸಾ ಬೇಗಂ ಹಾಗೂ ಬಿಜೆಪಿಯಿಂದ ಇ ಮಾರುತಿರಾವ್ ಪವಾರ್ ಬಿಟ್ಟರೆ ಈ ಕ್ಷೇತ್ರದಲ್ಲಿ ಬೇರೆ ಯಾರೂ ಆಯ್ಕೆಯಾಗಿಲ್ಲ.

ತಂದೆ-ಮಗನಿಗೆ ಗೆಲುವಿನ ಬುತ್ತಿ

ತಂದೆ-ಮಗನಿಗೆ ಗೆಲುವಿನ ಬುತ್ತಿ

ಅಜೀಜ್ ಸೇಠ್ 6 ಬಾರಿ ಆಯ್ಕೆಯಾಗಿದ್ದರೆ, ತನ್ವೀರ್ ಸೇಠ್ 4 ಬಾರಿ ಚುನಾಯಿತರಾಗಿದ್ದಾರೆ. ಅಜೀಜ್ ಸೇಠ್ ಅವರು 1984ರಲ್ಲಿ ಧಾರವಾಡ ದಕ್ಷಿಣದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆ ಅವರು ಸ್ಫರ್ಧಿಸಿರಲಿಲ್ಲ. ಆಗ ಮುಕ್ತರುನ್ನೀಸಾ ಬೇಗಂ ಆಯ್ಕೆಯಾಗಿದ್ದರು. 1994ರಲ್ಲಿ ಪಕ್ಷದ ವಿರುದ್ಧ ಎದ್ದಿದ್ದ ಅಲೆಯಲ್ಲಿ ಸೋಲು ತಪ್ಪಿಸಿಕೊಳ್ಳಲು ವಿಮಾನದ ಗುರುತಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿದರು. ಆದರೆ ಮಾರುತಿರಾವ್ ಪವಾರ್ ವಿರುದ್ಧ ಕೇವಲ 1451 ಮತಗಳ ಅಂತರದಲ್ಲಿ ಮೊದಲ ಸೋಲನುಭವಿಸಿದರು. 1999ರಲ್ಲಿ ಅಕಾಲಿಕ ಮರಣಕ್ಕೆ ತುತ್ತಾದರು.

ಉಪಚುನಾವಣೆಯಲ್ಲಿ ಗೆದ್ದ ತನ್ವೀರ್

ಉಪಚುನಾವಣೆಯಲ್ಲಿ ಗೆದ್ದ ತನ್ವೀರ್

ಆನಂತರ ನಡೆದ ಉಪಚುನಾ ವಣೆಯಲ್ಲಿ ಪುತ್ರ ತನ್ವೀರ್ ಸೇಠ್ ವಿಧಾನಸಭೆಗೆ ಚೊಚ್ಚಲ ಪ್ರವೇಶ ಮಾಡಿದರು. 2004, 2008, 2013ರ ಚುನಾವಣೆಯಲ್ಲಿ ಸತತವಾಗಿ ಜಯಗಳಿಸಿ ತಂದೆಯ ದಾಖಲೆಯನ್ನು ಸರಿಗಟ್ಟಿದರು. ಕಳೆದ ಚುನಾವಣೆಯಲ್ಲಿ ಎಸ್‍ಡಿಪಿಐ ಇಲ್ಲಿ ಸ್ಪರ್ಧೆ ನೀಡಿ ತನ್ವೀರ್ ಸೇಠ್ ಅವರಿಗೆ ನೇರ ಸ್ಪರ್ಧೆ ನೀಡಿತ್ತು. ಜಾ.ದಳದ ಸಂದೇಶ್ ಸ್ವಾಮಿ ಕೂಡ ತೀವ್ರ ಪೈಪೋಟಿ ನೀಡಿ 29 ಸಾವಿರಕ್ಕೂ ಹೆಚ್ಚು ಮತಗಳಿಸಿದ್ದರು. ಈ ಕ್ಷೇತ್ರದಲ್ಲಿ ಜಾ.ದಳ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿಗೆ ಸೇರ್ಪಡೆಯಾಘಿದ್ದು, ಟಿಕೇಟ್ ಸಿಕ್ಕರೆ ತನ್ವೀರ್ ಸೇಠ್ ವಿರುದ್ಧ ಸ್ಫರ್ಧೆ ಖಾತ್ರಿ.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಚುಕ್ಕಾಣಿ ಯಾರ ಕೈಗೆ..?ಮೈಸೂರಿನ ಕೃಷ್ಣರಾಜ ಕ್ಷೇತ್ರದ ಚುಕ್ಕಾಣಿ ಯಾರ ಕೈಗೆ..?

ಬಿಜೆಪಿಯಲ್ಲಿ ಟಿಕೇಟ್ ಗೆ ಪೈಪೋಟಿ

ಬಿಜೆಪಿಯಲ್ಲಿ ಟಿಕೇಟ್ ಗೆ ಪೈಪೋಟಿ

ಪ್ರಸ್ತುತ ಕಾಂಗ್ರೆಸ್, ಜಾ.ದಳ ಮತ್ತು ಎಸ್ ಡಿಪಿಐನಲ್ಲಿ ಅಭ್ಯರ್ಥಿಗಳ ಆಯ್ಕೆ ಸುಸೂತ್ರವಾಗಿದ್ದು, ಬಿಜೆಪಿಯಲ್ಲಿ ಗೊಂದಲ ಹಾಗೂ ಪೈಪೋಟಿ ಇದೆ. ಇತ್ತೀಚೆಗೆ ಬಿಜೆಪಿ ಸೇರಿದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಹಿರಿಯ ಸಹಕಾರಿ ಎಸ್.ಚಂದ್ರಶೇಖರ್, ನಗರಪಾಲಿಕೆ ಮಾಜಿ ಸದಸ್ಯ ಬಿ.ಎಂ.ನಟರಾಜ್, ಮಾಜಿ ಶಾಸಕ ಮಾರುತಿರಾವ್ ಪವಾರ್, ಸಂದೇಶಸ್ವಾಮಿ ಅವರ ನಡುವೆ ಪೈಪೋಟಿ ಇದೆ. ಈ ಮಧ್ಯೆ ಆರ್.ರಘು ಕೌಟಿಲ್ಯ, ವಿ.ಗಿರಿಧರ್ ಅವರೂ ಆಕಾಂಕ್ಷಿಗಳಾಗಿದ್ದಾರೆ.

ಜೆಡಿ ಎಸ್ ಟಿಕೇಟ್ ಯಾರಿಗೆ?

ಜೆಡಿ ಎಸ್ ಟಿಕೇಟ್ ಯಾರಿಗೆ?

ಜಾ.ದಳದಿಂದ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಅವರನ್ನು ಕೈಬಿಟ್ಟು ಅಬ್ದುಲ್ ಅಜೀಜ್ (ಅಬ್ದುಲ್ಲಾ) ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇವರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಎಸ್‍ಡಿಪಿಐನಿಂದ ಅಬ್ದುಲ್ ಮಜೀದ್ ಅವರು ಅಭ್ಯರ್ಥಿಯಾಗಿದ್ದಾರೆ. ಈ ಎಲ್ಲಾ ಚುನಾವಣಾ ಬೆಳವಣಿಗೆ ಗಮನಿಸಿದರೆ ಇದೇ ಮೈಸೂರು ಇತಿಹಾಸದಲ್ಲಿಯೇ ತಂದೆ - ಮಗ 11 ಬಾರಿ ಗೆದ್ದ ಕೈಕ ಕ್ಷೇತ್ರವೆಂದರೇ ನರಸಿಂಹರಾಜ ಎಂಬ ಖ್ಯಾತಿಯಿದೆ. ಈ ಬಾರಿ ಮತದಾರ ಪ್ರಭು ಯಾರಿಗೆ ಜೈ ಎನ್ನಲಿದ್ದಾನೆ ಎಂಬುದು ಮಾತ್ರ ಯಕ್ಷ ಪ್ರಶ್ನೆ.

English summary
Karnataka assembly elections 2018: Narasimharaja constituency of Mysuru is one of the important assembly constituencies of Karnataka. Here is the list of history and importance of this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X