ಹಿಜಾಬ್ ಕಡ್ಡಾಯಗೊಳಿಸುವುದು ಬೇಡ, ಮಹಿಳೆಯರ ಆಯ್ಕೆಗೆ ಬಿಡಿ- ಎಜಿ ನಾವದಗಿ
ಬೆಂಗಳೂರು, ಫೆಬ್ರವರಿ 22: ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ 9ನೇ ದಿನದ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಹಿಜಾಬ್ ಪರ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕೋರ್ಟ್‌ನಲ್ಲಿ ಆರಂಭಗೊಂಡಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠದಲ್ಲಿ ಒಂದು ವಾರದಿಂದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ತ್ರಿ ಸದಸ್ಯ ಪೀಠದಲ್ಲಿದ್ದಾರೆ. ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ತಮ್ಮ ವಾದ ಮಂಡಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಎಜಿ ನಾವದಗಿ ಸುಧೀರ್ಘವಾದ ಮಂಡನೆ ಮಾಡಿದರು. ಈ ವೇಳೆ ಶಬರಿಮಲೆ ತೀರ್ಪಿನ್ನು ಪ್ರಸ್ತಾಪಿಸಲಾಯಿತು.
ಶಬರಿಮಲೆ ತೀರ್ಪಿನ ನಂತರ ಹಿಜಾಬ್ ಒಪ್ಪಲು ಸಾಧ್ಯವೇ? ಮಹಿಳೆಯರು ಸ್ವ ಇಚ್ಛೆಯಿಂದ ಹಿಜಾಬ್ ಹಾಕಲು ಬಯಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ. ಆದರೆ ಇವರು ಕೋರ್ಟ್‌ನಿಂದಲೇ ಅದನ್ನು ಕಡ್ಡಾಯ ಮಾಡಬೇಕೆಂದು ಬಯಸುತ್ತಿದ್ದಾರೆ. ಕೋರ್ಟ್ ಇದನ್ನು ಒಪ್ಪಿದರೆ ಅಥವಾ ಕಡ್ಡಾಯಗೊಳಿಸಿದರೆ ಅದು ಹಿಜಾಬ್ ಹಾಕಲು ಬಯಸದ ಮಹಿಳೆಯರಿಗೆ ತೊಂದರೆಯಾಗಬಹುದು. ಹೀಗಾಗಿ ಕೋರ್ಟ್ ಹಿಜಾಬ್ ಕಡ್ಡಾಯವೆಂದು ಘೋಷಿಸಬಾರದು ಎಂದು ಎಜಿ ನಾವದಗಿ ವಾದವಾಗಿದೆ.
ಹಿಜಾಬ್ ಅರ್ಜಿ; ಹಿಜಾಬ್ ಧರಿಸುವುದು ಕಡ್ಡಾಯ, ಆಯ್ಕೆ ಸುಧೀರ್ಘ ವಾದ
ಮಹಿಳೆಯರಿಗೆ ಇಚ್ಛೆಯಿಂದ ಉಡುಪು ಧರಿಸುವ ಸ್ವಾತಂತ್ರ್ಯವಿದೆ. ಆದರಿಲ್ಲಿ ಹಿಜಾಬ್ ಕಡ್ಡಾಯ ಮಾಡಲು ಹೊರಟಿದ್ದಾರೆ. ಆದ್ದರಿಂದ ಯಾವ ಉಡುಪು ಧರಿಸಬೇಕು ಎನ್ನುವುದು ಮಹಿಳೆಯರ ವಿವೇಚನೆಗೆ ಬಿಟ್ಟಿದ್ದು ಎಂದು ಎಜಿ ನಾವದಗಿ ವಾದಿಸುತ್ತಿದ್ದಾರೆ.

ಶಬರಿಮಲೆಗೆ ಮಹಿಳೆಯರು ಪ್ರವೇಶಿಸದ ಬಗ್ಗೆ ವಾದವಿತ್ತು. ಆದರೆ ಈಗ ಶಬರಿಮಲೆಗೆ ಮಹಿಳೆಯರು ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ತಾಳಿ ಅನ್ನೋದು ಹಿಂದೂ ಧರ್ಮದ ಅತ್ಯಗತ್ಯ ಅಂಶ ಎಂದು ಪರಿಗಣಿಸಬಹುದು. ಆದರೆ ಅದನ್ನು ಹಾಕದೇ ಹೋದರೆ ಅದನ್ನು ಧರ್ಮದ ಉಗಲ್ಲಂಘನೆ ಎಂದು ಪರಿಗಣಿಸಬಹುದಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ.
ಹಿಜಾಬ್ ಇಸ್ಲಾಂ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದಕ್ಕೆ ಪುರಾವೆ ಇಲ್ಲ: ಅಡ್ವೊಕೇಟ್ ಜನರಲ್
ಮಹಿಳೆಯರು ಇಚ್ಛೆ ಬಂದ ಉಡುಪು ಧರಿಸಬಹುದು. ಹಿಜಾಬ್ ಅನ್ನು ಧರಿಸಲೇಬೇಕು ಎಂದು ಕಡ್ಡಾಯ ಮಾಡಬಾರದು. ಅದನ್ನು ಮಹಿಳೆಯರ ಆಯ್ಕೆಗೆ ಬಿಡಬೇಕು. ಮಹಿಳೆಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಾಗಬಾರದು, ನಾವು ಧರ್ಮವನ್ನೂ ಕಡೆಗಣಿಸುತ್ತಿಲ್ಲ. ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ ಎಂದು ಎಜಿ ನಾವದಗಿ ವಾದಿಸುತ್ತಿದ್ದಾರೆ.
ಬಳಿಕ ಉಡುಪಿ ಪಿಯು ಕಾಲೇಜು ಶಿಕ್ಷಕರ ಪರ ಹಿರಿಯ ವಕೀಲರಾದ ಆರ್, ವೆಂಕಟರಮಣಿ ಅವರು, ಯಾವುದೇ ಧರ್ಮ ದೊಡ್ಡದು ಯಾವುದೇ ಧರ್ಮ ಚಿಕ್ಕದು ಅಲ್ಲ. ಮಕ್ಕಳಿಗೆ ಸ್ವತಂತ್ರ್ಯ ಪ್ರಜ್ಞೆ ಇರಬೇಕು ಎಂದು ಬಯಸುತ್ತೇನೆ. ಸಾರ್ವಜನಿಕ ಸ್ಥಳಕಿಂತ ಶಾಲಾ ಕೊಠಡಿಗೆ ಪ್ರಾಮುಖ್ಯತೆ ಇದೆ. ಎಲ್ಲಾ ಮಕ್ಕಳ ಮನಸ್ಸು ಶಿಕ್ಷಣಕ್ಕಾಗಿ ಒಂದಾಗಿರಬೇಕು. ಯಾವುದು ಧರ್ಮ ದೊಡ್ಡದು ಚಿಕ್ಕದು ಭಾವನೆ ಇರಬಾರದು. ಒಂದೇ ಮನಸ್ಸಿನಿಂದ ಶಿಕ್ಷಣ ಪಡೆಯಬೇಕು ಎಂದು ಆರ್, ವೆಂಕಟರಮಣಿ ಅವರು ವಾದ ಮಂಡಿಸುತ್ತಿದ್ದಾರೆ.
ಯಾವುದೇ ಆಚರಣೆಗಳಿರಬಹುದು, ಯಾವುದೇ ನಂಬಿಕೆಗಳಿರಬಹುದು ನೈತಿಕತೆಗೆ ವಿರುದ್ಧವಾಗಿದ್ದರೆ ಸುವ್ಯವಸ್ಥೆ, ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ ಎಂದು ವಾದಿಸಿದರು. ಖುರಾನ್ ಬಗ್ಗೆ ನನ್ನ ತಕರಾರು ಇಲ್ಲ. ಖುರಾನ್ ಅಂಶ ಅನುಸರಿಸಲು ಜನ ಸ್ವತಂತ್ರ್ಯರಾಗಿದ್ದಾರೆ. ಆದರೆ ಶಾಲೆಯಲ್ಲಿ ಧರ್ಮದ ಆಚರಣೆಗೆ ಯಾವುದೇ ಅವಕಾಶವಿಲ್ಲ. ಎಲ್ಲಾ ಮಕ್ಕಳ ಮನಸ್ಸು ಒಂದಾಗಿರಬೇಕು ಎಂದರು.












Click it and Unblock the Notifications