ಬಸ್ ಪ್ರಯಾಣಿಕರಿಗೆ ಬ್ಯೂಟಿಫುಲ್ ಸುದ್ದಿ, ಉಜ್ಜಯಿನಿಗೆ ಹೊಸ ಬಸ್ ವ್ಯವಸ್ಥೆ!
ಕನ್ನಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಪರ ಎಂಬುದನ್ನ ಪದೇ ಪದೇ ಜಗತ್ತಿಗೆ ತಿಳಿಸುತ್ತದೆ. ಅದರಲ್ಲೂ ಕರ್ನಾಟಕದ ಸಾರಿಗೆ ವ್ಯವಸ್ಥೆ ಇಡೀ ಜಗತ್ತಿಗೆ ಈಗ ಮಾದರಿ ಎನ್ನಬಹುದು. ಯಾಕಂದ್ರೆ ಸರ್ಕಾರಿ ಸಾರಿಗೆಗೆ ಬೀಗ ಹಾಕಬೇಕು ಎಂಬ ಪರಿಸ್ಥಿತಿ, ಈಗ ನಿರ್ಮಾಣ ಆಗಿದ್ದರೂ ಕರ್ನಾಟಕ ಮಾತ್ರ ಸರ್ಕಾರಿ ಸಾರಿಗೆ ಅಭಿವೃದ್ಧಿಗೆ ಗಮನವನ್ನು ನೀಡುತ್ತಿದೆ.
ಹೌದು ಸಂಘ ಸಂಸ್ಥೆಗಳ ಭಕ್ತರ ಬಹುದಿನಗಳ ಬೇಡಿಕೆಗೆ ಅನುಸಾರವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದಿಂದ ಬರುವ ಶುಕ್ರವಾರ ಮಹಾಶಿವರಾತ್ರಿ ದಿನದಿಂದ ಪ್ರತಿದಿನ ವಿಜಯನಗರ ಜಿಲ್ಲೆ ಪಂಚಪೀಠದ ಉಜ್ಜಯಿನಿ ಶ್ರೀ ಕ್ಷೇತ್ರಕ್ಕೆ ಸರ್ಕಾರಿ ಬಸ್ ಸೇವೆಯನ್ನ ಇದೀಗ ಪ್ರಾರಂಭಿಸಲಾಗುತ್ತಿದೆ ಎಂದು, ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡರ ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀವು ತಿಳಿಯಲು ಮುಂದೆ ಓದಿ.

ಶೀಘ್ರ ಬಸ್ ಸೇವೆ ಶುರು!
ಅಷ್ಟಕ್ಕೂ ಈ ಬಗ್ಗೆ ಈಗ ಮಾಹಿತಿ ನೀಡಿರುವ ಸಾರಿಗೆ ಅಧಿಕಾರಿಗಳು, ಉಜ್ಜಯಿನಿ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳ. ಪಂಚಪೀಠದ ನೆಲೆಯಾಗಿದ್ದು ಧಾರವಾಡದಿಂದ ಬಸ್ ಸೇವೆ ಪ್ರಾರಂಭಿಸಬೇಕು ಎಂಬುದು ಜನರ ಬಹು ದಿನದ ಬೇಡಿಕೆ ಆಗಿತ್ತು. ಧಾರವಾಡ ವೀರಶೈವ ಜಂಗಮ ಸಂಸ್ಥೆ ಮನವಿ ಸಲ್ಲಿಸಿ, ಶ್ರೀ ಕ್ಷೇತ್ರಕ್ಕೆ ಶೀಘ್ರ ಬಸ್ ಸೇವೆ ಪ್ರಾರಂಭಿಸೋಕೆ ವಿನಂತಿಸಿತ್ತು. ಅದರಂತೆ ಪರಿಶೀಲನೆ ಮಾಡಿ ಈಗ ಕ್ರಮ ಕೈಗೊಂಡಿದ್ದು, ಧಾರವಾಡದಿಂದ ಉಜ್ಜಯಿನಿಗೆ ಬಸ್ ಸೇವೆ ಪ್ರಾರಂಭ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಭಕ್ತರಿಗೆ ಸಿಗಲಿದೆ ಸಕಲ ವ್ಯವಸ್ಥೆ
ಮಾರ್ಚ್ 8 ರಿಂದ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಉಜ್ಜಯಿನಿಗೆ ಬಸ್ ಸಂಚಾರ ಶುರು ಆಗಲಿದೆ. ಪ್ರತಿದಿನ ಬೆಳಗ್ಗೆ 7.15 ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 12.30 ಕ್ಕೆಲ್ಲಾ, ಬಸ್ ಉಜ್ಜಯಿನಿ ತಲುಪಲಿದೆ. ಭಕ್ತರಿಗೆ ದೇವರ ಪೂಜೆ, ದರ್ಶನ ಮತ್ತು ಪ್ರಸಾದಕ್ಕೆ ಅನುಕೂಲ ಆಗುವಂತೆ ಬಸ್ ನಿಲುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಈ ಮೂಲಕ ಭಕ್ತರಿಗೆ ಬೇಕಿರುವ ಎಲ್ಲಾ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಬಸ್ ಮಾರ್ಗದ ಬಗ್ಗೆ ಮಾಹಿತಿ
ನಂತರ ಮಧ್ಯಾಹ್ನ 2 ಗಂಟೆಗೆ ಉಜ್ಜಯಿನಿಯಿಂದ ಹೊರಟು ಸಂಜೆ 6.30 ಗಂಟೆಗೆ ಮರಳಿ ಬಸ್ ಧಾರವಾಡಕ್ಕೆ ತಲುಪಲಿದೆ. ಪ್ರತಿ ದಿನ ಬೆಳಗ್ಗೆ ಧಾರವಾಡದಿಂದ ಹೊರಟು ಹುಬ್ಬಳ್ಳಿ, ಗದಗ, ಮುಂಡರಗಿ ಹಡಗಲಿ ಮಾರ್ಗವಾಗಿ ಉಜ್ಜಯಿನಿ ತಲುಪುತ್ತದೆ. ಮರಳಿ ಈ ಮಾರ್ಗದಲ್ಲಿ ಬಂದು ಧಾರವಾಡ ತಲುಪುತ್ತದೆ. ಈ ಭಾಗದ ಭಕ್ತರು ಮತ್ತು ಸಾರ್ವಜನಿಕರು ಈ ಬಸ್ ಸೇವೆಯನ್ನ ಈಗ ಸದುಪಯೋಗ ಮಾಡಿಕೊಳ್ಳಿ ಎಂದು ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಅವರಾದ ಶಶಿಧರ ಚನ್ನಪ್ಪಗೌಡರ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಹೇಳುವುದಾರೆ ಈ ಮೂಲಕ ಭಕ್ತರ ಬಹು ದಿನಗಳ ಕನಸು ಇದೀಗ ಈಡೇರುತ್ತಿದ್ದು, ಭಕ್ತರಿಗೆ ಬೇಕಾಗಿರುವ ಎಲ್ಲಾ ರೀತಿ ವ್ಯವಸ್ಥೆ ಮಾಡಲು ಈಗ ಸಾರಿಗೆ ಇಲಾಖೆ ಮುಂದಾಗಿದೆ. ಈ ಮಾಹಿತಿಯಿಂದ ಭಕ್ತರು ಕೂಡ ಫುಲ್ ಖುಷ್ ಆಗಿದ್ದು, ಬರುವ ದಿನಗಳಲ್ಲಿ ವ್ಯವಸ್ಥೆಯು ಆಗಲಿದೆ.












Click it and Unblock the Notifications