ಪ್ರಮಾಣ ವಚನ ಸ್ವೀಕರಿಸಿದ ಜಿಲ್ಲಾವಾರು ಸಚಿವರುಗಳ ಪಟ್ಟಿ
ಬೆಂಗಳೂರು, ಜೂನ್ 6: ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಕೊನೆಗೂ ನಡೆದಿದೆ. ಕೆಪಿಜೆಪಿಯ ಶಂಕರ್ ಸೇರಿ ಕಾಂಗ್ರೆಸಿನಿಂದ 15 ಹಾಗೂ ಬಿಎಸ್ಪಿಯ ಎನ್. ಮಹೇಶ್ ಸೇರಿ ಜೆಡಿಎಸ್ ನಿಂದ 10 ಜನರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದರಲ್ಲಿ ಜಿಲ್ಲಾವಾರು ಸಂಪುಟ ಸೇರಿರುವವರು ಯಾರು? ಯಾವ ಯಾವ ಜಿಲ್ಲೆಗೆ ಎಷ್ಟೆಲ್ಲಾ ಸಚಿವ ಸ್ಥಾನ ಸಿಕ್ಕಿದೆ ಎಂಬ ಮಾಹಿತಿಗಳು ಇಲ್ಲಿವೆ.

ಎಸ್.ಡಿ. ಕುಮಾರಸ್ವಾಮಿಯವರ ಸಂಪುಟದಲ್ಲಿ ಬರೋಬ್ಬರಿ 14 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಧಾರವಾಡ, ಬಾಗಲಕೋಟೆ, ಕೊಪ್ಪಳ, ಗದಗ, ಶಿವಮೊಗ್ಗ, ದಾವಣಗೆರೆ, ಯಾದಗಿರಿ, ಚಿಕ್ಕಮಗಳೂರು, ಉಡುಪಿ, ಕೋಲಾರ, ಬಳ್ಳಾರಿ ಜಿಲ್ಲೆಯಿಂದ ಯಾರನ್ನೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.
| ಜಿಲ್ಲೆ | ಸಚಿವರು |
| ಧಾರವಾಡ | ಇಲ್ಲ |
| ಬಾಗಲಕೋಟೆ | ಇಲ್ಲ |
| ವಿಜಯಪುರ | ಎಂ.ಸಿ. ಮುನವಳ್ಳಿ, ಶಿವಾನಂದ ಪಾಟೀಲ್ |
| ಕೊಪ್ಪಳ | ಇಲ್ಲ |
| ಬೆಳಗಾವಿ | ರಮೇಶ್ ಜಾರಕಿಹೊಳಿ |
| ಗದಗ | ಇಲ್ಲ |
| ಶಿವಮೊಗ್ಗ | ಇಲ್ಲ |
| ಹಾವೇರಿ | ಆರ್. ಶಂಕರ್ |
| ದಾವಣಗೆರೆ | ಇಲ್ಲ |
| ಯಾದಗಿರಿ | ಇಲ್ಲ |
| ಚಿಕ್ಕಮಗಳೂರು | ಇಲ್ಲ |
| ಉತ್ತರ ಕನ್ನಡ | ಆರ್.ವಿ ದೇಶಪಾಂಡೆ |
| ಉಡುಪಿ | ಇಲ್ಲ |
| ದಕ್ಷಿಣ ಕನ್ನಡ | ಯು.ಟಿ. ಖಾದರ್ |
| ತುಮಕೂರು | ಡಾ. ಜಿ. ಪರಮೇಶ್ವರ್, ವೆಂಕಟರಮಣಪ್ಪ, ಎಸ್.ಆರ್. ಶ್ರೀನಿವಾಸ್ (ವಾಸು) |
| ಹಾಸನ | ಎಚ್.ಡಿ. ರೇವಣ್ಣ |
| ಚಾಮರಾಜನಗರ | ಎನ್. ಮಹೇಶ್, ಪುಟ್ಟರಂಗಶೆಟ್ಟಿ |
| ಮೈಸೂರು | ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ |
| ಮಂಡ್ಯ | ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು |
| ಬೆಂಗಳೂರು ನಗರ | ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್ |
| ಚಿಕ್ಕಬಳ್ಳಾಪುರ | ಶಿವಶಂಕರ ರೆಡ್ಡಿ |
| ಕೋಲಾರ | ಇಲ್ಲ |
| ರಾಯಚೂರು | ವೆಂಕಟರಾವ್ ನಾಡಗೌಡ |
| ಬಳ್ಳಾರಿ | ಇಲ್ಲ |
| ಚಿತ್ರದುರ್ಗ | ಇಲ್ಲ |
| ರಾಮನಗರ | ಎಚ್.ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ |
| ಕೊಡಗು | ಇಲ್ಲ |
| ಬೀದರ್ | ಬಂಡೆಪ್ಪ ಖಾಶೆಂಪುರ್, ರಾಜಶೇಖರ್ ಪಾಟೀಲ್ |
| ಬೆಂಗಳೂರು ಗ್ರಾಮಾಂತರ | ಇಲ್ಲ |
| ಕಲಬುರಗಿ | ಪ್ರಿಯಾಂಕ್ ಖರ್ಗೆ |
| ವಿಧಾನಪರಿಷತ್ | ಜಯಮಾಲಾ |












Click it and Unblock the Notifications