ಉತ್ತರ ಕರ್ನಾಟಕದ ರೈಲು ಯೋಜನೆಗಳಿಗೆ ವೇಗ, ಹುಬ್ಬಳ್ಳಿಯಲ್ಲಿ 'ಮೆಗಾ ಟರ್ಮಿನಲ್' ನಿರ್ಮಾಣ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ನೈಋತ್ಯ ರೈಲ್ವೆ ಜಾಲ (SWR) ಕರ್ನಾಟಕದಲ್ಲಿ ಹೊಸ ಯೋಜನೆಗಳು, ರೈಲ್ವೆ ಡಬ್ಲಿಂಗ್ ಕಾರ್ಯಗಳು ಪ್ರಗತಿಯಲ್ಲಿವೆ. ಭವಿಷ್ಯದ ದೃಷ್ಟಿಯಿಂದ ಉತ್ತರ ಕರ್ನಾಟಕ ಹಲವೆಡೆ ಹಾಲಿ ಹಾಗೂ ಹೊಸ ವಿವಿಧ ಯೋಜನೆಗಳಿಗೆ ವೇಗ ನೀಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಉದ್ದೇಶಿತ ರೈಲ್ವೆ 'ಮೆಗಾ ಟರ್ಮಿನಲ್' ನಿರ್ಮಾಣಕ್ಕೆ ಸ್ಥಳದ ಆಯ್ಕೆ ಹಾಗೂ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಈ ಭಾಗದ ಪ್ರಮುಖ ಯೋಜನೆಗಳು ಇನ್ನೇನು ಅನುಷ್ಠಾನಗೊಳ್ಳಲಿವೆ. ಈ ಬಗ್ಗೆ ಶೀಘ್ರವೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಪ್ಡೇಟ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ರೈಲ್ವೆಯ 'ಮೆಗಾ ಟರ್ಮಿನಲ್' ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಗತ್ಯವಾದ ಸ್ಥಳ ಹುಡುಕಾಟ ನಡೆಸಲಾಗುತ್ತಿದೆ. ಅಲ್ಲದೇ ಆಯ್ಕೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕೈಗೊಳ್ಳುವ ಕ್ರಮಗಳು ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

ಹುಬ್ಬಳ್ಳಿ-ಅಂಕೋಲಾ ಹೊಸ ರೈಲು ಮಾರ್ಗ
ರಾಜ್ಯದ ಪ್ರಮುಖ ರೈಲು ಮಾರ್ಗಗಳ ಯೋಜನೆಗಳು ಕೇಂದ್ರ ಸಚಿವ ಸಭೆಯ ಮುಖ್ಯ ವಿಷಯವಾಗಿದ್ದವು. ಕರಾವಳಿ ಹಾಗೂ ಉತ್ತರ ಕರ್ನಾಟಕದ ರೈಲು ಮಾರ್ಗವಾದ ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಲೈನ್, 'ಅಮೃತ್ ಭಾರತ್' ನಿಲ್ದಾಣಗಳ ಅಭಿವೃದ್ಧಿ ಕಾಗಮಾರಿಗೆ ವೇಗ ನೀಡುವಂತೆ ತಿಳಿಸಿದರು. ಇತ್ತ ದಕ್ಷಿಣ ದಿಂದ ಉತ್ತರ ಕರ್ನಾಟಕದ ಸಂಚಾರ ಮಾರ್ಗ ಸುಧಾರಿಸುವ, ಸಮಯ ಉಳಿಸುವ ಪ್ರಮುಖ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ (SWR) ರೈಲ್ವೆ ಜನರಲ್ ಮ್ಯಾನೇಜರ್. ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಹಿರಿಯ ಅಧಿಕಾರಿಗಳ ಜೊತೆ ನಮ್ಮ ಭಾಗದ ರೇಲ್ವೆ ಅಭಿವೃದ್ಧಿ ಕಾರ್ಯ ಕುರಿತು ಹಾಗೂ ವಿವಿಧ ಕಾಮಗಾರಿಗಳ ಪರಿಶೀಲನಾ ಸಭೆಯನ್ನು ನಡೆಸಿದೆನು.
— Pralhad Joshi (@JoshiPralhad) January 3, 2026
ಸಭೆಯಲ್ಲಿ ಪ್ರಮುಖವಾಗಿ
ಹುಬ್ಬಳ್ಳಿಯಲ್ಲಿ ಉದ್ದೇಶಿತ 'ಮೆಗಾ ಟರ್ಮಿನಲ್' ನಿರ್ಮಾಣಕ್ಕೆ… pic.twitter.com/PWqHexg4O5
ಗೋವಾ, ಮುಂಬೈ ಬಂದರು ತಲುಪುವ ರೈಲು ಮಾರ್ಗ
ಇನ್ನೂ 142 ಕಿಲೋ ಮೀಟರ್ ಉದ್ದದ ಬಾಗಲಕೋಟೆ-ಕುಡಚಿ ಹೊಸ ರೈಲು ಮಾರ್ಗ ನಿರ್ಮಾಣದ ಕೆಲಸ ಈವರೆಗೆ ಆಗಿದ್ದೆಷ್ಟು, ಬಾಕಿ ಉಳಿದ ಕಾಮಗಾರಿಯ ಅಪ್ಡೇಟ್ ಪಡೆದರು. ಈ ಮಾರ್ಗವು ಬಾಗಲಕೋಟೆ, ಮುಧೋಳ, ಜಮಖಂಡಿ ಮಾರ್ಗವಾಗಿ ಸಾಗಿ ಮುಂಬೈ ಹಾಗೂ ಗೋವಾ ಬಂದರುಗಳಿಗೆ ಸಂಪರ್ಕ ಸಾಧಿಸುವ ಕಾರಣಕ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ರೈಲ್ವೆ ಬೈಪಾಸ್ ಲೈನ್ ಕಾಮಗಾರಿ
ಹುಬ್ಬಳ್ಳಿ ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕುಸುಗಲ್-ಅಮರಗೋಳ ರೈಲ್ವೆ ಬೈಪಾಸ್ ಲೈನ್ ಸ್ಥಾಪಿಸಲಾಗುತ್ತಿದೆ. ಇಲ್ಲಿ ಸರ್ವಿಸ್ ರಸ್ತೆಯದ್ದು ಸಮಸ್ಯೆ ಉಂಟಾಗಿದೆ. ಈ ಬೈಪಾಸ್ ನಿರ್ಮಾಣವಾದರೆ ಗೂಡ್ಸ್ ರೈಲುಗಳ ಸುಗಮ ಸಂಚಾರ ಸಾಧ್ಯವಾಗುತ್ತದೆ. ನಗರದಿಂದ ಹೊರ ಹೋಗುವ ವಾಹನಗಳಿಗೆ ಅನುಕೂಲವಾಗುತ್ತದೆ.
ಹೊಸ ಪ್ಯಾಸೆಂಜರ್ ರೈಲು ಆರಂಭ ಶೀಘ್ರ
ಶಿಶುವಿನಹಳ್ಳಿ - ಅಣ್ಣಿಗೇರಿ - ಹುಲಕೋಟಿ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ಧಾರವಾಡ-ಗದಗ ನಡುವೆ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದೆ. ಈ ಸಂಬಂಧ ಅಗತ್ಯ ಅನುಮೋದನೆ ತರುವುದಾಗಿ ಹೇಳಿದರು.
ಅಮರಗೋಳ ಸಮೀಪದ ಸೇತುವೆ ಸಂಖ್ಯೆ 289 ರಿಂದ 291 ರವರೆಗೆ ರೈತರು ತಮ್ಮ ಜಮೀನುಗಳನ್ನು ತಲುಪಲು ಸರ್ವಿಸ್ ರಸ್ತೆ ಒದಗಿಸುವುದು ಮತ್ತು ಭೂಸ್ವಾಧೀನದ ಸ್ಥಿತಿಗತಿ ಹಾಗೂ ಧಾರವಾಡದ ಗಾಂಧಿನಗರದಲ್ಲಿ ಪಾದಚಾರಿಗಳಿಗಾಗಿ ಕೆಳಸೇತುವೆ (RUB) ನಿರ್ಮಾಣ ಮಾಡಬೇಕಿದೆ. ಶೀಘ್ರವೇ ಅಗತ್ಯ ಭೂಮಿ ಪಡೆದು ಮುಂದುವರಿಯುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಸುಗಮ ಸಂಚಾರ, ಪ್ರಮಾಣಿಕರಿಗೆ ಅಡಚಣೆ ಮುಕ್ತ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಹಾಲಿ ಹಾಗೂ ಹೊಸ ಯೋಜನೆಗಳಿಗೆ ವೇಗ ನೀಡುವ ಕೆಲಸ ಮಾಡಲಾಗುತ್ತಿದೆ.












Click it and Unblock the Notifications