ಜನವರಿ 12ರಿಂದ ನಿಮಗೊಂದು, ನಿಮ್ಮಿಂದೆ ಕುಳಿತವರಿಗೊಂದು

Subscribe to Oneindia Kannada

ಬೆಂಗಳೂರು, ಜನವರಿ, 08: ಇನ್ನು ಹೆಲ್ಮೆಟ್ ಖರೀದಿ ಮಾಡಿಲ್ಲವೇ? ನಿಮಗೆ ಇರುವುದು ಎರಡೇ ದಿನ. ಜನವರಿ 12 ರಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ನೀವು ಈ ಕೂಡಲೇ ಹೆಲ್ಮೆಟ್ ಖರೀದಿಸಿಕೊಂಡರೆ ಒಳಿತು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದು ಆಗಿದೆ. ನಾಗರಿಕರು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದೂ ಆಗಿದೆ.[ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]

ramalinga reddy

ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾಜ್ಯದಲ್ಲಿ ದ್ವಿಚಕ್ರ ವಾಹನದ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆಯೇ ಹೊರತು ಬಿಜೆಪಿಗರು ಆರೋಪಿಸುವಂತೆ ಯಾವುದೇ ಹೆಲ್ಮೆಟ್ ಲಾಬಿಗಲ್ಲ. ಅಂತಹ ಲಾಬಿ ನಡೆದಿದ್ದರೆ ಅದು ದೆಹಲಿಯಲ್ಲಿರಬೇಕು ಎಂದು ಸಾರಿಗೆ ಸಚಿವ ಬಿ.ರಾಮಲಿಂಗಾರೆಡ್ಡಿ ಬಿಜೆಪಿಯವರ ಟೀಕೆಗೆ ಉತ್ತರ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒರಿಸ್ಸಾ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಯೋಜನೆ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಮಾಡದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.[ಹೆಲ್ಮೆಟ್ ಕಡ್ಡಾಯ: ಕಳ್ಳರಿಗೆ ಕೀಲಿಕೈ ಕೊಟ್ಟಂತೆ]

ಮೊದಲ ಸಾರಿ 100 ರು. ದಂಡ
ಅಧಿಸೂಚನೆ ಹೊರಡಿಸಿದ 15 ದಿನಗಳೊಳಗೆ ಕಾನೂನು ಪಾಲನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಸರ್ಕಾರದ ಗಡುವು ಮುಗಿದ ಬಳಿಕವೂ ವಾಹನ ಸವಾರ ಮತ್ತು ಹಿಂಬದಿ ಸವಾರ ನಿಯಮ ಉಲ್ಲಂಘಿಸಿದರೆ ಮೊದಲ ಬಾರಿಗೆ ರು.100, ಎರಡನೇ ಬಾರಿಗೆ ರು.200 ಹಾಗೂ ಮೂರನೇ ಬಾರಿಗೆ ರು.300 ದಂಡ ವಿಧಿಸಲಾಗುವುದು. ನಂತರ ಚಾಲನಾ ಪರವಾನಗಿ ರದ್ದುಪಡಿಸಲಾಗುತ್ತದೆ. ಹಿಂಬದಿ ಸವಾರ ಹೆಲ್ಮೆಟ್ ಹಾಕಲಿಲ್ಲ ಅಂದರೆ ವಾಹನ ಸವಾರನಿಗೆ ದಂಡ ಬೀಳಲಿದೆ ಎಂದು ಸಚಿವರು ತಿಳಿಸಿದರು.

ಟ್ಯಾಕ್ಸಿ ಸೇವೆಗಳ ಮೇಲೆ ನಿಯಮಾವಳಿ
ಓಲಾ, ಟ್ಯಾಕ್ಸಿ ಫಾರ್‌ ಶೂರ್‌ ಸೇರಿದಂತೆ ಮೊಬೈಲ್‌ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳು ವಿಧಿಸುತ್ತಿರುವ ಬೇಕಾಬಿಟ್ಟಿ ದರಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ತರಲಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

‘ಸರ್ಕಾರದ ನಿಯಮಗಳ ಪ್ರಕಾರ ಸಿಟಿ ಟ್ಯಾಕ್ಸಿಗಳು ಬೆಂಗಳೂರು ನಗರದಲ್ಲಿ ಕಿಲೋಮೀಟರ್‌ಗೆ 19.5 ರು. (ಹವಾನಿಯಂತ್ರಿತ) ಮತ್ತು 14.5 ರು. (ಸಾಮಾನ್ಯ) ವಸೂಲಿ ಮಾಡಬೇಕು. ಎಲ್ಲ ಟ್ಯಾಕ್ಸಿಗಳು ನೋಂದಣಿಯಾಗಿಲ್ಲ. ಈ ಬಗ್ಗೆಯೂ ಸಾರಿಗೆ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka: Karnataka's transport minister Ramalinga Reddy declared that helmets will be compulsory for pillion riders as well in the state from January 12. According to him, people of all age groups fall under this new rule. Anyone who violates this new rule will have to pay Rs 100 as fine the first time. The second time they flout the rule, the fine will be Rs 200 and the third timed Rs 300.
Please Wait while comments are loading...