Karnataka Rain: ಉತ್ತರ, ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ, 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್- ಬೆಂಗಳೂರಿನ ಕತೆ ಏನು?
ಬೆಂಗಳೂರು, ಸೆಪ್ಟೆಂಬರ್ 23: ಉತ್ತರ ಕರ್ನಾಟಕ ಭಾಗದಲ್ಲಿ ಶನಿವಾರ ಮತ್ತು ಭಾನುವಾರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ತೀವ್ರ ಬರದಿಂದ ತತ್ತರಿಸಿರುವ ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ಒಣಭೂಮಿ ಎಂದು ಪರಿಗಣಿಸಲಾಗಿರುವ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಶನಿವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮಧ್ಯ ಕರ್ನಾಟಕ ಜಿಲ್ಲೆ ಚಿತ್ರದುರ್ಗ, ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಕೊಡಗು, ತುಮಕೂರಿನಲ್ಲೂ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.

ಸೆಪ್ಟೆಂಬರ್ 22 ರಂದು ಸುರಿದ ಮಳೆ ಪ್ರಮಾಣ
ಕಲಬುರಗಿ: 151 ಮಿ.ಮೀ
ಕೋಲಾರ: 129 ಮಿ.ಮೀ
ಬೀದರ್: 103 ಮಿ.ಮೀ
ಚಿಕ್ಕಬಳ್ಳಾಪುರ: 96 ಮಿ.ಮೀ
ಚಿಕ್ಕಮಗಳೂರು: 93 ಮಿ.ಮೀ
ಬೆಳಗಾವಿ: 89.5 ಮಿ.ಮೀ
ಬಾಗಲಕೋಟೆ: 83 ಮಿ.ಮೀ
ಚಾಮರಾಜನಗರ: 81.5 ಮಿ.ಮೀ
ಬೆಂಗಳೂರು ಗ್ರಾಮಾಂತರ: 78 ಮಿ.ಮೀ
ಮೈಸೂರು: 78 ಮಿ.ಮೀ
ರಾಯಚೂರು: 68.5 ಮಿ.ಮೀ
ವಿಜಯಪುರ: 59.5 ಮಿ.ಮೀ
ಹಾಸನ: 56 ಮಿ.ಮೀ
ಮಂಡ್ಯ: 55.5 ಮಿ.ಮೀ
ತುಮಕೂರು: 53.5 ಮಿ.ಮೀ
ದಕ್ಷಿಣ ಕನ್ನಡ: 51.5 ಮಿ.ಮೀ
ಯಾದಗಿರಿ: 47.5 ಮಿ.ಮೀ
ಕೊಡಗು: 45.5 ಮಿ.ಮೀ
ರಾಮನಗರ: 39.5 ಮಿ.ಮೀ
ಉಡುಪಿ: 36.5 ಮಿ.ಮೀ
ಬೆಂಗಳೂರು ನಗರ: 31 ಮಿ.ಮೀ

ಅತಿ ಹೆಚ್ಚು ಮಳೆ ಸುರಿದ ಪ್ರದೇಶಗಳು
ಸೋಂತ್, ಕಲಬುರಗಿ: 151 ಮಿ.ಮೀ
ಕಿನ್ನಿಸುಲ್ತಾನ್, ಕಲಬುರಗಿ: 140.5 ಮಿ.ಮೀ
ಅಮ್ಮನಲ್ಲೂರು, ಕೋಲಾರ: 129 ಮಿ.ಮೀ
ರುದ್ರವಾಡಿ, ಕಲಬುರಗಿ: 105 ಮಿ.ಮೀ
ಹೊದ್ಲೂರು, ಕಲಬುರಗಿ: 105 ಮಿ.ಮೀ
ದೇಶದಾದ್ಯಂತ ಸುರಿಯಲಿದೆ ಮಳೆ
ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ ಮತ್ತು ಬಿಹಾರದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಸಾಕಷ್ಟು ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ತೆಲಂಗಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.












Click it and Unblock the Notifications