ರಾಜ್ಯದಲ್ಲಿ ಇನ್ನು ಎರಡು ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಮೇ.28: ರಾಜ್ಯದಲ್ಲಿ ಇನ್ನು ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಗಳವರೆಗೂ ಕರಾವಳಿ ಮತ್ತು ದಕ್ಷಿಣ ಒಳನಾಡು ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಪುಟ್ಣಣ್ಣ ಹೇಳಿದ್ದಾರೆ.
ಮೇ. 28 ಬುಧವಾರ ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಚಿಂತಾಮಣಿ(ಚಿಕ್ಕಬಳ್ಳಾಪುರ) 11 ಸೆಂ.ಮೀ; ಕೊರಟಗೆರೆ(ತುಮಕೂರು) 10 ಸೆಂ.ಮೀ; ರಾಯಲಪಡು (ಕೋಲಾರ) ಮಧುಗಿರಿ(ತುಮಕೂರು) 7 ಸೆಂ.ಮೀ ಮಳೆಯಾಗಿದೆ.
ದುಡ್ಡ(ಹಾಸನ) ಬಸರಾಳು, ಮದ್ದೂರು(ಮಂಡ್ಯ) ಹೆಸರಘಟ್ಟ, ಟಿಜಿ ಹಳ್ಳಿ(ಬೆಂಗಳೂರು ನಗರ) ದೇವನಹಳ್ಳಿ( ಬೆಂಗಳೂರು ಗ್ರಾಮಾಂತರ) 5 ಸೆಂಮೀ ಮಳೆಯಾಗಿದೆ.

ರಾಜ್ಯದ ಅನೇಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮುಂಗಾರು ಮಳೆ ಮೇ 20ರಂದು ಅಂಡಮಾನ್ ದ್ವೀಪವನ್ನು ಪ್ರವೇಶಿಸುತ್ತದೆ. ಆದರೆ ಈ ಬಾರಿ ಮೇ 27ಕ್ಕೆ ಪ್ರವೇಶಿಸಲಿದೆ. ಪರಿಣಾಮವಾಗಿ ದೇಶದೆಲ್ಲೆಡೆ ಮೂರು ದಿನ ಮೊದಲೇ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಜೂನ್ 5ರಂದು ಬರಬೇಕಿದ್ದ ಮುಂಗಾರು, ಈ ಬಾರಿ ಮೂರು ದಿನ ಮುಂಚಿತವಾಗಿ ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ.[ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ]













Click it and Unblock the Notifications