ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ, ಆಗುಂಬೆ ಸೇರಿ ರಾಜ್ಯಾದ್ಯಂತ ಧಾರಾಕಾರ ಮಳೆ

By Sachhidananda Acharya
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು ಕಳೆದ 24 ಗಂಟೆಗಳಲ್ಲಿ ಮಡಿಕೇರಿ, ಆಗುಂಬೆಯಲ್ಲಿ ಧಾರಾಕಾರ ಮಳೆಯಾಗಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದ ರಾಜ್ಯ ಹೆದ್ದಾರಿಯ ಕಿರುಸೇತುವೆ ಜಲಾವೃತಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದ ರಾಜ್ಯ ಹೆದ್ದಾರಿಯ ಕಿರುಸೇತುವೆ ಜಲಾವೃತ

ಕಳೆದ 24 ಗಂಟೆಯಲ್ಲಿ ಮಡಿಕೇರಿ ಮತ್ತು ಆಗುಂಬೆಯಲ್ಲಿ ತಲಾ 9 ಸೆಂಟಿ ಮೀಟರ್ ಮಳೆಯಾಗಿದ್ದರೆ, ದಕ್ಷಿಣ ಕನ್ನಡದ ಸುಳ್ಯ, ಉತ್ತರ ಕನ್ನಡದ ಮಂಕಿ, ಯಾದಗಿರಿಯ ಸೈದಾಪುರದಲ್ಲಿ ತಲಾ 7 ಸೆಂಟಿ ಮೀಟರ್ ಮಳೆಯಾಗಿದೆ.

Heavy rainfall in Madikeri, Agumbe and throughout Karnataka

ರಾಜ್ಯದಾದ್ಯಂತ ಮಳೆ ಸುರಿಯುತ್ತಿದ್ದು ದಕ್ಷಿಣ ಕನ್ನಡದ ಪಣಂಬೂರು, ಬಂಟ್ವಾಳ, ಉತ್ತರ ಕನ್ನಡದ ಹೊನ್ನಾವರ, ಕದ್ರ, ಬೀದರ್ ನ ಹುಮ್ನಾಬಾದ್, ಕೊಡಗಿನ ಭಾಗಮಂಡಲದಲ್ಲಿ ತಲಾ 6 ಸೆಂಟಿ ಮೀಟರ್ ಮಳೆಯಾಗಿದೆ.

ನಿರಂತರ ಮಳೆ, ಇಂದು ಮೈಸೂರಿನ 4 ತಾಲ್ಲೂಕು ಶಾಲೆಗಳಿಗೆ ರಜೆನಿರಂತರ ಮಳೆ, ಇಂದು ಮೈಸೂರಿನ 4 ತಾಲ್ಲೂಕು ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡದ ಮುಲ್ಕಿ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಉತ್ತರ ಕನ್ನಡದ ಜಗಲ್ಬೆಟ್ಟುವಿನಲ್ಲಿ ತಲಾ 5 ಸೆಂಟಿ ಮೀಟರ್ ಮಳೆಯಾಗಿದೆ.

ಇದೇ ಅವಧಿಯಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆ, ಪುತ್ತೂರು, ಉಡುಪಿಯ ಕಾರ್ಕಳ, ಕೋಟ, ಉತ್ತರ ಕನ್ನಡದ ಶಿರಾಲಿ, ಗೇರುಸೊಪ್ಪ, ಅಂಕೋಲ, ರಾಯಚೂರಿನ ದೇವದುರ್ಗ, ಲಿಂಗಸುಗೂರು, ಕೊಡಗಿನ ನಾಪೊಕ್ಲು, ಚಿಕ್ಕಮಗಳೂರಿನ ಶೃಂಗೇರಿ, ಕೊಟ್ಟಿಗೆಹಾರ, ಜಯಪುರ, ಮೈಸೂರಿನ ಸರ್ಗುರ್ ನಲ್ಲಿ ತಲಾ ನಾಲ್ಕು ಸೆಂಟಿ ಮೀಟರ್ ಮಳೆ ಸುರಿದಿದೆ.

ಮಳೆಯ ಅಬ್ಬರ, ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವುಮಳೆಯ ಅಬ್ಬರ, ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಇನ್ನು ಬೆಳಗಾವಿಯ ಲೊಂಡಾ, ಕಲಬುರಗಿಯ ಅಫಜಲ್ಪುರ, ಕಲ್ಗಿ, ಚಿಂಚೋಳಿ, ಯೆಡ್ರಾಮಿ, ಕೊಡಗಿನ ಮಾದಾಪುರ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ, ಶಿವಮೊಗ್ಗದ ಲಿಂಗನಮಕ್ಕಿ, ತಾಳಗುಪ್ಪ, ಚಿಕ್ಕಮಗಳೂರಿನ, ಕೊಪ್ಪ, ಬಾಳೆ ಹೊನ್ನೂರು, ಕಳಸಾ, ಮೂಡಿಗೆರೆ, ಕಮ್ಮರಡಿ, ದಕ್ಷಿಣ ಕನ್ನಡದ ಧರ್ಮಸ್ಥಳ, ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಕುಮಟಾ, ಮಂಚಿಕೇರಿ, ವಿಜಯಪುರದ ಕೊಪ್ಪಳ, ವಿಜಯಪುರ, ನಾಗಥಾಣ್, ಬಸವನಬಾಗೇವಾಡಿ, ದೇವರಹಿಪ್ಪರಗಿ, ಬೀದರ್ ನ ಚಿತಗುಪ್ಪ, ಯಾದಗಿರಿಯ ಶೋರಾಪುರ್, ಮೈಸೂರಿನ ಪಿರಿಯಾಪಟ್ಟಣ, ಹುಣಸೂರು, ರಾಮನಗರದ ಮಾಗಡಿಯಲ್ಲಿ ತಲಾ 2-3 ಸೆಂಟಿ ಮೀಟರ್ ಮಳೆಯಾಗಿದೆ.

ಒಟ್ಟಾರೆ ಕರ್ನಾಟಕದ ಕರಾವಳಿ ಭಾಗ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ ಕರ್ನಾಟಕ ಉಳಿದ ಭಾಗಗಳಲ್ಲೂ ಹಗುರವಾಗಿ ಮಳೆಯಾಗುತ್ತಿದೆ.

English summary
Heavy rainfall occurred throughout Karnataka in last 24 hours. Maximum rainfall occurred in Madikeri and Agumbe with 9cm each. And 7cm rainfall observed in Sullia (Dakshina Kannada), Manki (Uttara Kannada) and Saidapur (Yadgir).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X