Heavy Rain: ಮಳೆ.. ಮಳೆ.. ಮುಂದಿನ 1 ವಾರ ಇದೇ ರೀತಿ ಮಳೆ!

ಮಳೆ ಅಬ್ಬರಕ್ಕೆ ಕರ್ನಾಟಕ ಪೂರ್ತಿ ಒದ್ದೆಯಾಗಿ ಹೋಗಿದೆ, ಅದರಲ್ಲೂ ಎಲ್ಲೆಲ್ಲೂ ಮಳೆ ತನ್ನ ಆರ್ಭಟ ತೋರಿಸುತ್ತಿದೆ. ಇದೇ ರೀತಿ ಮುಂದಿನ 1 ವಾರ ಕಾಲ ಭರ್ಜರಿಯಾಗಿ ಇಡೀ ಕರ್ನಾಟಕದಲ್ಲಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಮಳೆಯ ಆರ್ಭಟ ಇರುವ ಜಿಲ್ಲೆಗಳು ಯಾವುವು ಗೊತ್ತಾ? ಮುಂದೆ ಓದಿ.

ಕರ್ನಾಟಕದಲ್ಲಿ ಮುಂಗಾರು ಮಾರುತಗಳು ಮತ್ತಷ್ಟು ತೀವ್ರಗೊಂಡಿವೆ. ಹೀಗಾಗಿ ಮಳೆ ಅಬ್ಬರ ಕೂಡ ಜೋರಾಗಿದೆ. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮತ್ತು ನಿರಂತರ ಮಳೆ ಬೀಳುತ್ತಿದೆ. ಇದೇ ರೀತಿ ಇನ್ನೂ ಹಲವು ದಿನಗಳ ಕಾಲ ಮುಂಗಾರು ಮಳೆ ಆರ್ಭಟ ಇರಲಿದೆ ಎಂಬ ಮುನ್ನೆಚ್ಚರಿಕೆ ನೀಡಲಾಗಿದೆ. ಇದು ರೈತರಿಗೆ ಖುಷಿ ಕೊಟ್ಟು ಕೃಷಿ ಚಟುವಟಿಕೆಗೆ ಮತ್ತಷ್ಟು ಬಲ ನೀಡುತ್ತಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸಿಂಚನ ಆಗಲಿದೆ ಗೊತ್ತಾ? ಮುಂದೆ ಓದಿ.

Heavy Rain Will Continue In Karnataka For Next 7 Days From June 11 Of 2024

ಈ ಜಿಲ್ಲೆಗಳಲ್ಲಿ ಭಾರಿ ಮಳೆ!

ಮುಂಗಾರು ಮಾರುತಗಳು ಕರ್ನಾಟಕ ರಾಜ್ಯಕ್ಕೆ 2024 ರಲ್ಲಿ ಬಹುಬೇಗ ಎಂಟ್ರಿ ಕೊಟ್ಟಿದ್ದಕ್ಕೆ ಮತ್ತಷ್ಟು ಒಳ್ಳೆಯದೇ ಆಗಿದೆ. ಹೀಗಾಗಿ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡದಲ್ಲೂ ಭಾರಿ ಮಳೆ ಬೀಳಲಿದೆ.

ಹಾಗೇ ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಮಳೆ ಅಬ್ಬರ, ಮುಂದಿನ ಕೆಲವೇ ಗಂಟೆಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹೀಗಾಗಿ ಜನ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಜಲಾಶಯಗಳಿಗೆ ಭಾರಿ ನೀರು

ಹೀಗೆ ಮುಂಗಾರು ಮಳೆ ತನ್ನ ಆರ್ಭಟ ತೋರಿಸುತ್ತಿರುವ ಬೆನ್ನಲ್ಲೇ ಕರ್ನಾಟಕದ ಡ್ಯಾಂಗಳಲ್ಲಿ ನೀರು ಕೂಡ ತುಂಬಿ ತುಳುಕುತ್ತಿದೆ. ಇದು ರೈತರಿಗೆ ಭಾರಿ ನೆಮ್ಮದಿ ತಂದಿದೆ. ಅಲ್ಲದೆ ಹೀಗೆ ಮುಂದಿನ ಹಲವು ದಿನಗಳ ಕಾಲ ಮಳೆ ಮುನ್ನೆಚ್ಚರಿಕೆ ನೀಡಿರುವ ಕಾರಣ ಇನ್ನಷ್ಟು ನೀರು ಡ್ಯಾಂ ಅಂದ್ರೆ ಕರ್ನಾಟಕದ ಜಲಾಶಯಗಳಿಗೆ ಹರಿದು ಬರುವ ನಿರೀಕ್ಷೆ ಇದೆ. ಮತ್ತೊಂದ್ಕಡೆ ಕರ್ನಾಟಕದಲ್ಲಿ ಮುಂಗಾರು ಮಳೆಯ ಹೊಡೆತಕ್ಕೆ ಕೆರೆ, ಹಳ್ಳ, ಕೊಳ್ಳಗಳ ಜೊತೆಗೆ ನದಿಯ ಒಡಲು ತುಂಬಿದೆ. ನದಿಗಳು ಮತ್ತೆ ಜೀವ ಕಳೆ ತುಂಬಿಕೊಂಡು ನಳನಳಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+