ಮಳೆ.. ಮಳೆ.. ಕರ್ನಾಟದಲ್ಲಿ ಮಳೆ ಯಾವಾಗ ಬರುತ್ತೆ? ಡ್ಯಾಂಗಳ ಪರಿಸ್ಥಿತಿ ಏನಾಗಿದೆ?

ಬಾರೋ ಬಾರೋ ಮಳೆರಾಯ.. ಹುಯ್ಯೋ ಹುಯ್ಯೋ ಮಳೆರಾಯ.. ಅಂತಾ ಕನ್ನಡಿಗರೆಲ್ಲ ಈಗ ಪದ ಹಾಡುವಂತಾಗಿದೆ. ಯಾಕಂದ್ರೆ ಮಳೆ ಇಲ್ಲದೆ ಕನ್ನಡಿಗರು ನರಳಿ ಹೋಗಿದ್ದಾರೆ. ಒಂದು ಕಡೆ ಕೆರೆ, ಕಟ್ಟೆ, ಡ್ಯಾಂ ಸೇರಿದಂತೆ ನೀರಿನ ಮೂಲಗಳಾದ ನದಿಗಳು ಬತ್ತಿವೆ. ಈ ಸಮಯದಲ್ಲಿ ಒಂದು ಭರ್ಜರಿ ಮಳೆ ಬೀಳಲೇಬೇಕಿದೆ. ಇಲ್ಲದೆ ಇದ್ದರೆ ಕನ್ನಡಿಗರ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಹಾಗಾದರೆ ಕರ್ನಾಟಕದಲ್ಲಿ ಯಾವಾಗ ಮಳೆ ಬೀಳುತ್ತದೆ?

ಮನುಷ್ಯನ ಅತಿಯಾದ ಆಸೆ, ಪ್ರಕೃತಿ ಮೇಲೆ ಮನುಷ್ಯ ನಡೆಸಿದ ನಿರಂತರ ದೌರ್ಜನ್ಯದಿಂದ ಈಗ ಭೂಮಿ ಮಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಮಳೆ ಸರಿಯಾಗಿ ಬರುತ್ತಿಲ್ಲ ಎಂಬುದು ವಿಜ್ಞಾನಿಗಳ ವಾದ. ಇದೆಲ್ಲಾ ಏನೇ ಇರಲಿ, ನಮಗೆ ಮಳೆ ಬರಬೇಕು ಅಷ್ಟೇ ಅಂತಿದ್ದಾರೆ ಜನ. ಒಂದು ಕಡೆ ಮಳೆ ಇಲ್ಲದೆಯೇ ಕರ್ನಾಟಕದ ಡ್ಯಾಂಗಳು ಬತ್ತಿವೆ. ಇನ್ನೇನು ಕೆಲವೇ ದಿನದಲ್ಲಿ ಸಂಪೂರ್ಣವಾಗಿ ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಸಮಯದಲ್ಲೇ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಿದೆ!

Heavy Rain Needed For Karnataka State Immediately

ಕರ್ನಾಟಕದಲ್ಲಿ ಮಳೆಯ ಅಬ್ಬರ ಗ್ಯಾರಂಟಿ!

ಇನ್ನು ಈಗ ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಾರ್ಚ್​ 31 ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆ ಬಿದ್ದಿದೆ. ಇನ್ನೇನು ಕೆಲವೇ ದಿನದಲ್ಲಿ ಈ ಜಿಲ್ಲೆಗಳಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗುವ ನಿರೀಕ್ಷೆ ಇದೆ.

ಕರ್ನಾಟಕ ಡ್ಯಾಂಗಳ ನೀರಿನ ಮಟ್ಟ

1) ಕೆಆರ್‌ಎಸ್ ​ಡ್ಯಾಂ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಇದೀಗ 13.89 ಟಿಎಂಸಿ ನೀರು ಸಂಗ್ರಹ ಇದೆ. ಇನ್ನು ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ​ ಜಲಾಶಯದಲ್ಲಿ 22.13 ಟಿಎಂಸಿ ನೀರು ಇತ್ತು. ಆದರೆ ಈ ವರ್ಷ ಬರದ ಬೇಗೆಯಲ್ಲಿ ಕೆಆರ್‌ಎಸ್ ಬತ್ತಿದ್ದು, ಮುಂದಿನ ದಿನಗಳಲ್ಲಿ ಕಾವೇರಿ ನದಿಗೆ ಭಾರಿ ಪ್ರಮಾಣದ ಮಳೆ ನೀರು ಬರದೇ ಇದ್ದರೆ ನಮ್ಮ ಬೆಂಗಳೂರು ಸೇರಿದಂತೆ ಮೈಸೂರು & ಮಂಡ್ಯಕ್ಕೆ ಭಾರಿ ಸಮಸ್ಯೆಯಾಗಲಿದೆ.

2) ಕಬಿನಿ ಜಲಾಶಯ: ಕಾವೇರಿ ನದಿಗೆ ಕಟ್ಟಿರುವ ಕಬಿನಿ ಜಲಾಶಯ ಕೂಡ ಬತ್ತಿ ಹೋಗುವ ಭಯ ಆವರಿಸಿದೆ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದಾಗಿದೆ. ಆದ್ರೆ ಈಗ ಕೇವಲ 9.70 ಟಿಎಂಸಿ ನೀರು ಸಂಗ್ರಹ ಇದೆ. ಹೀಗಾಗಿ ಜನರು ಚಿಂತೆ ಮಾಡುವಂತಾಗಿದೆ.

3) ಹೇಮಾವತಿ ಡ್ಯಾಂ: ಕಾವೇರಿ ನದಿಯ ಉಪನದಿ, ಹೇಮಾವತಿಗೆ ಕಟ್ಟಿದ ಡ್ಯಾಂ ಹೇಮಾವತಿ ಡ್ಯಾಂ. ಒಟ್ಟಾರೆ 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಡ್ಯಾಂ ಇನ್ನೇನು ಖಾಲಿ ಆಗುತ್ತೆ ಎಂಬ ಹಂತಕ್ಕೆ ತಲುಪಿದೆ. ಇದೀಗ ಕೇವಲ 10.75 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದೆ.

4) ತುಂಗಭದ್ರಾ ಜಲಾಶಯ: ತುಂಗಭದ್ರಾ ಡ್ಯಾಂ ಬರಿದಾಗುತ್ತಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಡ್ಯಾಂ ಬರೀ 5.63 ಟಿಎಂಸಿ ನೀರು ಬಾಕಿ ಇದೆ. ಕಳೆದ ವರ್ಷ ಇದೇ ಸಮಯಕ್ಕೆ 14.21 ಟಿಎಂಸಿ ನೀರು ಇತ್ತು. ಆದರೆ ಈ ವರ್ಷ ಬರದ ಕಾರಣಕ್ಕೆ ಈ ಡ್ಯಾಂಗೆ ನೀರಿನ ಕೊರತೆ ಎದುರಾಗಿದೆ. ಅಲ್ಲದೆ ಜನರು ಕುಡಿಯುವ ನೀರಿಗೂ ಪದಾಡುತ್ತಿದ್ದಾರೆ. ಈ ಪರಿಸ್ಥಿತಿ ಸರಿ ಮಾಡಲು ಈಗ ತಕ್ಷಣಕ್ಕೆ ಒಂದು ದೊಡ್ಡ ಮಳೆ ಬರಲೇಬೇಕಿದೆ.

5) ಆಲಮಟ್ಟಿ ಡ್ಯಾಂ: ಆಲಮಟ್ಟಿ ಡ್ಯಾಂಗೆ ಮಹಾರಾಷ್ಟ್ರ ರಾಜ್ಯದಿಂದಲೇ ನೀರು ಬರಬೇಕಿದೆ. ಜಲಾಶಯದ ಒಟ್ಟಾರೆ ಸಾಮರ್ಥ್ಯ 123 ಟಿಎಂಸಿ ಇದ್ದರೂ, 41 ಟಿಎಂಸಿ ನೀರು ಮಾತ್ರ ಸದ್ಯಕ್ಕೆ ಲಭ್ಯವಿದೆ. ಕಳೆದ ವರ್ಷ ಇದೇ ಸಮಯಕ್ಕೆ 42.93 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಾಗಿತ್ತು. ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ.

ಬಾ ಮಳೆಯೇ ಬಾ..

ಬೇಸಿಗೆ ಸಮಯದಲ್ಲಿ ಭೂಮಿ ಕೊತ ಕೊತ ಕುದಿಯುತ್ತಾ ಇರುತ್ತದೆ. ಯಾಕೆ ಅಂದ್ರೆ, ಈ ಸಮಯಕ್ಕೆ ಭೂಮಿ ಸೂರ್ಯನಿಗೆ ಅತಿ ಸಮೀಪದಲ್ಲಿ ಹಾದು ಹೋಗುತ್ತದೆ. ಮೊದಲೇ ವಾತಾವರಣದಲ್ಲಿ ಭಾರಿ ಬದಲಾವಣೆ ಎದುರಾಗಿ ಜನ ಇದೀಗ ಪರದಾಡುತ್ತಿದ್ದಾರೆ ಪರಿಸ್ಥಿತಿ ಹೀಗಿದ್ದಾಗ ಕಳೆದ ವರ್ಷ ಮಳೆಯೇ ಬೀಳದೆ ಭೀಕರ ಬರ ಎದುರಾಗಿದೆ. ಹೀಗೆ ಎಲ್ಲಾ ಕೈಮೀರಿ ಹೋಗಿರುವಾಗಲೇ ಮಳೆರಾಯ ಒಂದಷ್ಟು ಕರುಣೆ ತೋರಿಸಿದ್ದಾನೆ. ವರುಣನ ಕರುಣೆ ಇದೇ ರೀತಿ ಮುಂದುವರಿದರೆ ಸಾಕಪ್ಪಾ ಅಂತಿದ್ದಾರೆ, ಕನ್ನಡ ನಾಡಿನ ಪ್ರಜೆಗಳು. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರುವಾಗುವ ನಿರೀಕ್ಷೆ ಇದೆ.

ಧಗಧಗ ಬಿಸಿಲಿನ ನಡುವೆ ಮಳೆ!

ಹೌದು ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ, ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಬಿಸಿಲು ಕಾಡುತ್ತಿದೆ. ಹೀಗಿದ್ದಾಗ ಕರ್ನಾಟಕದ ಕೆಲವು ಪ್ರದೇಶದಲ್ಲಿ ಭರ್ಜರಿ ಮಳೆ ಒಂದಷ್ಟು ತಂಪು ತಂಪು ಕೂಲ್ ಕೂಲ್ ಮಾಡಿದೆ.

ಕೊಡಗು ಜಿಲ್ಲೆಯಲ್ಲೂ ಭರ್ಜರಿ ಮಳೆ!

ರಾಜ್ಯದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಮಳೆಯ ಮನ್ಸೂಚನೆ ಇಲ್ಲ ಎನ್ನಲಾಗಿತ್ತು. ಹೀಗಾಗಿ ಒಣ ಹವೆಯ ಕಾಟ ಮುಂದುವರಿಯಲಿದೆ ಎನ್ನಲಾಗುತ್ತಿತ್ತು. ಹಾಗೆಯೇ ಮುಂದಿನ 2 ಅಥವಾ 3 ವಾರ ಇದೇ ವಾತಾರಣ ಇರಲಿದೆ ಎನ್ನಲಾಗುತ್ತಿತ್ತು. ದಕ್ಷಿಣ ಒಳನಾಡಿನ ಕೆಲವು ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಕರ್ನಾಟಕದ ನೆಲದಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಭಯ ಆವರಿಸಿತ್ತು. ಹೀಗಿದ್ದಾಗ ಮಳೆ ಮುನ್ಸೂಚನೆ ಸಿಕ್ಕಿದೆ. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗುವ ನಿರೀಕ್ಷೆ ಇದೆ. ಈಗಾಗಲೇ ಕೊಡಗು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಮಳೆ ಬಿದ್ದು ರಿಲೀಫ್ ಸಿಕ್ಕಂತಾಗಿದೆ.

ಕರ್ನಾಟಕದ ಜನರಿಗೆ ನೀರು ಅನ್ನೋದು ಚಿನ್ನಕ್ಕೆ ಸಮಾನ ಆಗಿದೆ. ದಕ್ಷಿಣ ಕರ್ನಾಟಕದಿಂದ ಹಿಡಿದು, ಉತ್ತರ ಕರ್ನಾಟಕದ ತನಕ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಕರಾವಳಿಯ ಭಾಗದ ತನಕ ಎಲ್ಲೆಲ್ಲೂ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಕೈಮೀರಿ ಹೋದ ಕಾರಣಕ್ಕೆ ಈಗ ಮಳೆ ಬೀಳಲೇಬೇಕು ಎನ್ನುವ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಡ್ಯಾಂಗಳಲ್ಲಿ ಕೂಡ ನೀರು ಖಾಲಿ ಆಗಿ ಜಲಾಶಯಗಳು ಒಣಗಿ ಹೋಗುತ್ತಿವೆ. ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲಿ ಮಳೆ ಬೀಳಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆ ಇನ್ನು ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಕೂಡ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+