ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮಳೆ: 3 ದಿನದಲ್ಲಿ 89ಲಕ್ಷ ನಷ್ಟ ಅನುಭವಿಸಿದ ಕೆಎಸ್‌ಆರ್‌ಟಿಸಿ

By Nayana
|
Google Oneindia Kannada News

Recommended Video

ಮಳೆಯಿಂದ ಕೆ.ಎಸ್.ಆರ್.ಟಿ.ಸಿಗೆ ದೊಡ್ಡ ನಷ್ಟ..! | Oneindia Kannada

ಬೆಂಗಳೂರು, ಆಗಸ್ಟ್ 17: ಕರ್ನಾಟಕ, ಕೇರಳಾದ್ಯಂತ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ, ಅಲ್ಲಲ್ಲಿ ಮರಗಳು ಧರೆಗುರುಳಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ ಇದರಿಂದ ಕೇವಲ ಮೂರು ದಿನಗಳಲ್ಲಿ ಕೆಎಸ್‌ಆರ್‌ಟಿಸಿ 89.3 ಲಕ್ಷ ರೂ. ನಷ್ಟ ಅನುಭವಿಸಿದೆ.

ಮೂರು ದಿನಗಳಿಂದ 706 ಟ್ರಿಪ್‌ಗಳನ್ನು ರದ್ದುಗೊಳಿಸಲಾಗಿದೆ. ಮಂಗಳವಾರ 187 ಟ್ರಿಪ್‌ಗಳು, ಬುಧವಾರ 261 ಟ್ರಿಪ್‌ಗಳು, ಗುರುವಾರ 25 ಟ್ರಿಪ್‌ಗಳು ರದ್ದುಗೊಂಡಿವೆ.ಇದರಿಂದಾಗಿ 20.4 ಲಕ್ಷ, 31 ಲಕ್ಷ, 38 ಲಕ್ಷ ನಷ್ಟ ಉಂಟಾಗಿದೆ.

ಕರಾವಳಿಯಲ್ಲಿ ಮುಂದುವರಿದ ಮಳೆ, ಹವಾಮಾನ ಇಲಾಖೆಯಿಂದ ಎಚ್ಚರಿಕೆ ಕರಾವಳಿಯಲ್ಲಿ ಮುಂದುವರಿದ ಮಳೆ, ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಕೆಎಸ್‌ಆರ್‌ಟಿಸಿಯು ಕೇರಳ ಮಾರ್ಗದ ಎಲ್ಲಾ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಕೆಲವೊಂದು ಬಸ್‌ಗಳು ತ್ರಿಸುರ್‌, ಪಾಲಕ್ಕಡ್‌, ಊಟಿ, ತಮಿಳುನಾಡಿನಲ್ಲಿ ಹಿಂದೆ ಬರಲಾಗದೆ ರಸ್ತೆಗಳಲ್ಲಿ ಕಂದಕ ಉಂಟಾಗಿರುವುದು, ಗುಡ್ಡ ಕುಸಿದಿರುವುದು, ಮರ ಬಿದ್ದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಅಲ್ಲಿಯೇ ನಿಂತಿವೆ.

Heavy rain: KSRTC suffers Rs.89Lakh loss in 3 days

ಚೆನ್ನೈನಲ್ಲಿ ಪ್ರವಾಹ ಬಂದಿರುವ ಕಾರಣ ಕರ್ನಾಟಕದಿಂದ 5ರಿಂದ 10 ಬಸ್‌ಗಳು ಕಳುಹಿಸಲಾಗಿತ್ತು, ಆದರೆ ತ್ರಿಸುರ್‌, ಪಾಲಕ್ಕಡ್‌ ನಡುವೆ ಈ ಬಸ್‌ಗಳು ಸಿಲುಕಿಕೊಂಡಿವೆ.ಮಂಗಳೂರು ಮಾರ್ಗದಲ್ಲಿ ಇಷ್ಟು ದಿನ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದು ಇದೇ ಮೊದಲ ಬಾರಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆ, ಪ್ರವಾಹ: ವಿವಿಧೆಡೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದುಭಾರಿ ಮಳೆ, ಪ್ರವಾಹ: ವಿವಿಧೆಡೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದು

ಕೇರಳ ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಪರಿಸ್ಥಿತಿ ನೋಡಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ. ಕೇರಳ ಬಸ್‌ಗಳು ಬೆಂಗಳೂರು ಕೇರಳ ನಡುವಿನ ಸಂಚಾರವನ್ನು ಗುರುವಾರದಿಂದ ಸ್ಥಗಿತಗೊಳಿಸಲಾಗಿದೆ. ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೆಜೆಸ್ಟಿಕ್‌ನಿಂದ ಧರ್ಮಸ್ಥಳ, ಉಡುಪಿ, ಪುತ್ತೂರು, ಕುಕ್ಕೆ ಸುಬ್ರಹ್ಮಣ್ಯ, ಕುಂದಾಪುರ ತೆರಳುತ್ತಿದ್ದ 74 ಬಸ್‌ ಸಂಚಾರವನ್ನು ರದ್ದುಗೊಳಿಸಲಾಗಿದೆ.

English summary
Heavy rain and landslides in Karnataka and Kerala are burning a hole in the Karnataka State Road Transport Corporation (KSRTC)’s revenue.Sources said KSRTC incurred a loss of Rs 89.3 lakh due to cancellation of 706 schedules in the past three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X