Rain Alert: ಮಳೆ ಮಳೆ ಕರ್ನಾಟಕದಲ್ಲಿ ಶುರುವಾಯ್ತು ಭರ್ಜರಿ ಮಳೆ!

ಮಳೆಗಾಗಿ ಎಲ್ಲರೂ ಕಾದು ಕುಳಿತಿದ್ದಾರೆ, ಯಾಕಂದ್ರೆ ಎಲ್ಲೆಲ್ಲೂ ಮಳೆಗಾಗಿ ಹಾಹಾಕಾರವು ಶುರುವಾಗಿದೆ. ಕೆರೆ & ಕಟ್ಟೆ ಸೇರಿದಂತೆ ನದಿಗಳು ಸಂಪೂರ್ಣ ಒಣಗಿ ಹೋಗಿವೆ. ಹೀಗಾಗಿ, ಸದ್ಯಕ್ಕೆ ಮಳೆ ಬೀಳದೆ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂಬ ಭಯ ಕಾಡುತ್ತಿದೆ. ಇಂತಹ ಹೊತ್ತಲ್ಲೇ ಮಳೆಯ ಆರ್ಭಟವೂ ಶುರುವಾಗಿದೆ! ಕರ್ನಾಟಕದ ಮಳೆ ಸುದ್ದಿ ಬಗ್ಗೆ ತಿಳಿಯಲು ಮುಂದೆ ಓದಿ.

2023 ಕರ್ನಾಟಕದ ಪಾಲಿಗೆ ದುರದೃಷ್ಟಕರ ವರ್ಷ. ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿತ್ತು. ಕರ್ನಾಟಕ ಸೇರಿ ಭಾಗಶಃ ಇಡೀ ದೇಶ ಸಾಕಷ್ಟು ಮಳೆ ಕೊರತೆ ಎದುರಿಸಿ ಒದ್ದಾಡಿದೆ. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ ಹಲವಾರು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಮಳೆಯ ವಿಚಾರವಾಗಿ ಏಪ್ರಿಲ್ ಮೊದಲ ವಾರದಲ್ಲಿ ಗುಡ್ ನ್ಯೂಸ್ ಸಿಗಲಿದೆ, ಭರ್ಜರಿ ಮಳೆಯೂ ಬೀಳಲಿದೆಯಂತೆ!

Heavy Rain Is Possible In Karnataka After 1st Of April 2024

ಕರ್ನಾಟಕದಲ್ಲಿ ಮಳೆ ಗ್ಯಾರಂಟಿ!

ಮನುಷ್ಯನ ಅತಿಯಾದ ಆಸೆ ಪ್ರಕೃತಿ ಮೇಲೆ ಮನುಷ್ಯ ನಡೆಸಿದ ನಿರಂತರವಾಗಿ ದೌರ್ಜನ್ಯದಿಂದ ಭೂಮಿ ಮಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಕಾರಣಕ್ಕೆ, ಮಳೆ ಸರಿಯಾಗಿ ಬರುತ್ತಿಲ್ಲ ಎಂಬುದು ವಿಜ್ಞಾನಿಗಳ ವಾದ. ಇದೆಲ್ಲಾ ಏನೇ ಇರಲಿ ನಮಗೆ ಮಳೆ ಬೇಕು ಅಷ್ಟೇ ಅಂತಿದ್ದಾರೆ ಜನ. ಒಂದ್ಕಡೆ ಮಳೆ ಇಲ್ಲದೆಯೇ ಕರ್ನಾಟಕದ ಡ್ಯಾಂಗಳು ಬತ್ತಿವೆ. ಇನ್ನೇನು ಕೆಲವೇ ದಿನದಲ್ಲಿ ಸಂಪೂರ್ಣ ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಸಮಯದಲ್ಲೇ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಿದೆ! ಅದು ಮಳೆಯ ವಿಚಾರವಾಗಿ.

ಎಲ್ಲೆಲ್ಲಿ ಮಳೆಯ ಅಬ್ಬರ ಶುರು?

ಹವಾಮಾನ ತಜ್ಞರು ನೀಡಿರುವ ಮಾಹಿತಿ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾಲು ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆ ಬಿದ್ದಿದೆ. ಹಾಗೇ ನಿನ್ನೆ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಿದ್ದಿದ್ದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಕೆಲವು ಕಡೆ ಭಾರಿ ಮಳೆ ಶುರುವಾಗಿದೆ.

ಉತ್ತರ ಭಾಗದಲ್ಲಿ ಭಾರಿ ಮಳೆ

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಏಪ್ರಿಲ್ ಮೊದಲ ವಾರದ ಆರಂಭದಲ್ಲೇ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಕೆಲ ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಮೇತ ವ್ಯಾಪಕವಾದ ಮಳೆಯು ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹಾಗೇ ಭಾರಿ ಹಿಮಪಾತದ ಎಚ್ಚರಿಕೆ ಕೂಡ ನೀಡಲಾಗಿದೆ. ಈ ಮೂಲಕ ಉತ್ತರ ಭಾರತದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಲಿದೆ. ಕರ್ನಾಟಕದಲ್ಲಿ ಕೂಡ ಇನ್ನೇನು ಸಿಹಿಸುದ್ದಿ ಸಿಗಲಿದೆ.

ಕೊಡಗು ಜಿಲ್ಲೆಯಲ್ಲೂ ಭರ್ಜರಿ ಮಳೆ!

ರಾಜ್ಯದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಮಳೆಯ ಮನ್ಸೂಚನೆ ಇಲ್ಲ ಎನ್ನಲಾಗಿತ್ತು. ಹೀಗಾಗಿ ಒಣ ಹವೆಯ ಕಾಟ ಮುಂದುವರಿಯಲಿದೆ ಎನ್ನಲಾಗುತ್ತಿತ್ತು. ಹಾಗೆಯೇ ಮುಂದಿನ 2 ಅಥವಾ 3 ವಾರ ಇದೇ ವಾತಾರಣ ಇರಲಿದೆ ಎನ್ನಲಾಗುತ್ತಿತ್ತು. ದಕ್ಷಿಣ ಒಳನಾಡಿನ ಕೆಲವು ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಕರ್ನಾಟಕದ ನೆಲದಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಭಯ ಆವರಿಸಿತ್ತು. ಹೀಗಿದ್ದಾಗ ಮಳೆ ಮುನ್ಸೂಚನೆ ಸಿಕ್ಕಿದೆ. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗುವ ನಿರೀಕ್ಷೆ ಇದೆ. ಹೀಗಾಗಿ ಜನರು ಕೂಡ ಆಕಾಶ ನೋಡುತ್ತಾ ಕೂರುವಂತಾಗಿದೆ.

ಕರುಣೆ ತೋರಿಸೋ ಮಳೆರಾಯ...

ಮಳೆಯೇ ಇಲ್ಲ, ಮಳೆ ಬಾರದೆ ಭೂಮಿ ಒಣಗಿ ಹೋಗಿದೆ. ಅದ್ರಲ್ಲೂ ನಮ್ಮ ಬೆಂಗಳೂರು ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿಗೆ ತಲುಪಿದೆ. ಹೀಗಿದ್ದಾಗ ಮಳೆ ಬರಲೇಬೇಕಿದೆ ಇಲ್ಲವಾದರೆ ಪರಿಸ್ಥಿತಿ ಕೈಮೀರಿ ಹೋಗುವ ಲಕ್ಷಣ ಕಾಣುತ್ತಿದ್ದು. ಇಂತಹ ಸಮಯದಲ್ಲೇ ಜನರಿಗೆ ಗುಡ್ ನ್ಯೂಸ್ ಸಿಗುತ್ತಿದೆ. ಶೀಘ್ರದಲ್ಲೇ ಮಳೆ ಬರಲಿದೆ ಅಂತಿದ್ದಾರೆ ಹವಾಮಾನ ಇಲಾಖೆ ತಜ್ಞರು. ಅಲ್ಲದೆ ಏಪ್ರಿಲ್‌ನಲ್ಲಿ ಈ ಮಾಹಿತಿ ನಿಜವಾಗದೆ ಹೋದರೆ, ಅಂದ್ರೆ ಮಳೆ ಬಾರದೆ ಹೋದರೆ ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಲಿದೆ. ಈಗಾಗಲೇ ಬಹುತೇಕ ನೀರಿನ ಮೂಲಗಳು ಒಣಗಿ ಹೋಗಿದ್ದು, ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ ಜನ. ಹೀಗಾಗಿ ವರುಣ ದೇವ ಒಂದಷ್ಟು ಕರುಣೆ ತೋರಿಸಬೇಕಿದೆ.

ಮಳೆ ನೀರು ಸಂಗ್ರಹ ಮಾಡಿ!

ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ದರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳು ಬಾಕಿ ಇದೆ. ಹಾಗಾದರೆ ಮಳೆ ನೀರು ಸಂಗ್ರಹ ಹೇಗೆ ಮಾಡುವುದು? ಬನ್ನಿ ತಿಳಿಯೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+