Heavy Rain: ಮಳೆ.. ಮಳೆ.. ಮುಂದಿನ 1 ವಾರ ಭೀಕರ ಮಳೆ!

ಎಲ್ಲೆಲ್ಲೂ ಮಳೆಯ ಆರ್ಭಟ ಬಲು ಜೋರಾಗಿದೆ, ಭೂಮಿ ಒದ್ದೆ ಆದ ಕಾರಣಕ್ಕೆ ಅನ್ನದಾತನು ಕೂಡ ಭೂಮಿ ಉಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ಕರ್ನಾಟಕದ ಮೂಲೆ ಮೂಲೆಗೂ ಈ ಬಾರಿ ಭರ್ಜರಿ ಮಳೆ ಬಂದಿದೆ. ಹೀಗಿದ್ದಾಗಲೇ ಮತ್ತೊಂದು ಭರ್ಜರಿ ಸುದ್ದಿ ಸಿಗುತ್ತಿದ್ದು, ಈ ವಾರ ಮಾತ್ರವಲ್ಲ ಮುಂದಿನ ವಾರದಲ್ಲೂ ಭರ್ಜರಿ ಮಳೆ ಬರೋದು ಗ್ಯಾರಂಟಿ ಆಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗೆ ಮಳೆಯ ಸಿಂಚ ಆಗಲಿದೆ? ಮುಂದೆ ಓದಿ.

ಮಳೆ ಮುನ್ಸೂಚನೆ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಜಿಲ್ಲೆ, ಚಾಮರಾಜನಗರ, ಮಂಗಳೂರು, ಉತ್ತರ ಕನ್ನಡ ಜಿಲ್ಲೆ, ತುಮಕೂರು ಸೇರಿ ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಗೆ ಭರ್ಜರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ ತೋರಿಸಲಿದೆ, ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರ, ಕಲಬುರಗಿ, ರಾಯಚೂರು ಸೇರಿದಂತೆ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಆರ್ಭಟಿಸುವುದು ಗ್ಯಾರಂಟಿ ಆಗಿದೆ.

Heavy Rain Is Expected In Karnataka For Next 1 Week From June 14th Of 2024

ಬೆಂಗಳೂರಿನಲ್ಲಿ ಭರ್ಜರಿ ಮಳೆ!

ನಮ್ಮ ಬೆಂಗಳೂರಲ್ಲಿ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಮಳೆ ಬರುತ್ತಿದ್ದು, ಹೀಗೆಯೇ ಮುಂದಿನ 1 ವಾರ ಪೂರ್ತಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆಯ ನೀಡಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಅದರಲ್ಲೂ ಬೆಂಗಳೂರಿನಲ್ಲಿ ನಿನ್ನೆ ವಿಪರೀತ ಮಳೆ ಸುರಿದಿದ್ದು, ಮುಂದಿನ 24 ಗಂಟೆ ಅವಧಿಯಲ್ಲಿ ಮತ್ತಷ್ಟು ಮಳೆ ಬರುವ ಕುರಿತು ಇದೀಗ ವಾರ್ನಿಂಗ್ ಕೊಡಲಾಗಿದೆ. ಅಲ್ಲದೆ ಈ ಕುರಿತಾಗಿ ಎಚ್ಚರಿಕೆ ವಹಿಸಲು ಕೂಡ ಸೂಚಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಚಿಂತೆಗೆ ಜಾರಿದ್ದ ಕನ್ನಡಿಗರು!

ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ, ಕನ್ನಡಿಗರ ನಾಡಿನ ರೈತರಿಗೆ ಭರ್ಜರಿ ಸುದ್ದಿ ಈಗ ಸಿಕ್ಕಿದೆ. ಮುಂಗಾರು ಮಳೆ ಈ ರೀತಿ ಬೇಗ ಎಂಟ್ರಿ ಕೊಟ್ಟು, ಭರ್ಜರಿ ಮಳೆ ಸುರಿಸುತ್ತಿದೆ. ಹೀಗಾಗಿ ಕನ್ನಡ ನಾಡಿನಲ್ಲಿ ರೈತರು ಸೇರಿದಂತೆ ಪ್ರತಿಯೊಬ್ಬ ಪ್ರಜೆ ಕೂಡ ಈ ರೀತಿ ಭರ್ಜರಿ ಮಳೆ ನೋಡಿ ಖುಷಿಯಾಗಿದ್ದಾನೆ. ಇದೇ ರೀತಿ ಮುಂದಿನ ಹಲವು ದಿನಗಳ ಕಾಲ ಮಳೆ ಅಬ್ಬರಿಸಲಿದೆ ಎಂದು ವಾರ್ನಿಂಗ್ ಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ.? ಅನ್ನೊದನ್ನ ಕಾದು ನೋಡಬೇಕಿದೆ. ಹಾಗೇ ಬಿತ್ತನೆ ಕೂಡ ಕರ್ನಾಟಕದಲ್ಲಿ ಭರ್ಜರಿಯಾಗಿಯೇ ಸಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+