ರಾಜ್ಯದ ಕೆಲವೆಡೆ ಭಾರೀ ಮಳೆ; ಸಿಡಿಲು ಬಡಿದು ಇಬ್ಬರು ಸಾವು

ಬೆಂಗಳೂರು, ಏಪ್ರಿಲ್‌ 12: ಕಳೆದ ವರ್ಷ ಮಳೆಯಾಗದ ಹಿನ್ನೆಲೆ ರಾಜ್ಯದಲ್ಲಿ ಬೀಕರ ಬರಗಾಲಿ ಉಂಟಾಗಿದ್ದು, ನೀರುಗಳ ಸಹ ರಾಜ್ಯದಲ್ಲಿ ಹಾಹಾಕಾರ ಸೃಷ್ಟಿಯಾಗಿತ್ತು. ಇದೀಗ ರಾಜ್ಯದಲ್ಲಿ ಕೆಲ ದಿನಗಳಿಂದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಭೀಕರ ಬರಕ್ಕೆ ತತ್ತರಿಸಿದ್ದ ಜನ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು, ಕರುನಾಡ ಮಂದಿ ಮಳೆ ಕಾಣದೇ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಕೊಂಚ ತಂಪೆರೆದಿದ್ದಾರೆ. ರಾಜ್ಯದ ವಿಜಯಪುರ, ಚಿಕ್ಕಮಗಳೂರು, ಗದಗ, ಕಲಬುರಗಿ, ಬೆಳಗಾವಿ, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

Heavy Rain In Some Parts Of The Karnataka Two Death Due To Lightning Strike In Vijayapura

ಇತ್ತ ರಾಜ್ಯದಲ್ಲಿ ಮಳೆ ಆರಂಭವಾಗುತ್ತಿದ್ದರಂತೆ ಗುಡುಗು-ಸಿಡಿಲಿನ ಆರ್ಭಟ ಕೂಡ ಜೋರಾಗಿದ್ದು, ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಒಂದೇ ದಿನ ಸಿಡಿಲು ಬಡಿದು ಬಾಲಕ ಸೇರಿ ಇಬ್ಬರು ಬಲಿಯಾಗಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ವೇಳೆ ಸಿಡಿಲು ಬಡಿದು 45 ವರ್ಷದ ಸೋಮಶೇಖರ್ ಪಟ್ಟಣಶೆಟ್ಟಿ ಎಂಬವರು ಮೃತ ಪಟ್ಟಿದ್ದಾರೆ.

ವಿಜಯಪುರದ ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಬೀರಪ್ಪ ನಿಂಗಪ್ಪ (16) ಮೃತ ರ್ದುದೈವಿಯಾಗಿದ್ದು, ಜಮೀನಿನಲ್ಲಿ ಕೆಲಸ ಮಾಡಲು ಹೋದ ವೇಳೆ ದುರಂತ ಸಂಭವಿಸಿದೆ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇನ್ನೂ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿಯೂ ಸಹ ಗುಡುಗು ಸಹಿತ ಮಳೆಯಾಗಿದ್ದು, ಕೆರೆಮಕ್ಕಿ, ಬೈಗೂರು, ಹಂಗರವಳ್ಳಿ, ಆವುತಿ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯಾಗಿದೆ. ಅಲ್ಲದೇ ಶಿವಮೊಗ್ಗದಲ್ಲಿ ಮಳೆಗೆ ರಸ್ತೆಯಲ್ಲಿ ಸ್ಕಿಡ್ ಆಗಿ 15ಕ್ಕೂ ಹೆಚ್ಚು ವಾಹನಗಳು ಬಿದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+