Rain Alert: ಬೆಂಗಳೂರಿನಲ್ಲಿ ಮಳೆ, ಜಗತ್ತಿನಾದ್ಯಂತ ಇದೇ ದೊಡ್ಡ ಸುದ್ದಿ!
ಕನ್ನಡಿಗರ ರಾಜಧಾನಿ ಬೆಂಗಳೂರು ಕಂಡರೆ ಅದೆಷ್ಟೋ ಜನರಿಗೆ ಇನ್ನಿಲ್ಲದ ಹೊಟ್ಟೆ ಉರಿ & ತಡೆಯಲಾಗದ ಅಸೂಯೆ. ಯಾಕಂದ್ರೆ ನಮ್ಮ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಐಟಿ ತವರು ಅನ್ನೋ ಕೀರ್ತಿ ಪಡೆದಿದ್ದು, ಬೆಂಗಳೂರಿನ ಕುರಿತು ಇಡೀ ಜಗತ್ತೇ ಹೆಮ್ಮೆ ವ್ಯಕ್ತಪಡಿಸುತ್ತದೆ. ಹೀಗಿದ್ದರೂ ಬೆಂಗಳೂರು ಬಗ್ಗೆ ಕಿರಿಕ್ ಮಾಡುವ ಕೆಲವು ಕೈಲಾಗದವರು ಇದ್ದಾರೆ, ಇಂತಹ ಸಮಯದಲ್ಲೇ ಬೆಂಗಳೂರಿನಲ್ಲಿ ಮಳೆ ಆಗಿರುವ ವಿಚಾರದ ಬಗ್ಗೆ ಕಿಚ್ಚು ಹೊತ್ತಿಕೊಂಡಿದೆ.
ನಮ್ಮ ಬೆಂಗಳೂರಿನಲ್ಲಿ ಇಷ್ಟು ಜೋರಾಗಿ ಮಳೆ ಬರುತ್ತೆ ಅಂತಾ ಯಾರೂ ಕೂಡ ಕನಸಲ್ಲೂ ಊಹಿಸಿರಲಿಲ್ಲ, ಅಷ್ಟು ಜೋರಾಗಿ ಬೆಂಗಳೂರಲ್ಲಿ ಮಳೆ ಬಂದು ಅವಾಂತರವೇ ಎದುರಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬಂದ ಕಾರಣಕ್ಕೆ 2011ರ ದಾಖಲೆ ಮುರಿದಿದ್ದು, ಇದೀಗ ಹತ್ತಾರು ಏರಿಯಾಗಳ ಜನರು ಮನೆಗೆ ನೀರು ನುಗ್ಗಿರುವ ಕಾರಣಕ್ಕೆ ಪರದಾಡ್ತಿದ್ದಾರೆ.

ಮಳೆ.. ಮಳೆ.. ಮಳೆ.. ಬೆಂಗಳೂರಿನಲ್ಲಿ ಇದೀಗ ಪ್ರಕೃತಿ ಮುನಿಸಿಕೊಂಡು ಮಳೆ ಸುರಿದಿದೆ. ಇನ್ನು 2011ರ ಸಮಯದಲ್ಲಿ ಈ ರೀತಿ ಮೇ ತಿಂಗಳಲ್ಲಿ ಭರ್ಜರಿ ಮಳೆ ಸುರಿದಿತ್ತು. ಆದರೆ ಈ ಬಾರಿ ಆ ದಾಖಲೆ ಮುರಿದು ಹೋಗಿದ್ದು, ಭಾರಿ ಮಳೆಗೆ ಜನರು ನರಳಾಡುತ್ತಿದ್ದಾರೆ. ಆದರೆ ಈ ವಿಚಾರ ಮುಂದೆ ಇಟ್ಟುಕೊಂಡು ಕೆಲವರು ಬೆಂಗಳೂರಿನ ಬಗ್ಗೆ ಅವಹೇಳನ ಮಾಡ್ತಿದ್ದಾರೆ.
ಬೆಂಗಳೂರು ನಮ್ಮ ಹೆಮ್ಮೆ ಎಂದ ಕನ್ನಡಿಗರು!
ಅಂದಹಾಗೆ ಯಾವುದೇ ನಗರದಲ್ಲಿ ಮಳೆ ಬಂದರೂ ತೊಯ್ದು ತೊಪ್ಪೆಯಾಗಿ ಹೋಗೋದು ಗ್ಯಾರಂಟಿ. ಅಮೆರಿಕದ ನ್ಯೂಯಾರ್ಕ್ ನಗರವೇ ಆಗಿರಲಿ ಅಥವಾ ಫ್ರಾನ್ಸ್‌ನ ಪ್ಯಾರಿಸ್ ನಗರವೇ ಆಗಿರಲಿ. ಪ್ರಕೃತಿಯ ಮುಂದೆ ಮನುಷ್ಯರ ಆಟ ನಡೆಯುವುದೇ ಇಲ್ಲ. ಆದರೆ ಈಗ ಬೇಕು, ಬೇಕು ಅಂತಲೇ ಬೆಂಗಳೂರಿನ ಬಗ್ಗೆ ಕೆಲವರು ಮಾತನಾಡುತ್ತಿರುವ ಆರೋಪ ಕನ್ನಡಿಗರಲ್ಲಿ ಕೋಪ ಹೆಚ್ಚು ಮಾಡುತ್ತಿದೆ. ಹಾಗೇ ದೆಹಲಿ, ಮುಂಬೈ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಮಳೆ ಬಂದಾಗ ಏನೆಲ್ಲಾ ಆಗಿತ್ತು? ಅನ್ನೋದನ್ನ ಕನ್ನಡಿಗರು ಇದೀಗ ಉದಾಹರಣೆ ನೀಡುತ್ತಾ, ತಿರುಗೇಟು ಕೊಡುತ್ತಿದ್ದಾರೆ.












Click it and Unblock the Notifications